ದುಲೀಫ್‌ ಟ್ರೋಫಿ: ಸೆಮೀಸ್‌ ರೇಸ್‌ನಲ್ಲಿ ರೋಚಕ ತಿರುವು

Kannadaprabha News   | Kannada Prabha
Published : Aug 26, 2026, 08:54 AM IST
Vaibhav Sooryavanshi

ಸಾರಾಂಶ

ದುಲೀಪ್ ಟ್ರೋಫಿ ಕ್ವಾರ್ಟರ್‌ ಫೈನಲ್‌ನಲ್ಲಿ ಈಶಾನ್ಯ ವಲಯವನ್ನು ಇನ್ನಿಂಗ್ಸ್‌ ಅಂತರದಿಂದ ಮಣಿಸಿದ ಪೂರ್ವ ವಲಯ ಸೆಮಿಫೈನಲ್‌ ಪ್ರವೇಶಿಸಿದೆ. ಮತ್ತೊಂದು ಪಂದ್ಯದಲ್ಲಿ ಪಶ್ಚಿಮ ಹಾಗೂ ಉತ್ತರ ವಲಯಗಳ ನಡುವೆ ಜಯಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಪಂದ್ಯ ರೋಚಕ ಘಟ್ಟ ತಲುಪಿದೆ.

ಬೆಂಗಳೂರು: ದುಲೀಪ್ ಟ್ರೋಫಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಈಶಾನ್ಯ ವಲಯವನ್ನು ಇನ್ನಿಂಗ್ಸ್‌ ಹಾಗೂ 210 ರನ್‌ಗಳಿಂದ ಸೋಲಿಸಿದ ಪೂರ್ವ ವಲಯ, ಸೆಮಿಫೈನಲ್‌ ಪ್ರವೇಶಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 467 ರನ್‌ ಗಳಿಸಿದ್ದ ಪೂರ್ವ ವಲಯ, ಆ ಬಳಿಕ ಈಶಾನ್ಯ ವಲಯವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 111 ರನ್‌ಗೆ ಆಲೌಟ್‌ ಮಾಡಿತ್ತು. ಫಾಲೋ ಆನ್‌ಗೆ ತುತ್ತಾಗಿದ್ದ ಈಶಾನ್ಯ ವಲಯ 2ನೇ ಇನ್ನಿಂಗ್ಸ್‌ನಲ್ಲಿ 146 ರನ್‌ಗೆ ಸರ್ವಪತನಗೊಂಡಿತು. ಅನುಕೂಲ್‌ ರಾಯ್‌ 5, ವೈಭವ್‌ ಸೂರ್ಯವಂಶಿ 2 ವಿಕೆಟ್‌ ಕಿತ್ತರು. ಆ.30ರಿಂದ ಆರಂಭಗೊಳ್ಳಲಿರುವ ಸೆಮಿಫೈನಲ್‌ನಲ್ಲಿ ಪೂರ್ವ ವಲಯಕ್ಕೆ ಕೇಂದ್ರ ವಲಯ ಎದುರಾಗಲಿದೆ.

ಒಂದೇ ಓವರಲ್ಲಿ 2 ವಿಕೆಟ್‌ ಕಿತ್ತ ವೈಭವ್‌ ಸೂರ್ಯವಂಶಿ!

6 ಎಸೆತದಲ್ಲಿ 8 ರನ್‌ ಗಳಿಸಿ ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡಿದ್ದ ವೈಭವ್‌ ಸೂರ್ಯವಂಶಿ, ತಮ್ಮ ಸ್ಪಿನ್‌ ಬೌಲಿಂಗ್‌ ಮೂಲಕ ಗಮನ ಸೆಳೆದರು. ಈಶಾನ್ಯ ವಲಯದ 2ನೇ ಇನ್ನಿಂಗ್ಸ್‌ನಲ್ಲಿ 3 ಓವರ್‌ ಬೌಲ್‌ ಮಾಡಿದ ವೈಭವ್‌ 11 ರನ್‌ಗೆ 2 ವಿಕೆಟ್‌ ಕಿತ್ತರು. ಎರಡೂ ವಿಕೆಟ್‌ ಒಂದೇ ಓವರಲ್ಲಿ ದೊರೆಯಿತು.

