
ಸುಳ್ಳು ಸುದ್ದಿ, ತಪ್ಪು ಮಾಹಿತಿ ಹರಡಿದ 300 ಫೇಸ್‌ಬುಕ್ ಖಾತೆ ಬ್ಯಾನ್!
ಕೊರೋನಾ ವೈರಸ್ ಲಸಿಕೆಗೆ ಹಾಹಾಕಾರ ಇದೆ. ಭಾರತದ ಹಲವು ರಾಜ್ಯಗಳಲ್ಲಿ ಎದುರಾಗಿರುವ ಲಸಿಕೆ ಕೊರತೆ ನೀಗಿಸಲು ಕೇಂದ್ರ ಸರ್ಕಾರ ನಿರಂತರ ಪೂರೈಕೆ ಮಾಡುತ್ತಿದೆ. ಆದರೆ ಕೆಲ ರಾಷ್ಟ್ರಗಳಲ್ಲಿ ಇನ್ನೂ ಲಸಿಕೆಗೆ ಸಿಕ್ಕಿಲ್ಲ. ಆದರೆ ಲಸಿಕೆ ಮಾರುಕಟ್ಟೆ ಬಂದ ಆರಂಭದಲ್ಲಿ ಲಸಿಕೆ ಪಡೆಯದಂತೆ ಸುಳ್ಳು ವದಂತಿಗಳನ್ನು ಹಬ್ಬಲಾಗಿತ್ತು. ಲಸಿಕೆಯಿಂದ ಅಪಾಯ ಹೆಚ್ಚು ಎಂದು ಹಬ್ಬಲಾಗಿತ್ತು. ಹೀಗೆ ಲಸಿಕೆ ಕುರಿತು ಸುಳ್ಳು ಮಾಹಿತಿ ಹರಡಿದ 300 ಫೇಸ್‌ಬುಕ್ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ.
ಸಾಮಾಜಿಕ ನ್ಯಾಯ ಪಾಲನೆ: ಮೋದಿ ಹೊಸ ಸಂಪುಟಕ್ಕೆ ಗೌಡ ಮೆಚ್ಚುಗೆ!
ಧಾನಿ ನರೇಂದ್ರ ಮೋದಿ ಅವರ ಪುನಾರಚಿತ ಸಚಿವ ಸಂಪುಟದ ಕುರಿತು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೋದಿ ಅವರನ್ನು ಒಂದು ವಿಚಾರಕ್ಕೆ ಮೆಚ್ಚಲೇಬೇಕು, ಅವರು ತಮ್ಮ ಸಂಪುಟದಲ್ಲಿ ಸಾಮಾಜಿಕ ನ್ಯಾಯ ಕಾಯ್ದುಕೊಂಡಿದ್ದಾರೆ. ಇದು ಸ್ವಾಗತಾರ್ಹ ವಿಚಾರ ಎಂದಿದ್ದಾರೆ.
ಐಪಿಎಲ್ 2021: ದುಬೈ ವಿಮಾನವೇರಿದ ಧೋನಿ ನೇತೃತ್ವದ ಸಿಎಸ್‌ಕೆ
ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಶುಕ್ರವಾರ(ಆ.13), 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಯುಎಇನತ್ತ ಮುಖ ಮಾಡಿದೆ. ಮುಂಬರುವ ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ ಐಪಿಎಲ್ ಭಾಗ-2ನಲ್ಲಿ ಪಾಲ್ಗೊಳ್ಳಲು ಸಿಎಸ್‌ಕೆ ಫ್ರಾಂಚೈಸಿ ಬರೋಬ್ಬರಿ ಒಂದು ತಿಂಗಳು ಮುಂಚಿತವಾಗಿಯೇ ಸಿದ್ದತೆ ಆರಂಭಿಸಿದೆ.
ಸಂಗೀತಾ ಶೃಂಗೇರಿ, ದಿಗಂತ್ ನಟನೆಯ 'ಮಾರಿಗೋಲ್ಡ್' ರಿಲೀಸ್‌ಗೆ ಸಿದ್ಧತೆ!
ಸ್ಯಾಂಡಲ್‌ವುಡ್ ದೂದ್ ಪೆಡಾ ದಿಂಗಂತ್, ಸಂಗೀತಾ ಶೃಂಗೇರಿ ಅಭಿನಯಿಸಿರುವ ಕ್ರೈಮ್ ಥ್ರಿಲ್ಲರ್ ‘ಮಾರಿಗೋಲ್ಡ್’ ಸಿನಿಮಾದ ಡಬ್ಬಿಂಗ್ ಪೂರ್ಣಗೊಂಡಿದೆ. ರೀರೆಕಾರ್ಡಿಂಗ್ ಕೆಲಸ ಕೊನೆಯ ಹಂತದಲ್ಲಿದ್ದು, ಸೆನ್ಸಾರ್‌ಗೆ ರೆಡಿಯಾಗುತ್ತಿದೆ.
