ಕೊಹ್ಲಿ ಹುಟ್ಟು ಹಬ್ಬಕ್ಕೆ ಶುಭಕೋರಿದ ರೋಹಿತ್; ಗೆಳೆತನ ಹೀಗೆ ಇರಲಿ ಎಂದ ಫ್ಯಾನ್ಸ್!

Published : Nov 05, 2019, 06:40 PM ISTUpdated : Nov 05, 2019, 06:57 PM IST
ಕೊಹ್ಲಿ ಹುಟ್ಟು ಹಬ್ಬಕ್ಕೆ ಶುಭಕೋರಿದ ರೋಹಿತ್; ಗೆಳೆತನ ಹೀಗೆ ಇರಲಿ ಎಂದ ಫ್ಯಾನ್ಸ್!

ಸಾರಾಂಶ

ನಾಯಕ ವಿರಾಟ್ ಕೊಹ್ಲಿ ಹುಟ್ಟು ಹಬ್ಬಕ್ಕೆ ಉಪನಾಯಕ ರೋಹಿತ್ ಶರ್ಮಾ ವಿಶ್ ಮಾಡಿದ್ದಾರೆ. ರೋಹಿತ್ ವಿಶ್ ಬೆನ್ನಲ್ಲೇ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ. 

ರಾಜ್‌ಕೋಟ್(ನ.05): ಟೀಂ ಇಂಡಿಯಾ ನಾಯಕ  ವಿರಾಟ್ ಕೊಹ್ಲಿ31ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟು ಹಬ್ಬ ಆಚರಿಸಿಕೊಂಡಿರುವ ಕೊಹ್ಲಿಗೆ  ಟೀಂ ಇಂಡಿಯಾದ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಶುಭಕೋರಿದ್ದಾರೆ. ತಂಡದ ಉಪನಾಯಕ ರೋಹಿತ್ ಶರ್ಮಾ ಕೂಡ ಕೊಹ್ಲಿಗೆ ಶುಭಕೋರಿದ್ದಾರೆ. ರೋಹಿತ್ ಬರ್ತ್ ಡೇ ವಿಶ್ ನೋಡಿದ ಅಭಿಮಾನಿಗಳು ಗೆಳೆತನ ಹೀಗೆ ಇರಲಿ ಎಂದು ಆಶಿಸಿದ್ದಾರೆ.

ಇದನ್ನೂ ಓದಿ: ಕೊಹ್ಲಿ ಹುಟ್ಟು ಹಬ್ಬ; ಶುಭಕೋರಿದ ಟೀಂ ಇಂಡಿಯಾ ಕ್ರಿಕೆಟರ್ಸ್

2019ರ ವಿಶ್ವಕಪ್ ಟೂರ್ನಿ ಬಳಿಕ ರೋಹಿತ್ ಹಾಗೂ ಕೊಹ್ಲಿ ನಡುವೆ ಮನಸ್ತಾಪವಾಗಿದೆ ಅನ್ನೋ ಮಾತುಗಳು ಕೇಳಬಂದಿತ್ತು. ಹೀಗಾಗಿ ಇದೀಗ ರೋಹಿತ್ ಶರ್ಮಾ ಬರ್ತ್ ಡೇ ವಿಶ್ ಮಹತ್ವ ಪಡೆದುಕೊಂಡಿದೆ. ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಪಂದ್ಯದ ಸೋಲಿನಿಂದ ನಿರಾಸೆಗೊಂಡಿರುವ ರೋಹಿತ್ ಶರ್ಮಾ, ಕೊಹ್ಲಿಗೆ ಶುಭಕೋರಲು ಮರೆಯಲಿಲ್ಲ.

 

ಇದನ್ನೂ ಓದಿ: ಕೊಹ್ಲಿಗೆ ಕೋಚ್ ರವಿ ಶಾಸ್ತ್ರಿ ವಿಶ್; ಮತ್ತೆ ಟ್ರೋಲ್ ಮಾಡಿದ ಫ್ಯಾನ್ಸ್!

ರೋಹಿತ್ ಶುಭಕೋರಿದ ಬೆನ್ನಲ್ಲೇ ಅಭಿಮಾನಿಗಳು ಪ್ರತಿಕ್ರಿಯೆಸಿದ್ದಾರೆ. ಇಬ್ಬರು ದಿಗ್ಗಜ ಕ್ರಿಕೆಟಿಗರು. ರೋಹಿತ್ ಹಾಗೂ ಕೊಹ್ಲಿ ನಡುವೆ ಯಾವುದೇ ಮನಸ್ತಾಪವಿಲ್ಲ ಅನ್ನೋದಕ್ಕೆ ಈ ಟ್ವೀಟ್ ಸಾಕ್ಷಿ ಎಂದು ಪ್ರತಿಕ್ರಿಯಿಸಿದ್ದಾರೆ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026: ನಿನ್ನೆ ನಡೆದ ಸಿಎಸ್‌ಕೆ-ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?
ಹ್ಯಾಟ್ರಿಕ್ ಸೋಲಿನ ಬಳಿಕ ಗೆಲುವಿನ ಖಾತೆ ತೆರೆದ ಸಿಎಸ್‌ಕೆ; ಮ್ಯಾಚ್ ಗೆಲ್ಲಿಸಿದ ಶತಕ ವೀರ ಸಂಜು ಸ್ಯಾಮ್ಸನ್!