ಐಸಿಸಿ ಟಿ20 ವಿಶ್ವಕಪ್ ಗೆಲ್ಲಬಲ್ಲ 2 ತಂಡಗಳನ್ನು ಹೆಸರಿಸಿದ ಹರ್ಷಲ್‌ ಗಿಬ್ಸ್‌..!

By Suvarna NewsFirst Published Aug 13, 2021, 3:07 PM IST
Highlights

* ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭ

* ಅಕ್ಟೋಬರ್ 17ರಿಂದ ನವೆಂಬರ್ 14ರ ವರೆಗೆ ನಡೆಯಲಿದೆ ಟಿ20 ವಿಶ್ವಕಪ್

* ಪ್ರಶಸ್ತಿ ಫೇವರೇಟ್‌ ಭವಿಷ್ಯ ನುಡಿದ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಗಿಬ್ಸ್‌

ಜೊಹಾನ್ಸ್‌ಬರ್ಗ್‌(ಆ.13): ಮುಂಬರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡ ಹಾಗೂ ಇಂಗ್ಲೆಂಡ್‌ ಪ್ರಶಸ್ತಿ ಗೆಲ್ಲಬಲ್ಲ ನೆಚ್ಚಿನ ತಂಡಗಳಾಗಿವೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಹರ್ಷಲ್‌ ಗಿಬ್ಸ್ ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ ನಡೆಯಬೇಕಿದ್ದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಕೋವಿಡ್ ಭೀತಿಯಿಂದಾಗಿ ಯುಎಇ ಹಾಗೂ ಓಮನ್‌ಗೆ ಸ್ಥಳಾಂತರಗೊಂಡಿದ್ದು, ಅಕ್ಟೋಬರ್ 17ರಿಂದ ನವೆಂಬರ್ 14ರ ವರೆಗೆ ನಡೆಯಲಿದೆ. ಕ್ರಿಕೆಟ್ ಪಾಕಿಸ್ತಾನ ಜತೆ ಸಂಭಾಷಣೆ ನಡೆಸಿದ ಗಿಬ್ಸ್‌ ವಿಶ್ವಕಪ್ ಗೆಲ್ಲಬಲ್ಲ ನೆಚ್ಚಿನ ತಂಡಗಳನ್ನು ಹೆಸರಿಸಿದ್ದಾರೆ. ಈ ಬಾರಿ ಪಾಕಿಸ್ತಾನ ಕ್ರಿಕೆಟ್ ತಂಡವು ಟಿ20 ವಿಶ್ವಕಪ್ ಗೆಲ್ಲಲಿದೆಯೇ ಎನ್ನುವುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ, ಆದರೆ ಭಾರತ ಹಾಗೂ ಇಂಗ್ಲೆಂಡ್‌ಗೆ ಉತ್ತಮ ಅವಕಾಶವಿದೆ. ಯುಎಇನಲ್ಲಿ ತಿರುವ ಪಡೆಯುವ ಪಿಚ್‌ ರೂಪಿಸಿದರೆ ಹಾಲಿ ಚಾಂಪಿಯನ್‌ ವೆಸ್ಟ್‌ ಇಂಡೀಸ್ ತಂಡಕ್ಕೆ ಪ್ರಶಸ್ತಿ ಉಳಿಸಿಕೊಳ್ಳುವುದು ಕಷ್ಟವಾಗಬಹುದು. ವಿಂಡೀಸ್ ಬ್ಯಾಟ್ಸ್‌ಮನ್‌ಗಳು ಚೆಂಡು ನೇರವಾಗಿ ಬ್ಯಾಟ್‌ಗೆ ಬರುವುದನ್ನು ಹೆಚ್ಚು ಇಷ್ಟಪಡುತ್ತಾರೆ. ಪಿಚ್‌ನಲ್ಲಿ ಚೆಂಡು ಸ್ವಲ್ಪ ಸ್ಪಿನ್ ಆದರೂ ವಿಂಡೀಸ್‌ ಪಾಲಿಗೆ ಮುಳುವಾಗಬಹುದು ಎಂದು ಗಿಬ್ಸ್ ಹೇಳಿದ್ದಾರೆ.

ಭಾರತ ವಿರುದ್ಧ ಸರಣಿ: ಲಂಕಾಗೆ 107 ಕೋಟಿ ರುಪಾಯಿ ಆದಾಯ!

ಖಂಡಿತವಾಗಿಯೂ ಇಂಗ್ಲೆಂಡ್‌, ಪಾಕಿಸ್ತಾನ ಹಾಗೂ ಭಾರತ ತಂಡಗಳು ಕಪ್ ಗೆಲ್ಲಬಹುದು. ಯಾರಿಗೆ ಪರಿಸ್ಥಿತಿ ಚೆನ್ನಾಗಿದ್ದರೆ ಶ್ರೀಲಂಕಾ ಇಲ್ಲವೇ ಬಾಂಗ್ಲಾದೇಶ ಕೂಡಾ ವಿಶ್ವಕಪ್ ಗೆಲ್ಲಬಹುದು ಎಂದು ಗಿಬ್ಸ್ ಹೇಳಿದ್ದಾರೆ.

ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯು ಈಗಾಗಲೇ ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಿದ್ದು, ಕೇನ್‌ ವಿಲಿಯಮ್ಸನ್‌ ತಂಡವನ್ನು ಮುನ್ನಡೆಸಲಿದ್ದಾರೆ. ಹಿರಿಯ ಅನುಭವಿ ಆಟಗಾರರಾದ ರಾಸ್ ಟೇಲರ್ ಹಾಗೂ ಆಲ್ರೌಂಡರ್ ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ ಕಿವೀಸ್ ವಿಶ್ವಕಪ್‌ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದಾರೆ.
 

Will this group bring home the ' first trophy?

Kane Williamson’s squad has been named 👇 pic.twitter.com/6qmhrRpXOu

— T20 World Cup (@T20WorldCup)
click me!