ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಜಡೇಜಾ ಕೈಗೆ ಹಚ್ಚಿದ ಕ್ರೀಮ್ ಮಾಹಿತಿ ಬಹಿರಂಗ!

By Suvarna NewsFirst Published Feb 10, 2023, 5:46 PM IST
Highlights

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ಎರಡೂ ದಿನವೂ ಉತ್ತಮ ಹೋರಾಟ ನೀಡಿದೆ. ಮೊದಲ ದಿನ ಆಸ್ಟ್ರೇಲಿಯಾ ತಂಡವನ್ನು 177 ರನ್‌ಗೆ ಆಲೌಟ್ ಮಾಡಿತ್ತು. ರವೀಂದ್ರ ಜಡೇಜಾ 5 ವಿಕೆಟ್ ಕಬಳಿಸಿ ಆಸಿಸ್ ತಂಡಕ್ಕೆ ಮಾರಕವಾಗಿದ್ದರು. ಇದೇ ವೇಳೆ ರವೀಂದ್ರ ಜಡೇಜಾ ಕೈಗೆ ಕ್ರೀಮ್ ಹಚ್ಚಿ ಬಾಲ್ ಟ್ಯಾಂಪರಿಂಗ್ ಮೂಲಕ ವಿಕೆಟ್ ಪಡೆದಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಈ ಕುರಿತು ಟೀಂ ಮ್ಯಾನೇಜ್ಮೆಂಟ್ ಮ್ಯಾಚ್ ರೆಫ್ರಿಗೆ ವಿವರಣೆ ನೀಡಿದೆ.
 

ನಾಗ್ಪುರ(ಫೆ.10): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯದಲ್ಲಿ ಹುಟ್ಟಿಕೊಂಡ ವಿವಾದಕ್ಕೆ ಬಿಸಿಸಿಐ ಸ್ಪಷ್ಟನೆ ನೀಡಿದೆ. ಮೊದಲ ದಿನದಾಟದಲ್ಲಿ ರವೀಂದ್ರ ಜಡೇಜಾ ಸ್ಪಿನ್ ಮೋಡಿಗೆ ಆಸ್ಟ್ರೇಲಿಯಾ ತತ್ತರಿಸಿತ್ತು. ಸ್ಟೀವನ್ ಸ್ಮಿತ್, ರೇನ್ಶಾ, ಹ್ಯಾಂಡ್ಸ್‌ಕಾಂಬ್ ಸೇರಿದಂತೆ ಘಟಾನುಘಟಿ ಬ್ಯಾಟ್ಸ್‌ಮನ್‌ಗಳು ಜಡೇಜಾ ಸ್ಪಿನ್ ದಾಳಿಗೆ ವಿಕೆಟ್ ಕೈಚೆಲ್ಲಿದರು. ಜಡೇಜಾ  5 ವಿಕೆಟ್ ಕಬಳಿಸಿದರು. ಈ ಮೂಲಕ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 177 ರನ್‌ಗೆ ಆಲೌಟ್ ಆಗಿತ್ತು. ಆದರೆ ರವೀಂದ್ರ ಜಡೇಜಾ ಕೈಗೆ ಕ್ರೀಮ್ ಹಚ್ಚಿ ಬೌಲಿಂಗ್ ಮಾಡಿದ್ದಾರೆ ಅನ್ನೋ ವಿವಾದ ಹುಟ್ಟಿಕೊಂಡಿತ್ತು.ಮೊಹಮ್ಮದ್ ಸಿರಾಜ್, ಜಡೇಜಾ ಕೈಗೆ ಕ್ರೀಮ್ ಹಚ್ಚುತ್ತಿರುವ ವಿಡಿಯೋ ಭಾರಿ ವೈರಲ್ ಆಗಿತ್ತು.  ಈ ಕುರಿತು ಟೀಂ ಮ್ಯಾನೇಜ್ಮೆಂಟ್, ಐಸಿಸಿ ಮ್ಯಾಚ್ ರೆಫ್ರಿ ಆ್ಯಂಡಿ ಪೇಕ್ರಾಫ್ಟ್‌ಗೆ ವಿವರಣೆ ನೀಡಿದೆ. 

ಆಸ್ಟ್ರೇಲಿಯಾ (India vs Australia test) 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ, ಮೊಹಮ್ಮದ್ ಸಿರಾಜ್ ಆಗಮಿಸಿ ರವೀಂದ್ರ ಜಡೇಜಾ(Ravindra jadeja) ಕೈಗೆ ಕ್ರೀಮ್ ಹಚ್ಚಿದ್ದರು. ಬಳಿಕ ಜಡೇಜಾ ಬೌಲಿಂಗ್ ಮಾಡಿದ್ದಾರೆ. ರವಿಂದ್ರ ಜಡೇಜಾ ಗಾಯದಿಂದ ರಿಲೀಫ್(Pain Relief ) ಸಿಗಲು ಕ್ರೀಮ್(Cream) ಹಚ್ಚಿದ್ದಾರೆ. ಜಡೇಜಾ ಕೈಬೆರಳು ಗಾಯಗೊಂಡಿರುವ ಕಾರಣ ಕ್ರೀಮ್ ಹಚ್ಚಲಾಗಿದೆ. ಇದರಲ್ಲಿ ಬೇರೆ ದುರುದ್ದೇಶ ಇಲ್ಲ ಎಂದು ಟೀಂ ಮ್ಯಾನೇಜ್ಮೆಂಟ್ ರೆಫ್ರಿಗೆ ವಿವರಣೆ ನೀಡಿದೆ.

