ಆಫ್ರಿಕಾದಲ್ಲಿ ಭಾರತದ ಕೊರ್‌ಕಾಮ್ ಸಂಸ್ಥೆಯಿಂದ ಟಿ20 ಕ್ರಿಕೆಟ್‌ಗೆ ಉತ್ತೇಜನ!

By Suvarna News  |  First Published Feb 10, 2023, 7:42 PM IST

ಮುಂಬೈ ಮೂಲದ ಸಂಸ್ಥೆ ಇದೀಗ ದಕ್ಷಿಣ ಆಫ್ರಿಕಾದಲ್ಲಿನ ಟಿ20 ಕ್ರಿಕೆಟ್‌ಗೆ ಹೊಸ ವೇಗ ನೀಡಲು ಮುಂದಾಗಿದೆ. ಆಫ್ರಿಕಾ ಟಿ20 ಲೀಗ್ ಟೂರ್ನಿ ಜೊತೆ ಮತ್ತಷ್ಟು ಕ್ರಿಕೆಟ್ ಟೂರ್ನಿ ಆಯೋಜಿಸಿ ಕ್ರಿಕೆಟನ್ನು ಜಾಗತಿಕ ಕ್ರೀಡೆಯನ್ನಾಗಿ ಮಾಡಲು ಯೋಜನೆ ರೂಪಿಸಿದೆ. 
 


ಮುಂಬೈ(ಫೆ.10) ಭಾರತದ ಪ್ರತಿಷ್ಠಿತ ಜಾಗತಿಕ ಮಟ್ಟದ ಕ್ರೀಡಾ ನಿರ್ವಹಣಾ ಸಂಸ್ಥೆ ಕೊರಕಾಮ್ ಮೀಡಿಯಾ ವೆಂಚರ್ಸ್‌ ಆಫ್ರಿಕಾ ಕ್ರಿಕೆಟ್ ಸಂಸ್ಥೆ (ಎಸಿಎ) ಜೊತೆ ಬಹುಕೋಟಿ ಒಪ್ಪಂದಕ್ಕೆ ಸಹಿ ಹಾಕಿದೆ. ಸಂಸ್ಥೆಯು ಆಫ್ರಿಕಾದಲ್ಲಿ ಜನಪ್ರಿಯ ಆಫ್ರಿಕಾ ಕಪ್ ಟಿ20, ಆಫ್ರಿಕನ್ ಪ್ರೀಮಿಯರ್ ಲೀಗ್ ಟಿ20 ಹಾಗೂ ಮಹಿಳಾ ಆಫ್ರಿಕಾ ಕಪ್ ಟಿ20 ಸೇರಿ ಇನ್ನೂ ಕೆಲ ಟೂರ್ನಿಗಳನ್ನು ಆಯೋಜಿಸಲಿದ್ದು, ಪ್ರಸಾರ, ಹಂಚಿಕೆ ಹಾಗೂ ಹಣಕಾಸು ನಿರ್ವಹಣೆಯನ್ನೂ ಮಾಡಲಿದೆ.2023ರಿಂದ ಪ್ರಾರಂಭಗೊಳ್ಳಲಿರುವ ಈ ಒಪ್ಪಂದವು 10 ವರ್ಷಗಳ ಕಾಲ ಚಾಲ್ತಿಯಲ್ಲಿ ಇರಲಿದ್ದು, ಕ್ರಿಕೆಟ್ ಆಟವನ್ನು ಪ್ರೀತಿಸುವ ಆಫ್ರಿಕಾ ಖಂಡದ ಯುವ ಹಾಗೂ ಪ್ರತಿಭಾನ್ವಿತ ಕ್ರಿಕೆಟಿಗರಿಗೆ ಹಲವು ಅವಕಾಶಗಳನ್ನು ಕಲ್ಪಿಸಲಿದೆ. ಅಷ್ಟು ಮಾತ್ರವಲ್ಲದೆ, ಕ್ರಿಕೆಟನ್ನು ಜಾಗತಿಕ ಕ್ರೀಡೆಯನ್ನಾಗಿಸಿ, ಆದಷ್ಟು ಬೇಗ ಒಲಿಂಪಿಕ್ಸ್‌ಗೆ ಸೇರ್ಪಡೆಗೊಳಿಸಬೇಕು ಎನ್ನುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಯ ಕನಸಿಗೂ ಕೈಜೋಡಿಸಲಿದೆ.