ಜಯಕ್ಕಾಗಿ ಪಶ್ಚಿಮ-ಉತ್ತರ ವಲಯಗಳ ತೀವ್ರ ಪೈಪೋಟಿ

ಬೆಂಗಳೂರು: ಮತ್ತೊಂದು ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಜಯಕ್ಕಾಗಿ ಪಶ್ಚಿಮ ಹಾಗೂ ಉತ್ತರ ವಲಯಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. 2ನೇ ಇನ್ನಿಂಗ್ಸಲ್ಲಿ 222 ರನ್‌ಗೆ ಆಲೌಟ್‌ ಆದ ಉತ್ತರ ವಲಯ, ಪಶ್ಚಿಮ ವಲಯದ ಗೆಲುವಿಗೆ 287 ರನ್‌ ಗುರಿ ನಿಗದಿಪಡಿಸಿತು. ಆರಂಭಿಕ ಆಘಾತದ ಬಳಿಕ ಪಶ್ಚಿಮ ವಲಯಕ್ಕೆ ಮುಶೀರ್‌ ಖಾನ್‌ (96) ಹಾಗೂ ನಾಯಕ ಋತುರಾಜ್‌ ಗಾಯಕ್ವಾಡ್‌ (66) ಆಸರೆಯಾದರು.

ಇವರಿಬ್ಬರ ಅರ್ಧಶತಕಗಳ ನೆರವಿನಿಂದ, ಪಶ್ಚಿಮ ವಲಯ 3ನೇ ದಿನದಂತ್ಯಕ್ಕೆ 7 ವಿಕೆಟ್‌ಗೆ 220 ರನ್‌ ಗಳಿಸಿದ್ದು, ಗೆಲ್ಲಲು ಇನ್ನು 67 ರನ್‌ ಬೇಕಿದೆ. ಉರ್ವಿಲ್‌ ಪಟೇಲ್‌ ಔಟಾಗದೆ 17 ರನ್‌ ಗಳಿಸಿದ್ದು, ತನುಶ್‌ ಕೋಟ್ಯಾನ್‌ ಹಾಗೂ ಶಾರ್ದೂಲ್‌ ಠಾಕೂರ್‌ ಇನ್ನೂ ಬ್ಯಾಟ್‌ ಮಾಡಬೇಕಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ, ಸೆಮೀಸ್‌ನಲ್ಲಿ ದಕ್ಷಿಣ ವಲಯವನ್ನು ಎದುರಿಸಲಿದೆ.

ಅಂಡಮಾನ್‌-ನಿಕೋಬಾರ್‌ ದ್ವೀಪಕ್ಕೆ ಶೀಘ್ರ ಬಿಸಿಸಿಐ ಮಾನ್ಯತೆ ಸಿಗುವ ಸಾಧ್ಯತೆ

ನವದೆಹಲಿ: ಭಾರತೀಯ ದೇಸಿ ಕ್ರಿಕೆಟ್‌ನಲ್ಲಿ ಸದ್ಯದಲ್ಲೇ ಅಂಡಮಾನ್‌ ಹಾಗೂ ನಿಕೋಬಾರ್‌ ದ್ವೀಪದ ತಂಡ ಪಾಲ್ಗೊಳ್ಳಬಹುದು ಎನ್ನುವ ಸುದ್ದಿ ಹೊರಬಿದ್ದಿದೆ. ಅಂಡಮಾನ್‌-ನಿಕೋಬಾರ್‌ ಕ್ರಿಕೆಟ್‌ ಸಂಸ್ಥೆಗೆ ಮಾನ್ಯತೆ ನೀಡಲು ಬಿಸಿಸಿಐ ಗಂಭೀರ ಚಿಂತನೆ ನಡೆಸುತ್ತಿದ್ದು, ಸೆ.28ರಂದು ನಡೆಯಲಿರುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತದ ಬಿಗಿ ಹಿಡಿತದಲ್ಲಿ ಕೊಲಂಬೊ ಟೆಸ್ಟ್‌; ಫಾಲೋ ಆನ್ ಭೀತಿಯಲ್ಲಿ ಆತಿಥೇಯ ಶ್ರೀಲಂಕಾ
'ಕ್ರಿಕೆಟಿಗರಿಗೆ Non-Veg ಟೀ..?' ಶಾಕಿಂಗ್ ವಿಚಾರ ರಿವೀಲ್ ಮಾಡಿದ ಬಾಂಬೆ ಹೈಕೋರ್ಟ್‌..!