ಕೊರೋನಾ ಎಫೆಕ್ಟ್: ಏಷ್ಯಾಕಪ್ ಕ್ರಿಕೆಟ್ ಟೂರ್ನಿ ನಡೆಯೋದು ಅನುಮಾನ..!

By Suvarna News  |  First Published Mar 26, 2020, 10:41 AM IST

ಈಗಾಗಲೇ ಐಪಿಎಲ್, ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಬಲಿ ಪಡೆದಿರುವ ಕೊರೋನಾ ವೈರಸ್, ಇದೀಗ ಏಷ್ಯಾಕಪ್ ಟೂರ್ನಿಯ ಮೇಲೂ ಕಾರ್ಮೋಡವನ್ನುಂಟು ಮಾಡಿದೆ. ಈ ಕುರಿತಾದ ರಿಫೋರ್ಟ್ ಇಲ್ಲಿದೆ ನೋಡಿ.


ನವದೆಹಲಿ(ಮಾ.26): ಕೊರೋನಾ ವೈರಸ್ ಎನ್ನುವ ಮಹಾಮಾರಿ ಈಗಾಗಲೇ ಸಾವಿರಾರು ಮಂದಿಯನ್ನು ಬಲಿ ಪಡೆದಿದೆ. ಇದರ ಜತೆಗೆ ಕೋವಿಡ್ 19 ವೈರಸ್ ಬಿಸಿ ಕ್ರೀಡಾ ಕ್ಷೇತ್ರಕ್ಕೂ ತಟ್ಟಿದ್ದು, ಈಗಾಗಲೇ ಹಲವು ಟೂರ್ನಿಗಳು ರದ್ದಾಗಿವೆ.

ಇದರ ಬೆನ್ನಲ್ಲೇ ಇದೀಗ ಈ ಬಾರಿಯ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯೂ ನಡೆಯೋದು ಅನುಮಾನ ಎನಿಸಿದೆ. ಹೌದು, ಎಲ್ಲ ಅಂದುಕೊಂಡಂತೆ ಆಗಿದ್ದರೆ ಈ ಬಾರಿ ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಬೇಕಿತ್ತು. ಆದರೆ ಪಾಕಿಸ್ತಾನದಲ್ಲಿ ಟೂರ್ನಿ ನಡೆಯುವುದು ಅನುಮಾನ ಎನಿಸಿದ್ದರಿಂದ ಬೇರೆ ಸ್ಥಳದಲ್ಲಿ ನಡೆಸುವ ಕುರಿತಂತೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮೀಟಿಂಗ್ ಆಯೋಜಿಸಿತ್ತು. ಆದರೆ ಕೊರೋನಾ ಭೀತಿಯಿಂದಾಗಿ ಮಾತುಕತೆಯು ರದ್ದಾಗಿತ್ತು. ಇದಾದ ಬಳಿಕ ಎಸಿಸಿ ಟೆಲಿಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಲು ಮುಂದಾಗಿತ್ತಾದರೂ, ಅದು ಕೂಡಾ ಮುಂದೂಡಲ್ಟಟ್ಟಿದೆ.

Latest Videos

undefined

ಏಷ್ಯಾಕಪ್‌ ಆತಿಥ್ಯ ಹಕ್ಕು ಬಿಟ್ಟುಕೊಡಲು ಪಾಕ್‌ ರೆಡಿ?

2020ರ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಯಬೇಕಿದ್ದ ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯವನ್ನು ಪಡೆದುಕೊಂಡಿತ್ತು. ಆದರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪಾಕ್‌ನಲ್ಲಿ ಏಷ್ಯಾಕಪ್ ಟೂರ್ನಿ ನಡೆದರೆ ಭಾರತ ಭಾಗವಹಿಸುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ ಬೆನ್ನಲ್ಲೇ ಸಂಭಾವ್ಯ ಆಯೋಜನೆಯ ಬಗ್ಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆ ಕರೆದಿತ್ತು. ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್‌ನಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಜರುಗಲಿದೆ. ಇದಕ್ಕೆ ಪೂರ್ವಭಾವಿಯಾಗಿ ಈ ಬಾರಿ ಟಿ20 ಏಷ್ಯಾಕಪ್ ಟೂರ್ನಿ ಆಯೋಜಿಸಲು ಎಸಿಸಿ ಮುಂದಾಗಿತ್ತು. ಆದರೆ ಇವೆಲ್ಲ ಯೋಜನೆಗಳು ಕೊರೋನಾದಿಂದಾಗಿ ತಲೆಕೆಳಗಾಗುವ ಸಾದ್ಯತೆಯಿದೆ.

ಏಷ್ಯಾಕಪ್‌ಗೆ ಬರದಿದ್ದರೆ, ಟಿ20 ವಿಶ್ವಕಪ್‌ಗೆ ಬರಲ್ಲ! ಪಾಕ್ ಎಚ್ಚರಿಕೆ

ಇದಾದ ಕೆಲ ದಿನಗಳ ಬಳಿಕ ಪಾಕಿಸ್ತಾನ ತಂಡವು ಏಷ್ಯಾಕಪ್ ಆತಿಥ್ಯ ಬಿಟ್ಟುಕೊಡುವ ತೀರ್ಮಾನಕ್ಕೆ ಬಂದಿದೆ ಎಂದು ವರದಿಯಾಗಿತ್ತು. ಇದಾದ ಬಳಿಕ ಯುಎಇ ಇಲ್ಲವೇ ಬಾಂಗ್ಲದೇಶದಲ್ಲಿ ಏಷ್ಯಾಕಪ್ ಟೂರ್ನಿ ನಡೆಯಬಹುದು ಎನ್ನಲಾಗಿತ್ತು. ಆದರೆ ಕೊರೋನಾ ಎನ್ನುವ ಹೆಮ್ಮಾರಿ ಈ ಟೂರ್ನಿ ಆಯೋಜನೆಗೂ ಕಂಠಕವಾಗುವ ಸಾಧ್ಯತೆಯಿದೆ.

ಏಷ್ಯಾಕಪ್ 2020: ಬಿಸಿಸಿಐಗೆ ಪಾಕ್‌ ಗಡು​ವು

ಈಗಾಗಲೇ ಐಪಿಎಲ್ ಟೂರ್ನಿ ಏಪ್ರಿಲ್ 15ಕ್ಕೆ ಮುಂದೂಡಲ್ಪಟ್ಟಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಐಪಿಎಲ್ ಟೂರ್ನಿ ಸಂಪೂರ್ಣ ರದ್ದಾದರೂ ಅಚ್ಚರಿ ಪಡಬೇಕಿಲ್ಲ. ಇನ್ನು ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವೂ 2021ಕ್ಕೆ ಮುಂದೂಲ್ಟಟ್ಟಿದೆ. 

click me!