‘ಕೊರ್‌ಕಾಮ್ ಮೀಡಿಯಾ ವೆಂಚರ್ಸ್‌ ಸಂಸ್ಥೆಯ ಜೊತೆ ದೀರ್ಘಾವಧಿಗೆ ಒಪ್ಪಂದ ಮಾಡಿಕೊಳ್ಳಲು ಬಹಳ ಖುಷಿಯಾಗುತ್ತಿದೆ. ಆಫ್ರಿಕಾದಲ್ಲಿ ಪುರುಷರ ಹಾಗೂ ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ಸಂಸ್ಥೆಯು ತನ್ನದೇ ರೀತಿಯಲ್ಲಿ ಕೊಡುಗೆ ನೀಡಲಿದೆ. ಎಸಿಎಗೆ ಸರಿಹೊಂದುವ ಮೌಲ್ಯ ಹಾಗೂ ಬದ್ಧತೆಯನ್ನು ಕೊರ್‌ಕಾಮ್ ಸಂಸ್ಥೆ ಹೊಂದಿದ್ದು, ಈ ಒಪ್ಪಂದವು ನಿರೀಕ್ಷೆಗೂ ಮೀರಿದ ಯಶಸ್ಸು ತಂದುಕೊಡಲಿದೆ ಎನ್ನುವ ನಂಬಿಕೆ ಇದೆ’ ಎಂದು ಆಫ್ರಿಕಾ ಕ್ರಿಕೆಟ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಕಾಸಿಮ್ ಸುಲೈಮಾನ್ ಭರವಸೆ ವ್ಯಕ್ತಪಡಿಸಿದ್ದಾರೆ.

Tap to resize

Latest Videos

T20I ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಹೆಸರಿನಲ್ಲಿರುವ ಈ 3 ದಾಖಲೆ ಶುಭ್‌ಮನ್‌ ಗಿಲ್ ಮುರಿಯಬಹುದು..!

ಕೊರ್‌ಕಾಮ್ ಸಂಸ್ಥೆಯು 2022ರ ಸೆಪ್ಟೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾದ ಬೆನೊನಿಯಲ್ಲಿ ಚೊಚ್ಚಲ ಆವೃತ್ತಿಯ ಆಫ್ರಿಕಾ ಕಪ್ ಟಿ20 ಟೂರ್ನಿಯನ್ನು ಆಯೋಜಿಸಿತ್ತು. ಈ ಪಂದ್ಯಾವಳಿಯಲ್ಲಿ ಐಸಿಸಿಯ 8 ಸಹಾಯಕ ಸದಸ್ಯ ರಾಷ್ಟ್ರಗಳಾದ ಕೀನ್ಯಾ, ಘಾನಾ, ಕ್ಯಾಮರೂನ್, ಉಗಾಂಡ, ಮಲಾವಿ, ತಾಂಜಾನಿಯಾ, ಬೋಟ್ಸ್ವಾನಾ ಹಾಗೂ ಮೊಂಜಾಬಿಕ್ ಪಾಲ್ಗೊಂಡಿದ್ದವು.

ಪಂದ್ಯಾವಳಿಯು 157 ದೇಶಗಳಲ್ಲಿ ನೇರ ಪ್ರಸಾರಗೊಂಡಿತ್ತು. ದಕ್ಷಿಣ ಹಾಗೂ ಸಬ್ ಸಹಾರ ಆಫ್ರಿಕಾದಲ್ಲಿ ಸೂಪರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಪಂದ್ಯಗಳು ಪ್ರಸಾರವಾದರೆ, ಭಾರತೀಯ ಉಪಖಂಡದಲ್ಲಿ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್, ಮಧ್ಯ ಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಹಾಗೂ ಯುರೋಪ್‌ನಲ್ಲಿ ದುಬೈ ಸ್ಪೋರ್ಟ್ಸ್, ಯುಕೆ ಹಾಗೂ ಐರ್ಲೆಂಡ್‌ನಲ್ಲಿ ಪ್ಲೇ ಸ್ಪೋರ್ಟ್ಸ್, ಅಮೆರಿಕ ಹಾಗೂ ಕೆನಡಾದಲ್ಲಿ ವಿಲ್ಲೋ ಟಿವಿ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಮಲೇಷ್ಯಾ ಹಾಗೂ ಸಿಂಗಾಪುರದಲ್ಲಿ ಯುಪ್ ಟಿವಿ, ಕೆರಿಬಿಯನ್ ದ್ವೀಪ್‌ಗಳಲ್ಲಿ ಫ್ಲೋ ಸ್ಪೋರ್ಟ್ಸ್ ವಾಹಿನಿಗಳಲ್ಲಿ ಪಂದ್ಯಗಳು ಪ್ರಸಾರಗೊಂಡಿದ್ದವು.

