
"
ಕೋಲ್ಕತಾ(ನ.05): ವಿಶ್ವಕಪ್ ಟೂರ್ನಿ ಬಳಿಕ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಟೀಂ ಇಂಡಿಯಾದಿಂದ ದೂರ ಉಳಿದಿದ್ದಾರೆ. ವೆಸ್ಟ್ ಇಂಡೀಸ್ ಸರಣಿಯಿಂದ ಧೋನಿ ಹಿಂದೆ ಸರಿದಿದ್ದರೆ, ಸೌತ್ ಆಫ್ರಿಕಾ ಹಾಗೂ ಬಾಂಗ್ಲಾದೇಶ ಸರಣಿಗೆ ಧೋನಿ ಲಭ್ಯವಿದ್ದರೂ ಆಯ್ಕೆ ಸಮಿತಿ ಮಣೆಹಾಕಿಲ್ಲ. ಹೀಗಾಗಿ ಧೋನಿ ವಿದಾಯ, ಧೋನಿ ಕರಿಯರ್ ಅಂತ್ಯ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಇದರ ಬೆನ್ನಲ್ಲೇ ಎಂ.ಎಸ್.ಧೋನಿ ಹೊಸ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ಧೋನಿ ನಿವೃತ್ತಿಯ ಬಗ್ಗೆ ಮತ್ತೆ ವದಂತಿ..!
ಎಂ.ಎಸ್.ಧೋನಿ ಕ್ರಿಕೆಟ್ ಕರಿಯರ್ ಬಹುತೇಕ ಅಂತ್ಯ ಅನ್ನೋ ಮಾತುಗಳಿಗೆ ಪುಷ್ಠಿ ಸಿಕ್ಕಿದೆ. ಭಾರತದ ಐತಿಹಾಸಿಕ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯದಲ್ಲಿ ಧೋನಿ ವೀಕ್ಷಕ ವಿವರಣೆಗಾರನಾಗಿ ಪದಾರ್ಪಣೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಕೋಲ್ಕತಾದಲ್ಲಿ ನವೆಂಬರ್ 22 ರಿಂದ 26ರ ವರೆಗೆ ನಡೆಯಲಿರುವ ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಧೋನಿ ಕಮೆಂಟೇಟರ್ ಆಗಿ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: ಆಯ್ಕೆ ಸಮಿತಿಯಿಂದ ನಿರ್ಲಕ್ಷ್ಯ; ಪ್ಲಾನ್ 'ಬಿ'ಗೆ ಧೋನಿ ಸಜ್ಜು!
ಭಾರತ ಹಾಗೂ ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸಲು ಬಿಸಿಸಿಐ ರೆಡಿಯಾಗಿದೆ. ಡೇ ಅಂಡ್ ನೈಟ್ ಟೆಸ್ಟ್ ಆಗಿರುವ ಕಾರಣ ಬಿಸಿಸಿಐ ವಿಶೇಷ ಕಾಳಜಿ ವಹಿಸಿದೆ. ಇತ್ತ ಸ್ಟಾರ್ಟ್ ಸ್ಪೋರ್ಟ್ಸ್ ವಾಹಿನಿ ಕೂಡ ಐತಿಹಾಸಿಕ ಪಂದ್ಯಕ್ಕೆ ವಿಶೇಷ ಮೆರುಗು ನೀಡಲು ರೆಡಿಯಾಗಿದೆ. ಹೀಗಾಗಿ ವೀಕ್ಷಕ ವಿವರಣೆ ನೀಡುವಂತೆ ಧೋನಿಗೆ ಮನವಿ ಮಾಡಿದೆ.
ಧೋನಿ ಜೊತೆಗೆ ಮಾಜಿ ನಾಯಕ, NCA(ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ) ಮುಖ್ಯಸ್ಥ ರಾಹುಲ್ ದ್ರಾವಿಡ್, ಮಾಜಿ ನಾಯಕ ಅನಿಲ್ ಕುಂಬ್ಳೆ ಕೂಡ ವೀಕ್ಷಕ ವಿವರಣೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.