ದೇವಧರ್‌ ಟ್ರೋಫಿ 2019: ಭಾರತ ’ಸಿ’ ತಂಡಕ್ಕೆ ಗೆಲುವು

By Web Desk  |  First Published Nov 3, 2019, 11:16 AM IST

ಭಾರತ ಸಿ ತಂಡವು ದೇವದರ್ ಟೂರ್ನಿಯಲ್ಲಿ ಭಾರತ ’ಬಿ’ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದೆ. ಭಾರತ ’ಎ’ ತಂಡ 2 ಪಂದ್ಯಗಳನ್ನು ಸೋತಿದ್ದರಿಂದ ಭಾರತ ’ಬಿ’ ತಂಡವು ಫೈನಲ್ ಪ್ರವೇಶಿಸಿದೆ. ಫೈನಲ್ ಪಂದ್ಯ ನವೆಂಬರ್ 4ರಂದು ನಡೆಯಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ರಾಂಚಿ[ನ.03]: ಅಕ್ಷರ್‌ ಪಟೇಲ್‌ ಆಲ್ರೌಂಡ್‌ ಆಟ ಹಾಗೂ ಮಯಾಂಕ್‌ ಮಾರ್ಕಂಡೆ ಸ್ಪಿನ್‌ ಮೋಡಿಯಿಂದಾಗಿ ಭಾರತ ‘ಸಿ’ ತಂಡ, ಭಾರತ ‘ಬಿ’ ವಿರುದ್ಧ ದೇವಧರ್‌ ಟ್ರೋಫಿ ಏಕದಿನ ಟೂರ್ನಿಯ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ 136 ರನ್‌ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ‘ಸಿ’ ತಂಡ ಅಜೇಯವಾಗಿ ಫೈನಲ್‌ ತಲುಪಿದೆ. ಈ ಪಂದ್ಯದಲ್ಲಿ ಸೋಲುಂಡಿದ್ದರೂ ಭಾರತ ‘ಬಿ’ ತಂಡ ಫೈನಲ್‌ಗೇರಿದೆ. ನ. 4 ರಂದು ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಭಾರತ ‘ಸಿ’ ಹಾಗೂ ‘ಬಿ’ ತಂಡಗಳು ಸೆಣಸಲಿವೆ.

India C beat India B by 136 runs in the third match of the .👊

Both teams will meet again in the final on Monday. pic.twitter.com/rlQppJ4IEP

— BCCI Domestic (@BCCIdomestic)

ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ ‘ಸಿ’ ಅಕ್ಷರ್‌ ಪಟೇಲ್‌ (98 ರನ್‌, 61 ಎಸೆತ), ವಿರಾಟ್‌ ಸಿಂಗ್‌ (76 ರನ್‌, 96 ಎಸೆತ) 50 ಓವರಲ್ಲಿ 5 ವಿಕೆಟ್‌ಗೆ 280 ರನ್‌ಗಳಿಸಿತು. ಈ ಸವಾಲಿನ ಗುರಿ ಬೆನ್ನತ್ತಿದ ಭಾರತ ‘ಬಿ’ ಬಾಬಾ ಅಪರಾಜಿತ್‌ (53) ಹೊರತಾಗಿಯೂ 43.4 ಓವರಲ್ಲಿ 144 ರನ್‌ಗಳಿಗೆ ಆಲೌಟ್‌ ಆಯಿತು.

Latest Videos

undefined

ದೇವಧರ್ ಟ್ರೋಫಿ: ಮಯಾಂಕ್, ಗಿಲ್ ಅಬ್ಬರದ ಶತಕ

ಸ್ಪಿನ್ನರ್‌ ಮಯಾಂಕ್‌ ಮರ್ಕಂಡೆ (4-25), ಜಲಜ್‌ ಸಕ್ಸೇನಾ (2-25) ಹಾಗೂ ಇಶಾನ್‌ ಪೊರೆಲ್‌ (2-33) ವಿಕೆಟ್‌ ಪಡೆಯುವ ಮೂಲಕ ಭಾರತ ‘ಸಿ’ ಜಯದಲ್ಲಿ ಮಹತ್ವದ ಪಾತ್ರವಹಿಸಿದರು.

ಭಾರತ vs ಬಾಂಗ್ಲಾದೇಶ ಟಿ20; ಸಂಭಾವ್ಯ ತಂಡ ಪ್ರಕಟ, ಯಾರಿಗಿದೆ ಚಾನ್ಸ್?

ಭಾರತ ’ಎ’ ತಂಡ ಮೊದಲೆರಡು ಪಂದ್ಯಗಳನ್ನು ಸೋತಿದ್ದರಿಂದ ಟೂರ್ನಿಯಿಂದ ಹೊರಬಿದ್ದಿತ್ತು. ಇನ್ನು ಭಾರತ ’ಸಿ’ ತಂಡ ಅಜೇಯವಾಗಿ ಫೈನಲ್ ಪ್ರವೇಶಿಸಿದರೆ, ಭಾರತ ’ಬಿ’ ತಂಡ ಒಂದು ಸೋಲು ಹಾಗೂ ಒಂದು ಗೆಲುವಿನೊಂದಿಗೆ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ.

ಸ್ಕೋರ್‌: ಭಾರತ ‘ಸಿ’ 280/5
ಭಾರತ ‘ಬಿ’ 144/10

 

click me!