ಮಂಕಡ್ ರನೌಟ್ ಮೂಲಕ ಅಭಿಮಾನಿಗಳಿಗೆ ಲಾಕ್‌‌ಡೌನ್‌ ಎಚ್ಚರಿಕೆ ನೀಡಿದ ಅಶ್ವಿನ್!

By Suvarna News  |  First Published Mar 25, 2020, 2:47 PM IST

ಕೊರೋನಾ ವೈರಸ್ ಹರಡುತ್ತಿರುವ ಕಾರಣ ಪ್ರಧಾನಿ ಮೋದಿ ಭಾರತವನ್ನ 21 ದಿನ ಲಾಕ್‌ಡೌನ್ ಮಾಡಿದ್ದಾರೆ. ಇಷ್ಟಾದರೂ ಹಲವರು ಮನೆಯಿಂದ ಹೊರಬಂದು ಓಟಾಡ ನಡೆಸುತ್ತಿದ್ದಾರೆ. ಇದೀಗ ಟೀಂ ಇಂಡಿಯಾ ಸ್ಪಿನ್ನರ್ ಆರ್ ಅಶ್ವಿನ್, ತಮ್ಮ ಮಂಕಡ್ ರನೌಟ್ ಮೂಲಕ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
 


ಚೆನ್ನೈ(ಮಾ.25):  12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಆರ್ ಅಶ್ವಿನ್ ಮಂಕಡ್ ರನೌಟ್ ಮೂಲಕ ರಾಜಸ್ಥಾನ ರಾಯಲ್ಸ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ರನೌಟ್ ಮಾಡಿದ್ದರು. ಇದು ಭಾರಿ ವಿವಾದಕ್ಕೂ ಕಾರಣವಾಗಿತ್ತು. ಆರ್ ಅಶ್ವಿನ್ ಕ್ರೀಡಾ ಸ್ಪೂರ್ತಿ ಮರೆತು ರನೌಟ್ ಮಾಡಿದ್ದಾರೆ ಅನ್ನೋ ಟೀಕೆ ಎದರಿಸಿದ್ದರು. ಇದರ ಬೆನ್ನಲ್ಲೇ ಆರ್ ಅಶ್ವಿನ್ ತಮ್ಮ ನಿರ್ಧಾರವನ್ನ ಸ್ವಾಗತಿಸಿದ್ದರು. ಬಳಿಕ ಅಶ್ವಿನ್ ಪ್ರತಿ ಬಾರಿ ಟ್ರೋಲ್ ಆಗುತ್ತಲೇ ಇದ್ದರು. ಇದೀಗ ತಮ್ಮ ಮಂಕಡ್ ರನೌಟ್ ಮೂಲಕ ಫನ್ನಿಯಾಗಿ ಅಭಿಮಾನಿಗಳನ್ನು ಎಚ್ಚರಿಸಿದ್ದಾರೆ.

ಪ್ರಧಾನಿ ಮೋದಿ ನಿರ್ಧಾರ ಸ್ವಾಗತಿಸಿದ ನಾಯಕ ವಿರಾಟ್ ಕೊಹ್ಲಿ!

Tap to resize

Latest Videos

ಕೊರೋನಾ ವೈರಸ್ ಹರಡದಂತೆ ತಡೆಯಲು ಆರ್ ಅಶ್ವಿನ್ ಇದೀಗ ಮಂಕಡ್ ರನೌಟ್ ಟ್ವೀಟ್ ಮಾಡಿದ್ದಾರೆ. ಪ್ರಧಾನಿ ಮೋದಿ 21 ದಿನ ಲಾಕ್‌ಡೌನ್ ಆದೇಶ ಹೊರಡಿಸಿದ್ದಾರೆ. ಇಂದಿನಿಂದ(ಮಾ.25) ಸಂಪೂರ್ಣ ಭಾರತ ಲಾಕ್‌ಡೌನ್ ಮಾಡಲಾಗಿದೆ. ಜೊತೆಗೆ ಎಲ್ಲರೂ ಮನೆಯಲ್ಲೇ ಇರಲು ಮನವಿ ಮಾಡಿದ್ದಾರೆ. ಇದೀಗ ಆರ್ ಅಶ್ವಿನ್ ಎಲ್ಲರೂ ಒಳಗಿರಿ, ಹೊರಬಂದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತಮ್ಮ ಮಂಕಡ್ ರನೌಟ್ ಘಟನೆ ಮೂಲಕ ಜನರಿಗೆ ಎಚ್ಚರಿಸಿದ್ದಾರೆ.

ಜೋಸ್ ಬಟ್ಲರ್ ಕ್ರೀಸ್ ಬಿಟ್ಟು ಹೊರಬಂದ ಕಾರಣ ಅಶ್ವಿನ್ ರನೌಟ್ ಮಾಡಿದ್ದರು. ಇದೀಗ ಜನರು ತಮ್ಮ ಮನೆ ಬಿಟ್ಟು ಹೊರಬರಬೇಡಿ, ಬಂದರೆ ವೈರಸ್ ಪ್ರಕರಣ ಹೆಚ್ಚಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ. 

ಅಭಿಮಾನಿಯೋರ್ವ ಈ ಫೋಟೋ ಹಾಗೂ ಸಂದೇಶ ರವಾನಿಸಿದ್ದಾನೆ. ಮಂಕಡ್ ರನೌಟ್‌ಗೆ ಇಂದಿಗೆ ಸರಿಯಾಗಿ 1 ವರ್ಷ. ಇದೀಗ ಭಾರತ ಲಾಕ್‌ಡೌನ್ ಆಗಿದೆ. ಈ ವೇಳೆ ಎಲ್ಲರಿಗೂ ನೆನಪಿಸಬಯುಸುವುದೇನೆಂದರೆ ಯಾರೂ ಹೊರಬರಬೇಡಿ, ಒಳಗಿರಿ, ಆರೋಗ್ಯವಾಗಿರಿ ಎಂದು ಟ್ವೀಟ್ ಮಾಡಿದ್ದಾರೆ.

 

Hahaha, somebody sent me this and told me it's exactly been 1 year since this run out happened.

As the nation goes into a lockdown, this is a good reminder to my citizens.

Don't wander out. Stay inside, stay safe! pic.twitter.com/bSN1454kFt

— lets stay indoors India 🇮🇳 (@ashwinravi99)

ಕಳೆದ ವರ್ಷ ಮಾರ್ಚ್ 25 ರಂದು ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಲೀಗ್ ಪಂದ್ಯದಲ್ಲಿ ಆರ್ ಅಶ್ವಿನ್ ಮಂಕಡ್ ರನೌಟ್ ಮಾಡಿದ್ದರು. ಇದೀಗ ಈ ವಿವಾದಾತ್ಮಕ ರನೌಟ್‌ಗೆ 1 ವರ್ಷ ಸಂದಿದೆ. ಈ ಬಾರಿಯ ಐಪಿಎಲ್ ಟೂರ್ನಿ ಆಯೋಜನೆ ಅನುಮಾನವಾಗಿದೆ. ಹೀಗಾಗಿ ಎಲ್ಲಾ ಕ್ರಿಕೆಟಿಗರು ಮನೆಯೊಳಗೆ ಬಂಧಿಯಾಗಿದ್ದಾರೆ. 

click me!