IPLಗೆ ಮತ್ತೊಂದು ತಂಡ ಸೇರ್ಪಡೆ; 9 ಫ್ರಾಂಚೈಸಿಗಳೊಂದಿಗೆ ಚುಟುಕು ವಾರ್?

By Web Desk  |  First Published Nov 21, 2019, 3:52 PM IST

ಐಪಿಎಲ್ ಟೂರ್ನಿ ವಿಸ್ತರಿಸಲು ಬಿಸಿಸಿಐ ಪ್ಲಾನ್ ಮಾಡಿದೆ. 8 ರ ಬದಲು 9 ತಂಡಗಳೊಂದಿಗೆ ಕಣಕ್ಕಿಳಿಯಲು ಬಿಸಿಸಿಐ ನಿರ್ಧರಿಸಿದೆ. ಬಿಸಿಸಿಐ ಹೊಸ ಯೋಜನೆ ಕುರಿತ ವಿವರ ಇಲ್ಲಿದೆ.


ಮುಂಬೈ(ನ.21): ಐಪಿಎಲ್ ಟೂರ್ನಿಗೆ ಬಿಸಿಸಿಐ ಹಾಗೂ ಫ್ರಾಂಚೈಸಿಗಳು ತಯಾರಿ ನಡೆಸುತ್ತಿವೆ. ಈಗಾಗಲೇ ಆಟಗಾರರನ್ನು ಖರೀದಸುವ, ಕೈಬಿಡುವ ಅಥವಾ ಉಳಿಸಿಕೊಳ್ಳುವ ಪ್ರಕ್ರಿಯ ಮುಗಿದಿದೆ. ಇದೀಗ ಡಿಸೆಂಬರ್ 19 ರಂದು ನಡೆಯಲಿರುವ ಆಟಗಾರರ ಹರಾಜು ಪ್ರಕ್ರಿಕೆಯೆಗೆ ಫ್ರಾಂಚೈಸಿ ಸಜ್ಜಾಗಿದೆ. ಇದರ ಬೆನ್ನಲ್ಲೇ ಬಿಸಿಸಿಐ ಮುಂದಿನ ವರ್ಷದ ಐಪಿಎಲ್ ಟೂರ್ನಿಗೆ 9 ತಂಡಗಳನ್ನು ಆಡಿಸಲು ಪ್ಲಾನ್ ರೆಡಿಯಾಗಿದೆ.

ಇದನ್ನೂ ಓದಿ: RCB ವೀಕ್ನೆಸ್ ಬಹಿರಂಗ ಪಡಿಸಿದ ಆಲ್ರೌಂಡರ್ ಮೊಯಿನ್ ಆಲಿ!.

Tap to resize

Latest Videos

undefined

2021ರ ಐಪಿಎಲ್ ಟೂರ್ನಿಯಲ್ಲಿ 8 ರ ಬದಲು 9 ತಂಡಗಳನ್ನು ಕಣಕ್ಕಿಳಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಈಗಾಗಲೇ 10 ತಂಡಗಳನ್ನು ಕಣಕ್ಕಿಳಿಸುವ  ಕುರಿತು ಬಿಸಿಸಿಐ ಮಾತುಕತೆ ನಡೆಸಿತ್ತು. ಆದರೆ ಒಂದು ತಂಡ ಸೇರ್ಪಡಿಸಿದ ಬಳಿಕ ಯಶಸ್ವಿಯಾದರೆ 10ನೇ ತಂಡ ಸೇರಿಸುವ ಪ್ಲಾನ್ ಹಾಕಿಕೊಂಡಿದೆ.

ಇದನ್ನೂ ಓದಿ: IPL 2020: ಹರಾಜಿಗೂ ಮುನ್ನ RCB ಮಾಡಿದ ಅತಿದೊಡ್ಡ ಎಡವಟ್ಟುಗಳಿವು..!

2021ರಲ್ಲಿ ಐಪಿಎಲ್ ಅವಧಿವೇಳೆ ದ್ವಿಪಕ್ಷೀಯ ಸರಣಿ, ಐಸಿಸಿ ಸರಣಿ ಇರುವುದರಿಂದ ಹೆಚ್ಚಿನ ಸಮಯಾವಕಾಶವಿಲ್ಲ. ಹೀಗಾಗಿ ಒಂದು ತಂಡ ಸೇರಿಸಿ, ಪ್ರಯೋಗ ಮಾಡಲು ಮುಂದಾಗಿದೆ. 2021 ಹಾಗೂ 2022ರ ಆವೃತ್ತಿಗಳಲ್ಲಿ 9 ತಂಡ ಹಾಗೂ 2023ರ ಆವೃತ್ತಿಗಳಲ್ಲಿ 10 ತಂಡದ ಜೊತೆ ಆಡುವ ಯೋಜನೆ ಹಾಕಿಕೊಂಡಿದೆ.

ನವೆಂಬರ್ 21ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

click me!