ಕೊರೋನಾ ಲಾಕ್‌ಡೌನ್: ಲಕ್ಷಾಂತರ ಮೌಲ್ಯದ ಅಕ್ಕಿ ದಾನ ಮಾಡಿದ ದಾದ..!

By Suvarna News  |  First Published Mar 26, 2020, 12:53 PM IST

ಬಿಸಿಸಿಐ ಬಾಸ್ ಕೊರೋನಾ ಸಂತ್ರಸ್ಥರಿಗೆ ಲಕ್ಷಾಂತರ ಮೌಲ್ಯದ ಅಕ್ಕಿ ದಾನ ಮಾಡುವ ಮೂಲಕ ಹೃದಯವೈಶಾಲ್ಯ ಮೆರೆದಿದ್ದಾರೆ. ಈ ಮೂಲಕ ಹಲವು ಸೆಲಿಬ್ರಿಟಿಗಳಿಗೆ ಮಾದರಿಯಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ.


ಕೋಲ್ಕತಾ(ಮಾ.26): ಇಡೀ ದೇಶವೇ ಒಂದಾಗಿ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿದೆ. ಇದರ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಅಗತ್ಯವಿರುವ ಜನರಿಗೆ 50 ಲಕ್ಷ ರುಪಾಯಿ ಮೌಲ್ಯದ ಅಕ್ಕಿಯನ್ನು ದಾನ ಮಾಡಿದ್ದಾರೆ.

IPL 2020 ಆಯೋಜನೆ ಕುರಿತು ಭವಿಷ್ಯ ಹೇಳಿದ ಬಿಸಿಸಿಐ ಅಧ್ಯಕ್ಷ ಗಂಗೂಲಿ !

Latest Videos

undefined

ಬೆಂಗಾಲ್ ಕ್ರಿಕೆಟ್ ಸಂಸ್ಥೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಲಾಲ್ ಬಾಬ ರೈಸ್ ಜತೆಗೂಡಿ ಸೌರವ್ ಗಂಗೂಲಿ 50 ಲಕ್ಷ ರುಪಾಯಿ ಮೌಲ್ಯದ ಅಕ್ಕಿಯನ್ನು ಉಚಿತವಾಗಿ ಹಂಚುತ್ತಿದ್ದಾರೆ. ಅಕ್ಕಿಯನ್ನು ಸರ್ಕಾರಿ ಶಾಲೆಗಳಲ್ಲಿ ಇಡಲಾಗಿದ್ದು, ಅಗತ್ಯವಿರುವ ಜನರಿಗೆ ನೀಡಲಾಗುತ್ತಿದೆ. ಗಂಗೂಲಿಯ ಈ ಉತ್ತಮ ಕಾರ್ಯ ದೇಶ ಉಳಿದ ಜನರಿಗೂ ಸ್ಫೂರ್ತಿಯಾಗಲಿದ್ದು, ಇಂತಹ ಸಮಜಮುಖಿ ಕಾರ್ಯ ಕೈಗೊಳ್ಳಲು ಪ್ರೇರಣೆಯಾಗಬಹುದು ಎಂದು ತಿಳಿಸಿದೆ.

ಇನ್ನು ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಆವಿಷ್ಕ್ ದಾಲ್ಮಿಯಾ ಸಹಾ ಸಂತ್ರಸ್ಥರ ಬೆಂಬಲಕ್ಕೆ ಧಾವಿಸಿದ್ದಾರೆ. ಇದರ ಭಾಗವಾಗಿ 5 ಲಕ್ಷ ರುಪಾಯಿಗಳನ್ನು ಮುಖ್ಯಮಂತ್ರಿ ಪರಹಾರ ನಿಧಿಗೆ ಅರ್ಪಿಸಿದ್ದಾರೆ. 
ಕೊರೋನಾ ವೈರಸ್ ವಿರುದ್ಧ ಹೋರಾಡಲು ಬಾಂಗ್ಲಾದೇಶ ಕ್ರಿಕೆಟಿಗರು ಅರ್ಧ ತಿಂಗಳ ಸಂಬಳ ನೀಡಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ 21 ದಿನಗಳ ಮಟ್ಟಿಗೆ ಲಾಕ್‌ಡೌನ್ ಘೋಷಣೆ ಮಾಡಿದ್ದಾರೆ. 

ಕೊರೋನಾ ಎಫೆಕ್ಟ್: ಅರ್ಧ ತಿಂಗಳು ಸಂಬಳ ಸರ್ಕಾರಕ್ಕೆ ನೀಡಲು ಮುಂದಾದ ಬಾಂಗ್ಲಾ ಕ್ರಿಕೆಟಿಗರು..!

ಒಟ್ಟಿನಲ್ಲೇ ಇಡೀ ದೇಶವೇ ಸಂಕಷ್ಟದಲ್ಲಿದ್ದು, ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶದ ಜನರು 21 ದಿನಗಳ ಕಾಲ ತಮಗೆ ತಾವೇ ಲಕ್ಷ್ಮಣ ರೇಖೆ ವಿಧಿಸಿಕೊಂಡು ಮನೆಯಲ್ಲಿರುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಮನವಿ ಮಾಡಿಕೊಂಡಿದ್ದಾರೆ. ಇಲ್ಲದಿದ್ದರೆ ದೇಶ 21 ವರ್ಷ ಹಿಂದೆ ಹೋಗಲಿದೆ ಎನ್ನುವುದನ್ನು ಎಚ್ಚರಿಸಿದ್ದಾರೆ. ಕರ್ನಾಟಕ ಸರ್ಕಾರವು ಜನರಿಗೆ ಅಗತ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. 

click me!