‘ಕೊರ್‌ಕಾಮ್ ಮೀಡಿಯಾ ವೆಂಚರ್ಸ್‌ಗೆ ಇದೊಂದು ಮಹತ್ವದ ಮೈಲಿಗಲ್ಲು. ನಮ್ಮ ಈ ಪ್ರಯತ್ನವು ಆಫ್ರಿಕಾದಲ್ಲಿ ಕ್ರಿಕೆಟ್‌ಗೆ ದೊಡ್ಡ ಉತ್ತೇಜನ ನೀಡಲಿದ್ದು ಯುವ ಕ್ರಿಕೆಟಿಗರಿಗೆ ಉತ್ತಮ ವೇದಿಕೆ ಒದಗಿಸಲಿದೆ ಎನ್ನುವ ವಿಶ್ವಾಸವಿದೆ’ ಎಂದು ಕೊರ್‌ಕಾಮ್ ಮೀಡಿಯಾ ವೆಂಚರ್ಸ್‌ ಸಂಸ್ಥೆಯ ಸಹ ಸಂಸ್ಥಾಪಕ ನಿರಾಳ ಸಿಂಗ್ ಹೇಳಿದ್ದಾರೆ.

 

ಚುಟುಕು ವಿಶ್ವಕಪ್ ಗೆದ್ದ ಭಾರತ ಅಂಡರ್ 19 ಮಹಿಳಾ ತಂಡಕ್ಕೆ ರಾಹುಲ್ ದ್ರಾವಿಡ್ ವಿಶೇಷ ಸಂದೇಶ..!

‘ಕೊರ್‌ಕಾಮ್ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಕ್ರೀಡಾಕೂಟಗಳನ್ನು ಹಲವು ವರ್ಷಗಳಿಂದ ಯಶಸ್ವಿಯಾಗಿ ಆಯೋಜಿಸುತ್ತಾ ಬಂದಿದೆ. ಇದರಲ್ಲಿ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಲೀಗ್‌ಗಳು, ದೊಡ್ಡ ಪ್ರಮಾಣದ ಪ್ರಾಯೋಜಕತ್ವಗಳೂ ಸೇರಿವೆ’ ಎಂದು ಕೊರ್‌ಕಾಮ್‌ನ ಮತ್ತೊಬ್ಬ ಸಹ ಸಂಸ್ಥಾಪಕ ವಿವೇಕ್ ತಿವಾರಿ ಹೇಳಿದ್ದಾರೆ.

ಆಫ್ರಿಕಾದಲ್ಲಿ ಕ್ರಿಕೆಟ್ ಬೆಳವಣಿಗೆಗಾಗಿ ಶ್ರಮಿಸುತ್ತಿರುವ ಸಂಸ್ಥೆ ಇದು. 1997ರಲ್ಲಿ ಸ್ಥಾಪನೆಗೊಂಡಿದ್ದು, 23 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಆಫ್ರಿಕಾ  ಕಪ್ ಟಿ20, ಆಫ್ರಿಕಾ ಮಹಿಳಾ ಟಿ20 ಚಾಂಪಿಯನ್‌ಶಿಪ್, ಆಫ್ರೋ-ಏಷ್ಯಾಕಪ್ ಸೇರಿ ಇನ್ನೂ ಕೆಲ ಟೂರ್ನಿಗಳನ್ನು ಎಸಿಎ ಆಯೋಜಿಸಲಿದೆ.
 

click me!