ಸದಾ ಟೀಕಿಸುತ್ತಿದ್ದ ಕೊಹ್ಲಿಯನ್ನು ಹೊಗಳಿದ ಗಂಭೀರ್!

By Web Desk  |  First Published Oct 14, 2019, 11:28 AM IST

ನಾಯಕ ವಿರಾಟ್ ಕೊಹ್ಲಿ ಮೇಲೆ ಸದಾ ಟೀಕೆ ವ್ಯಕ್ತಪಡಿಸುತ್ತಿದ್ದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಇದೀಗ ಉಲ್ಟಾ ಹೊಡೆದಿದ್ದಾರೆ. ವಿರಾಟ್ ಕೊಹ್ಲಿ ಭಾರತದ ಶ್ರೇಷ್ಠ ನಾಯಕ ಎಂದು ಬಣ್ಣಿಸಿದ್ದಾರೆ.


ನವದೆಹಲಿ(ಅ.14): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ನಡುವೆ ಹಲವು ವಾರ್‌ಗಳು ನಡೆದಿದೆ. 2013ರ ಐಪಿಎಲ್ ಟೂರ್ನಿಯಲ್ಲಿ ಕೊಹ್ಲಿ ಹಾಗೂ ಗಂಭೀರ್ ಮೈದಾನದಲ್ಲೇ ಕಿತ್ತಾಡಿಕೊಂಡಿದ್ದರು. ಇದಾದ ಬಳಿಕ ಕೊಹ್ಲಿಯನ್ನು ಟೀಕಿಸುತ್ತಿದ್ದ ಗೌತಮ್ ಗಂಭೀರ್ ಇದೀಗ ಹೊಗಳಿದ್ದಾರೆ.

ಇದನ್ನೂ ಓದಿ: ಕೊಹ್ಲಿಗೆ ತಾಕತ್ತಿದ್ರೆ IPL ಕಪ್ ಗೆಲ್ಲಲಿ: ಗಂಭೀರ್ ಖಡಕ್ ಸವಾಲು..!

Tap to resize

Latest Videos

undefined

ಸೌತ್ ಆಫ್ರಿಕಾ ವಿರುದ್ದದ 2ನೇ ಟೆಸ್ಟ್ ಪಂದ್ಯ  ಗೆಲ್ಲೋ ಮೂಲಕ ಸರಣಿ ವಶಪಡಿಸಿಕೊಂಡ ಕೊಹ್ಲಿ ಸೈನ್ಯಕ್ಕೆ ಗಂಭೀರ್ ಅಭಿನಂದನೆ ಸಲ್ಲಿಸಿದ್ದಾರೆ. ಇಷ್ಟೇ ಅಲ್ಲ, ನಾಯಕ ವಿರಾಟ್ ಕೊಹ್ಲಿ ಭಾರತ ಕಂಡ ಅತ್ಯುತ್ತಮ ನಾಯಕ ಎಂದು ಬಣ್ಣಿಸಿದ್ದಾರೆ. ಜೊತೆಗೆ ಎಂ.ಎಸ್.ಧೋನಿ ಹಾಗೂ ಸೌರವ್ ಗಂಗೂಲಿಗಿಂತ ಕೊಹ್ಲಿಯೇ ಶ್ರೇಷ್ಠ ಎಂದಿದ್ದಾರೆ.

ಇದನ್ನೂ ಓದಿ: ಕೊಹ್ಲಿ ನಾಯಕತ್ವ ಪ್ರಶ್ನಿಸಿದ ಗಂಭೀರ್‌ ವಿರುದ್ಧ ಫ್ಯಾನ್ಸ್ ಗರಂ!

ಯುವ ವೇಗಿಗಳಿಗೆ ಪ್ರೋತ್ಸಾಹ ನೀಡುತ್ತಿರುವ ಕೊಹ್ಲಿಯ ರಣತಂತ್ರಗಳು ಉತ್ತಮವಾಗಿ ವರ್ಕೌಟ್ ಆಗಿದೆ. ವಿದೇಶಿ ಪಿಚ್‌ಗಳಲ್ಲೂ ಭಾರತ ಗೆಲುವಿನ ನಗೆ ಕಾಣುತ್ತಿದೆ. ಇದಕ್ಕೆ ಕೊಹ್ಲಿ ನಾಯಕತ್ವವೂ ಕಾರಣ ಎಂದು ಗಂಭೀರ್ ಹೇಳಿದ್ದಾರೆ.

ಇದನ್ನೂ ಓದಿ: RCB ತಂಡಕ್ಕೆ ಕೊಹ್ಲಿ ಕೃತಜ್ಞರಾಗಿರಬೇಕು: ಗಂಭೀರ್ ಕೊಂಕು ನುಡಿ

ಸೋಲುವ ಭಯವಿದ್ದರೆ ಗೆಲುವು ಸಾಧ್ಯವಿಲ್ಲ.  ನಾಯಕ ವಿರಾಟ್ ಕೊಹ್ಲಿಗೆ ಸೋಲಿನ ಭಯವಿಲ್ಲ. ಪ್ರಯೋಗ ಮಾಡುವಾಗಲೂ ಪ್ರದರ್ಶನ ಮಾತ್ರ ಗಮನಹರಿಸುತ್ತಾರೆ ಹೊರತು, ಸೋಲು ಗೆಲುವಿನ ಲೆಕ್ಕಾಚಾರವಲ್ಲ. ಕೊಹ್ಲಿ ಇತರ ನಾಯಕರಿಗಿಂತ ಹೆಚ್ಚಿನ ರಿಸ್ಕ್ ತೆಗೆದುಕೊಂಡಿದ್ದಾರೆ. ಇದು ಕೊಹ್ಲಿ ಯಶಸ್ಸಿಗೆ ಕಾರಣ ಎಂದಿದ್ದಾರೆ.
 

click me!