ರೋಹಿತ್ ದಾಖಲೆಯ ಶತಕ, ಜಡೇಜಾ ಅಕ್ಸರ್ ದಿಟ್ಟ ಹೋರಾಟ, 144 ರನ್ ಮುನ್ನಡೆಯಲ್ಲಿ ಭಾರತ!

ಟೀಂ ಮ್ಯಾನೇಜ್ಮೆಂಟ್ ಸ್ಪಷ್ಟನೆಯಿಂದ ರವೀಂದ್ರ ಜಡೇಜಾ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಇಷ್ಟೇ ಅಲ್ಲ ಯಾವುದೇ ದಂಡ ವಿಧಿಸಿಲ್ಲ. ಇತ್ತ ಆಸ್ಟ್ರೇಲಿಯಾ ತಂಡ ಕೂಡ ಜಡೇಜಾ ಹಾಗೂ ಭಾರತದ ವಿರುದ್ಧ ಯಾವುದೇ ಆರೋಪ ಮಾಡಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತು. ಹೀಗಾಗಿ ವಿವಾದ ದೊಡ್ಡದಾಗುವ ಮೊದಲೇ ಟೀಂ ಮ್ಯಾನೇಜ್ಮೆಂಟ್ ಸ್ಪಷ್ಟನೆ ನೀಡಿದೆ

ಆಸ್ಟ್ರೇಲಿಯಾ ಮಾಧ್ಯಮ ಈ ವಿಡಿಯೋ ಹಿಡಿದು ಟೀಂ ಇಂಡಿಯಾ ಮೇಲೆ ಆರೋಪ ಮಾಡಿತ್ತು. ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ಯತ್ನ ನಡೆದಿದೆ ಎಂದು ಆರೋಪಿಸಿತ್ತು. ಹೀಗಾಗಿ ವಿವಾದ ಭಾರಿ ಗದ್ದಲ ಸೃಷ್ಟಿಸುವ ಸಾಧ್ಯತೆ ಇತ್ತು. ಆಸೀಸ್ ಪ್ರಮುಖ ವಿಕೆಟ್ ಕಳೆದುಕೊಳ್ಳಲು ಬಾಲ್ ಟ್ಯಾಂಪರಿಂಗ್ ಕಾರಣ ಎಂದು ಆಸ್ಟ್ರೇಲಿಯಾ ಮಾಧ್ಯಮಗಳು ಬಿಂಬಿಸಿತ್ತು.

Nagpur Test: ಭಾರತದ ಸ್ಪಿನ್ ಜಾಲಕ್ಕೆ ಸಿಲುಕಿದ ಕಾಂಗರೂ ಪಡೆ, ಸಾಧಾರಣ ಮೊತ್ತಕ್ಕೆ ಆಲೌಟ್..!

ಆಸ್ಪ್ರೇ​ಲಿಯಾ ವಿರುದ್ಧ ​ಟೆ​ಸ್ಟ್‌ನ ಮೊದಲ ದಿನ 5 ವಿಕೆಟ್‌ ಕಿತ್ತ ಎಡಗೈ ಸ್ಪಿನ್ನರ್‌ ರವೀಂದ್ರ ಜಡೇಜಾ ವಿರುದ್ಧ ಆಸ್ಪ್ರೇಲಿಯಾದ ಮಾಧ್ಯಮ ಚೆಂಡು ವಿರೂಪ ಆರೋಪ ಮಾಡಿತ್ತು. ಇದು ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಮೊದಲ ದಿನದಾಟದ ವೇಳೆ ಬೌಲಿಂಗ್‌ಗೆ ತಯಾ​ರಾ​ಗು​ತ್ತಿದ್ದ ಜಡೇಜಾ, ವೇಗಿ ಸಿರಾಜ್‌ ಅವರ ಕೈಯಿಂದ ದ್ರವವನ್ನು ತೆಗೆದು ತಮ್ಮ ಎಡಗೈ ಬೆ​ರ​ಳಿಗೆ ಹಚ್ಚುವ ವಿಡಿ​ಯೋ​ವೊಂದು ಸಾಮಾ​ಜಿಕ ತಾಣ​ಗ​ಳಲ್ಲಿ ವೈರಲ್‌ ಆಗಿದೆ. ಈ ಬಗ್ಗೆ ಆಸೀಸ್‌ ಮಾಜಿ ನಾಯಕ ಟಿಮ್‌ ಪೈನ್‌ ಸೇರಿ​ದಂತೆ ಆಸ್ಪ್ರೇ​ಲಿಯಾ ಮಾಧ್ಯ​ಮ​ಗಳು ಅನು​ಮಾನ ವ್ಯಕ್ತ​ಪ​ಡಿ​ಸಿ​ವೆ. ಆದರೆ ಜಡೇಜಾ ತಮ್ಮ ಕೈಬೆ​ರ​ಳಿನ ಗಾಯಕ್ಕೆ ಮುಲಾಮು ಹಚ್ಚಿ​ದ್ದಾರೆ, ಚೆಂಡು ವಿರೂಪ ಮಾಡಿಲ್ಲ ಎಂದು ಭಾರತ ತಂಡದ ಮೂಲ​ಗಳು ಸ್ಪಷ್ಟನೆ ನೀಡಿ​ರುವುದಾಗಿ ತಿಳಿ​ದು​ಬಂದಿದೆ.
 

click me!