
ಕ್ರೈಸ್ಟ್ಚರ್ಚ್[ನ.03]: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್‌ನ ಸ್ಯಾಮ್ ಬಿಲ್ಲಿಂಗ್ಸ್ ಪರಿಸರ ಸ್ನೇಹಿ ಗ್ಲೌಸ್ ಧರಿಸುವುದನ್ನು ಐಸಿಸಿ ತಡೆದಿದೆ.
ಧೋನಿ ಗ್ಲೌಸ್ ವಿವಾದ- ಐಸಿಸಿಯಿಂದ ಖಡಕ್ ವಾರ್ನಿಂಗ್!
ನ್ಯೂಜಿಲೆಂಡ್ ಪ್ರವಾಸದ ಅಭ್ಯಾಸ ಪಂದ್ಯಗಳಲ್ಲಿ ಬಿಲ್ಲಿಂಗ್ಸ್ ಪರಿಸರ ಸ್ನೇಹಿ ಗ್ಲೌಸ್ ಧರಿಸಿದ್ದರು. ಆದರೆ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಬಣ್ಣ ಬಣ್ಣದ ಗ್ಲೌಸ್ ಐಸಿಸಿ ನಿಯಮ ಉಲ್ಲಂಘಿಸುತ್ತದೆ. ಸೀಮಿತ ಓವರ್‌ನಲ್ಲಿ ಗ್ಲೌಸ್‌ನ ಶೇ.50ರಷ್ಟುಬಿಳಿ ಬಣ್ಣ ಇರಬೇಕು. ಉಳಿದ ಭಾಗ ತಂಡದ ಜೆರ್ಸಿ ಬಣ್ಣ ಇರಬೇಕು. ಆದರೆ ಪರಿಸರ ಸ್ನೇಹಿ ಗ್ಲೌಸ್ ವಿವಿಧ ಬಣ್ಣಗಳನ್ನು ಹೊಂದಿದೆ. ಕೇವಲ ಐಪಿಎಲ್, ಟಿ10ನಂತಹ ಟೂರ್ನಿಗಳಲ್ಲಿ ಬಿಲ್ಲಿಂಗ್ಸ್ ಈ ಗ್ಲೌಸ್ ಬಳಸಬಹುದು.
ಧೋನಿ ಗ್ಲೌಸಲ್ಲಿ IA ಚಿಹ್ನೆಗೆ ICC ವಿರೋಧ: ಪಾಕ್‌ಗಿಲ್ಲದ ನಿಯಮ ನಮಗ್ಯಾಕೆ?
ಗ್ಲೌಸ್ ಬಗೆಗಿನ ಐಸಿಸಿ ವಿವಾದ ಮೊದಲೇನಲ್ಲ: ಹೌದು, ಈ ಮೊದಲು ಐಸಿಸಿ ಏಕದಿನ ವಿಶ್ವಕಪ್ ವೇಳೆ ಟೀಂ ಇಂಡಿಯಾ ಮಾಜಿ ನಾಯಕ, ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಮಹೇಂದ್ರ ಸಿಂಗ್ ಧೋನಿ ಭಾರತೀಯ ಸೇನೆಯ ಬಲಿದಾನ್ ಚಿನ್ಹೆ ಇರುವ ಗ್ಲೌಸ್ ಧರಿಸಿ ಮೈದಾನಕ್ಕಿಳಿದಿದ್ದರು. ಇದಕ್ಕೆ ಐಸಿಸಿ ಆಕ್ಷೇಪ ವ್ಯಕ್ತಪಡಿಸಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.