ಪ್ರೊ ಲೀಗ್ ಹಾಕಿ: ಆಸ್ಪ್ರೇಲಿಯಾ ವಿರುದ್ಧ ಭಾರತಕ್ಕೆ 3-4ರ ಸೋಲು

Published : Feb 22, 2020, 01:12 PM IST
ಪ್ರೊ ಲೀಗ್ ಹಾಕಿ: ಆಸ್ಪ್ರೇಲಿಯಾ ವಿರುದ್ಧ ಭಾರತಕ್ಕೆ 3-4ರ ಸೋಲು

ಸಾರಾಂಶ

ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಭಾರತ ತಂಡವು ರೋಚಕ ಸೋಲು ಕಂಡಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...

ಭುವನೇಶ್ವರ(ಫೆ.22): ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ ಟೂರ್ನಿಯ ಆಸ್ಪ್ರೇಲಿಯಾ ವಿರುದ್ಧದ ಮೊದಲ ಚರಣದ ಪಂದ್ಯದಲ್ಲಿ ಭಾರತ 3-4 ಗೋಲುಗಳ ವೀರೋಚಿತ ಸೋಲು ಅನುಭವಿಸಿತು. 

ಪ್ರೊ ಲೀಗ್‌ ಹಾಕಿ: ಭಾರತಕ್ಕೆ ಆಸ್ಪ್ರೇಲಿಯಾ ಸವಾಲು

ಶುಕ್ರವಾರ ಇಲ್ಲಿನ ಕಳಿಂಗಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಹಾಲಿ ಚಾಂಪಿಯನ್‌, ವಿಶ್ವ ನಂ.2 ಆಸ್ಪ್ರೇಲಿಯಾ ವಿರುದ್ಧ ಭಾರತ ಹೋರಾಟ ಪ್ರದರ್ಶಿಸಿದರೂ ಗೆಲ್ಲಲು ಸಾಧ್ಯವಾಗಲಿಲ್ಲ. ಭಾರತ ಪರ ರಾಜ್‌ಕುಮಾರ್‌ ಪಾಲ್‌ (36ನೇ, 47ನೇ ನಿ.,) ಹಾಗೂ ರೂಪಿಂದರ್‌ ಪಾಲ್‌ ಸಿಂಗ್‌ (52ನೇ ನಿ.) ಗೋಲು ಬಾರಿಸಿದರು. 

ಏಷ್ಯನ್‌ ಕುಸ್ತಿ: ಸಾಕ್ಷಿಗೆ ಬೆಳ್ಳಿ, ವಿನೇಶ್‌ಗೆ ಕಂಚು

ಇನ್ನು ಆಸ್ಪ್ರೇಲಿಯಾ ಪರ ಡಲ್ಯಾನ್‌ (6ನೇ ನಿ.), ಟಾಮ್‌ ವಿಕ್‌ಹ್ಯಾಮ್‌ (18ನೇ ನಿ.), ಲಾಚ್ಲಾನ್‌ ಶಾರ್ಪ್ (41ನೇ ನಿ.) ಹಾಗೂ ಜೇಕಬ್‌ ಆ್ಯಂಡರ್‌ಸನ್‌ (42ನೇ ನಿ.) ಗೋಲು ಗಳಿಸಿದರು. ತಂಡಕ್ಕಿದು ಟೂರ್ನಿಯಲ್ಲಿ ಸತತ 2ನೇ ಸೋಲಾಗಿದೆ. ಮೊದಲ ಮುಖಾಮುಖಿಯಲ್ಲಿ ನೆದರ್‌ಲೆಂಡ್ಸ್‌ ವಿರುದ್ಧ ಗೆದ್ದಿದ್ದ ಭಾರತ, ಬೆಲ್ಜಿಯಂ ವಿರುದ್ಧ ಮೊದಲ ಪಂದ್ಯ ಗೆದ್ದು, 2ನೇ ಚರಣದಲ್ಲಿ ಸೋಲುಂಡಿತ್ತು. ಆಸ್ಪ್ರೇಲಿಯಾ ವಿರುದ್ಧದ 2ನೇ ಚರಣದ ಪಂದ್ಯ ಶನಿವಾರ ನಡೆಯಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

RCB ಒಡತಿ ಅನನ್ಯಾ ಬಿರ್ಲಾ ಮಹತ್ವದ ಹೆಜ್ಜೆ,₹3000 ಕೋಟಿ IPO ಮೂಲಕ ಷೇರು ಮಾರ್ಕೆಟ್ ಪ್ರವೇಶಕ್ಕೆ ರೆಡಿ
ಟೀಂ ಇಂಡಿಯಾಗೆ ಮೊದಲ ದಿನವೇ ಆಘಾತ.. ಕೆಎಲ್‌ ರಾಹುಲ್‌ಗೆ ಗಾಯ, ತಂಡದಲ್ಲಿ ಭಾರೀ ಆತಂಕ