ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಮತ್ತೊಬ್ಬ ಸ್ಟಾರ್ ಕ್ರಿಕೆಟಿಗನ ಸ್ಟ್ಯಾಂಡ್‌ ಅನಾವರಣ!

Published : Nov 21, 2019, 03:06 PM IST
ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಮತ್ತೊಬ್ಬ ಸ್ಟಾರ್ ಕ್ರಿಕೆಟಿಗನ ಸ್ಟ್ಯಾಂಡ್‌ ಅನಾವರಣ!

ಸಾರಾಂಶ

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಸಂಸದ ಗೌತಮ್ ಗಂಭೀರ್ ಹೆಸರಿನ ಸ್ಟ್ಯಾಂಡ್ ನಿರ್ಮಾಣವಾಗುವುದು ಬಹುತೇಕ ಪಕ್ಕಾ ಆಗಿದೆ. ವಿರಾಟ್ ಕೊಹ್ಲಿ ಸ್ಟ್ಯಾಂಡ್ ಬಳಿಕ ಅರುಣ್ ಜೇಟ್ಲಿ ಮೈದಾನದಲ್ಲಿ ಗಂಭೀರ್ ಸ್ಟ್ಯಾಂಡ್ ನಿರ್ಮಾಣವಾಗಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ನವದೆಹಲಿ[ನ.21]: ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದ ಸ್ಟ್ಯಾಂಡ್‌ವೊಂದಕ್ಕೆ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಹೆಸರನ್ನಿಡಲು ದಿಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್‌ ಸಂಸ್ಥೆ (ಡಿಡಿಸಿಎ) ನಿರ್ಧರಿಸಿದೆ. 

ಕೋಟ್ಲಾ ಈಗ ಜೇಟ್ಲಿ ಕ್ರೀಡಾಂಗಣ; ಸಮಾರಂಭದಲ್ಲಿ ಕೊಹ್ಲಿ, ಅಮಿತ್ ಶಾ!

ಮುಂದಿನ ರಣಜಿ ಋುತುವಿನ ಆರಂಭಕ್ಕೆ ಮುನ್ನ ಗಂಭೀರ್‌ ಗೌರವಿಸಲಾಗುವುದು. ಜೂನ್‌ನಲ್ಲಿ ಗಂಭೀರ್‌ ಸ್ಟ್ಯಾಂಡ್‌ ಪ್ರಸ್ತಾಪ ಮಾಡಲಾಗಿತ್ತು. ಡಿಡಿಸಿಎ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯದ ಕಾರಣದಿಂದ ತಡವಾಯಿತು. ಸೆಪ್ಟೆಂಬರ್‌ನಲ್ಲಿ ಭಾರತ ನಾಯಕ ವಿರಾಟ್‌ ಕೊಹ್ಲಿ ಹೆಸರಿನ ಸ್ಟ್ಯಾಂಡನ್ನು ಉದ್ಘಾಟಿಸಿದ್ದು, ಫಿರೋಜ್‌ ಷಾ ಕೋಟ್ಲಾ ಮೈದಾನದ ಹೆಸರನ್ನೂ ಅರುಣ್ ಜೇಟ್ಲಿ ಮೈದಾನವೆಂದು ಬದಲಿಸಲಾಗಿತ್ತು. 

ಸಕ್ಸಸ್ ಅಂದ್ರೆ ಇದೇ ಅಲ್ವಾ..? 2001ರಲ್ಲಿ ಕನ್ನಡಿಗನ ಆಟೋಗ್ರಾಫ್ ಕೇಳಿದ್ದ ಕೊಹ್ಲಿ..!

‘ಭಾರತ ತಂಡಕ್ಕೆ ಗೌತಮ್ ಗಂಭೀರ್ ನೀಡಿದ ಕೊಡುಗೆಯನ್ನು ಗುರುತಿಸಿ ಗೌರವಿಸಲು ನಾವು ವಿಫಲರಾಗಿದ್ದು ದುರಾದೃಷ್ಟಕರ. ಶೀಘ್ರ ಗಂಭೀರ್‌ ಸ್ಟ್ಯಾಂಡ್‌ ಅನಾವರಣಗೊಳಿಸಿ ಗಂಭೀರ್‌ ಸನ್ಮಾನಿಸುತ್ತೇವೆ’ ಎಂದು ಡಿಡಿಸಿಎ ಜಂಟಿ ಕಾರ‍್ಯದರ್ಶಿ ರಾಜನ್‌ ಮನ್‌ಚಂದಾ ತಿಳಿಸಿದರು.

ಗೌತಮ್ ಗಂಭೀರ್ ಭಾರತ ಪರ 58 ಟೆಸ್ಟ್ ಹಾಗೂ 147 ಏಕದಿನ ಪಂದ್ಯಗಳನ್ನಾಡಿದ್ದು, ಕ್ರಮವಾಗಿ 4157 ಹಾಗೂ 5238 ರನ್ ಬಾರಿಸಿದ್ದಾರೆ. ಇನ್ನು 37 ಟಿ20 ಪಂದ್ಯಗಳನ್ನಾಡಿ 932 ರನ್ ಬಾರಿಸಿದ್ದಾರೆ. 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಭಾರತ ಪರ ಮಹತ್ವದ ಪಾತ್ರ ನಿಭಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. 

ಈಗಾಗಲೇ ಅರುಣ್ ಜೇಟ್ಲಿ ಮೈದಾನದಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ಬಿಷನ್ ಸಿಂಗ್ ಬೇಡಿ, ಮೊಹಿಂದರ್ ಅಮರ್ ನಾಥ್ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಸರಿನ ಸ್ಟ್ಯಾಂಡ್ ನಿರ್ಮಾಣವಾಗಿದೆ. ಈ ಪಟ್ಟಿಗೆ ಗೌತಮ್ ಗಂಭೀರ್ ಸೇರ್ಪಡೆಯಾಗಲಿದ್ದಾರೆ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!