ಕೊಹ್ಲಿಗೆ ಕೋಚ್ ರವಿ ಶಾಸ್ತ್ರಿ ವಿಶ್; ಮತ್ತೆ ಟ್ರೋಲ್ ಮಾಡಿದ ಫ್ಯಾನ್ಸ್!

Published : Nov 05, 2019, 05:23 PM IST
ಕೊಹ್ಲಿಗೆ ಕೋಚ್ ರವಿ ಶಾಸ್ತ್ರಿ ವಿಶ್; ಮತ್ತೆ ಟ್ರೋಲ್ ಮಾಡಿದ ಫ್ಯಾನ್ಸ್!

ಸಾರಾಂಶ

ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಸುಮ್ಮನಿರುವುದೇ ಒಳಿತು. ಕಾರಣ ಏನೇ ಹೇಳಿದರೂ ಟ್ರೋಲ್ ಆಗುವುದು ಖಚಿತ. ಇದೀಗ ವಿರಾಟ್ ಕೊಹ್ಲಿ ಹುಟ್ಟು ಹಬ್ಬಕ್ಕೆ ಶುಭಕೋರಿದ ಶಾಸ್ತ್ರಿಯನ್ನು ಮತ್ತೆ ಟ್ರೋಲ್ ಮಾಡಲಾಗಿದೆ.  

ರಾಜ್‌ಕೋಟ್ (ನ.05): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹುಟ್ಟು ಹಬ್ಬಕ್ಕೆ , ಕೋಚ್ ರವಿ ಶಾಸ್ತ್ರಿ ಶುಭಕೋರಿದ್ದಾರೆ. ಬಾಂಗ್ಲಾದೇಶ ವಿರುದ್ದದ ಟಿ20 ಸರಣಿಯಲ್ಲಿ ಆರಂಭಿಕ ಆಘಾತ ಅನುಭವಿಸಿರು ಶಾಸ್ತ್ರಿ, 2ನೇ ಪಂದ್ಯಕ್ಕಾಗಿ ರಾಜ್‍‌ಕೋಟ್‌ನಲ್ಲಿ ತಂಗಿದ್ದಾರೆ. ತಂಡದ ಅಭ್ಯಾಸದ ನಡುವೆ ಶಾಸ್ತ್ರಿ, ಕೊಹ್ಲಿಗೆ ಬರ್ತ್ ಡೇ ವಿಶ್ ಮಾಡಿದ್ದಾರೆ. ಆದರೆ ಹೆಜ್ಜೆ ಹೆಜ್ಜೆಗೂ ಟ್ರೋಲ್ ಆಗುವು ಶಾಸ್ತ್ರಿ, ಈ ಬಾರಿಯೂ ಇದಕ್ಕೆ ಹೊರತಾಗಿಲ್ಲ.

ಇದನ್ನೂ ಓದಿ: ರನ್ ಮಷೀನ್ ವಿರಾಟ್ ಕೊಹ್ಲಿ ಬರ್ತ್ ಡೇ @31

ಚಿರ ಯುವಕನಿಗೆ ಹ್ಯಾಪಿ ಬರ್ತ್ ಡೇ, ವಿಶ್ರಾಂತಿ ಸಮಯವನ್ನು ಆನಂದಿಸು, ಯಶಸ್ವಿ ವರ್ಷ ನಿಮ್ಮದಗಾಲಿ ಎಂದು ಶಾಸ್ತ್ರಿ ಕೊಹ್ಲಿಗೆ ಟ್ವೀಟ್ ಮೂಲಕ ಶುಭಕೋರಿದ್ದಾರೆ.

ಇದನ್ನೂ ಓದಿ: ಕೊಹ್ಲಿ ಹುಟ್ಟು ಹಬ್ಬಕ್ಕೆ ಭೂತಾನ್‌ನಲ್ಲಿ ಟ್ರಕ್ಕಿಂಗ್; ರೋಚಕ ಕತೆ ಬಿಟ್ಟಿಟ್ಟ ಅನುಷ್ಕಾ!

ಶಾಸ್ತ್ರಿ ವಿಶ್ ಬೆನ್ನಲ್ಲೇ ಟ್ರೋಲ್ ಆಗಿದ್ದಾರೆ. ನನ್ನ ವೇತನದ ಚೆಕನ್ನು ಸುರಕ್ಷಿತವಾಗಿಟ್ಟುಕೋ ಎಂದು ಅಭಿಮಾನಿಯೋರ್ವ ಟ್ರೋಲ್ ಮಾಡಿದ್ದಾನೆ. ಅಭಿಮಾನಿಗಳ ಟ್ರೋಲ್ ಟ್ವೀಟ್ ಇಲ್ಲಿದೆ.


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?