ರಾಹುಲ್ ಖಾತೆ ರದ್ದು, YouTubeನಲ್ಲಿ ಟ್ವಿಟರ್ ವಿರುದ್ಧ ಕಿಡಿಕಾರಿದ ಕಾಂಗ್ರೆಸ್ ನಾಯಕ!
ರಾಹುಲ್ ಗಾಂಧಿ ಸೇರಿದಂತೆ ಕೆಲ ಕಾಂಗ್ರೆಸ್ ನಾಯಕರ ಟ್ವಿಟರ್ ಖಾತೆ ಸ್ಥಗಿತಗೊಂಡಿದೆ. ಸದ್ಯ ತಮ್ಮ ಖಾತೆ ರದ್ದಾದ ಬೆನ್ನಲ್ಲೇ, ರಾಹುಲ್ ಗಾಂಧಿ ಟ್ವಿಟರ್ ವಿರುದ್ಧ ಕಿಡಿ ಕಾರಿದ್ದಾರೆ.
ಟೋಕಿಯೋ ಪ್ಯಾರಾಲಿಂಪಿಕ್ಸ್: ಭಾರತದ ಕ್ರೀಡಾಳುಗಳಿಗೆ ಬೀಳ್ಕೊಡುಗೆ
ಕೋವಿಡ್ ನಡುವೆಯೂ ಬಹುನಿರೀಕ್ಷಿತ ಟೋಕಿಯೋ ಪ್ಯಾರಾಲಿಂಪಿಕ್ಸ್ ಆಗಸ್ಟ್ 24ರಿಂದ ಆರಂಭವಾಗಲಿದ್ದು, ಭಾರತ ಈ ಬಾರಿ ದಾಖಲೆಯ 54 ಕ್ರೀಡಾಪಟುಗಳನ್ನು ಕಣಕ್ಕಿಳಿಸಲಿದೆ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ 19 ಮಂದಿ ಸ್ಪರ್ಧಿಸಿದ್ದೇ ದೇಶದ ಈ ವರೆಗಿನ ಗರಿಷ್ಠ ಸ್ಪರ್ಧೆಯ ದಾಖಲೆಯಾಗಿತ್ತು.
ಶ್ರೀದೇವಿ ಹುಟ್ಟುಹಬ್ಬ: ಗಂಡನ ಚಿತ್ರದ ನಟಿಯರ ಹೆಸರನ್ನು ಮಕ್ಕಳಿಗಿಟ್ಟ ಎವರ್‌ಗ್ರೀನ್ ನಟಿ!
ಬಾಲಿವುಡ್ ಫಿಮೇಲ್ ಸೂಪರ್ ಸ್ಟಾರ್ ಶ್ರೀದೇವಿ ಪರಿಚಯವೇ ಬೇಡ. ದಶಕಗಳ ಕಾಲ ಬಹುಭಾಷಾ ನಟಿಯಾಗಿ ಸುಮಾರು 300 ಸಿನಿಮಾಗಳಲ್ಲಿ ಮಿಂಚಿದ ತಾರೆ. ನಿಮಗೆ ಶ್ರೀದೇವಿ ಬಗ್ಗೆ ತಿಳಿಯದ ವಿಚಾರಗಳನ್ನು ತಿಳಿಸುವ ಮೂಲಕ ನಟಿಯ ಜರ್ನಿಯನ್ನು ನೆನಪಿಸಿಕೊಳ್ಳೋಣ.
ಕೆಲ ವರ್ಷಗಳಲ್ಲಿ ಕೋವಿಡ್ ಮಕ್ಕಳ ರೋಗವಾಗಬಹುದು: ಅಧ್ಯಯನ
ಮುಂದಿನ ಕೆಲ ವರ್ಷಗಳಲ್ಲಿ ಕೋವಿಡ್-19 ವೈರಸ್ ಕೂಡ ಇನ್ನಿತರ ಸಾಮಾನ್ಯ ನೆಗಡಿಕಾರಕ ವೈರಸ್‌ನಂತಾಗಬಹುದು. ಅದರಲ್ಲೂ ವಿಶೇಷವಾಗಿ ಇದು ಮಕ್ಕಳನ್ನು ಮಾತ್ರ ಬಾಧಿಸುವ ವೈರಸ್ ಆಗಬಹುದು ಎಂದು ಅಧ್ಯಯನವೊಂದು ಹೇಳಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.