
ಆ್ಯಂಟಿಗಾ[ನ.04]: ಮೊದಲ ಏಕದಿನದಲ್ಲಿ ವೆಸ್ಟ್ ಇಂಡೀಸ್ ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಭಾರತದ ಹರ್ಮನ್‌ಪ್ರೀತ್ ಕೌರ್ ಅದ್ಭುತ ಕ್ಯಾಚ್ ಪಡೆದರು. ಆ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಧೋನಿ, ರೋಹಿತ್ ಶರ್ಮಾ ದಾಖಲೆ ಮುರಿದ ಹರ್ಮನ್‌ಪ್ರೀತ್ ಕೌರ್!
ಸ್ಪಿನ್ನರ್ ಏಕ್ತಾ ಬಿಶ್ತ್ ಹಿಂದಿನ ಎಸೆತವನ್ನು ಲಾಂಗ್ ಆನ್ ಕ್ಷೇತ್ರದಲ್ಲಿ ಸಿಕ್ಸರ್ಗಟ್ಟಿದ ವಿಂಡೀಸ್ ನಾಯಕಿ ಸ್ಟೆಫಾನಿ ಟೇಲರ್ 94 ರನ್ ಗಳಿಸಿ ಕ್ರೀಸ್ನಲ್ಲಿದ್ದರು. ಮುಂದಿನ ಎಸೆತವನ್ನೂ ಸಿಕ್ಸರ್‌ಗಟ್ಟಿ ಶತಕ ದಾಖಲಿಸಲು ಯತ್ನಿಸಿದರು. ಆದರೆ ಲಾಂಗ್ ಆನ್ ಕ್ಷೇತ್ರದಲ್ಲಿದ್ದ ಹರ್ಮನ್‌ಪ್ರೀತ್ ಗಾಳಿಯಲ್ಲಿ ಜಿಗಿದು ಎಡಗೈಯಿಂದ ಕ್ಯಾಚ್ ಪಡೆದು ಮಿಂಚಿದರು.
ಕ್ಯಾಚ್ ಪಡೆದಾಗಲೂ ಕೌರ್ ಸಮತೋಲನ ಸಾಧಿಸಿದರು. ಸಿಕ್ಸರ್ ಹೋಗುವ ಚೆಂಡನ್ನು ಕೌರ್ ತಡೆದಿದ್ದರಿಂದ, ಟೇಲರ್ ಶತಕ ಪೂರೈಸಲಿಲ್ಲ. ಹರ್ಮನ್ ಕ್ಯಾಚ್ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹರ್ಮನ್‌ಪ್ರೀತ್ ಕೌರ್ ಹಿಡಿದ ಕ್ಯಾಚ್, ಐಪಿಎಲ್ ಟೂರ್ನಿಯಲ್ಲಿ ಎಬಿ ಡಿವಿಲಿಯರ್ಸ್ ಹಿಡಿದ ಕ್ಯಾಚ್ ನೆನಪಿಸುವಂತಿತ್ತು.
11ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್ ವಿರುದ್ಧ ಆರ್‌ಸಿಬಿ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ ಅತ್ಯದ್ಭುತ ಕ್ಯಾಚ್ ಹಿಡಿದಿದ್ದರು. ಆ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ...
ಮಹಿಳಾ ಏಕದಿನ: ಭಾರತಕ್ಕೆ 1 ರನ್ ಸೋಲು!
ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಏಕದಿನದಲ್ಲಿ ಭಾರತ ಮಹಿಳಾ ತಂಡ 1 ರನ್‌ನ ವೀರೋಚಿತ ಸೋಲು ಕಂಡಿದೆ.
ಶುಕ್ರವಾರ ತಡರಾತ್ರಿ ಮುಕ್ತಾಯವಾದ ಐಸಿಸಿ ಮಹಿಳಾ ಚಾಂಪಿಯನ್ಶಿಪ್ನ ಮೊದಲ ಪಂದ್ಯದಲ್ಲಿ ಸವಾಲಿನ 226 ರನ್ ಗುರಿ ಬೆನ್ನತ್ತಿದ ಭಾರತ ವನಿತೆಯರು 50 ಓವರ್ಗಳಲ್ಲಿ 224 ರನ್ಗಳಿಗೆ ಆಲೌಟಾದರು. ಆರಂಭಿಕ ಆಟಗಾರ್ತಿ ಪ್ರಿಯಾ ಪೂನಿಯಾ 75 ರನ್, ಜೆಮಿಮಾ 41 ರನ್ ಗಳಿಸಿದರು. ಆದರೆ ಆಫ್ ಸ್ಪಿನ್ನರ್ ಅನಿಸಾ ಮೊಹಮ್ಮದ್ 46 ರನ್ಗೆ 5 ವಿಕೆಟ್ ಕಬಳಿಸಿದ್ದು, ಕೆಳ ಕ್ರಮಾಂಕದ ಕುಸಿತಕ್ಕೆ ಒಳಗಾಯಿತು. ಕೊನೆಯ ಓವರ್ನಲ್ಲಿ ಭಾರತಕ್ಕೆ 8 ರನ್ ಬೇಕಿತ್ತು. ಆದರೆ 2 ವಿಕೆಟ್ ಕಿತ್ತು ಅನಿಸಾ ವಿಂಡೀಸ್ ತಂಡಕ್ಕೆ ಗೆಲುವು ತಂದುಕೊಟ್ಟರು.
ಮೊದಲು ಬ್ಯಾಟ್ ಮಾಡಿದ್ದ ವಿಂಡೀಸ್ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 225 ರನ್ ಪೇರಿಸಿತು. 94 ರನ್ ಹೊಡೆದಿದ್ದ ವಿಂಡೀಸ್ ನಾಯಕಿ ಸ್ಟೆಫಾನಿ ಟೇಲರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.