ಇನ್ಮುಂದೆ ಭಾರತದಲ್ಲಿ ನಡೆಯೊಲ್ಲ ಪಿಂಕ್ ಬಾಲ್ ಟೆಸ್ಟ್..! ಡೇ & ನೈಟ್ ಟೆಸ್ಟ್ ಬಗ್ಗೆ BCCI ನಿರಾಸಕ್ತಿ ಯಾಕೆ..?

By Suvarna News  |  First Published Dec 13, 2023, 4:13 PM IST

ಟೆಸ್ಟ್ ಕ್ರಿಕೆಟ್ ಅನ್ನ ಮತ್ತಷ್ಟು ಫೇಮಸ್ ಮಾಡಲು ಡೇ & ನೈಟ್ ಟೆಸ್ಟ್ ಅನ್ನ ಐಸಿಸಿ ಆಯೋಜಿಸುತ್ತಿದೆ. 2015ರಲ್ಲಿ ಮೊದಲ ಬಾರಿಗೆ ಈ ಪಿಂಕ್ ಬಾಲ್ ಟೆಸ್ಟ್ ಅನ್ನ ಆಡಿಸಲಾಯ್ತು. ಆದ್ರೂ 2015ರಿಂದ 2023ರವರೆಗೆ ಅಂದ್ರೆ ಈ 9 ವರ್ಷದಲ್ಲಿ ನಡೆದಿರುವುದು ಕೇವಲ 21 ಡೇ & ನೈಟ್ ಟೆಸ್ಟ್ಗಳು ಮಾತ್ರ.


ಮುಂಬೈ(ಡಿ.13): ಕ್ರಿಕೆಟ್ ಅನ್ನ ಇನ್ನಷ್ಟು ಉತ್ತುಂಗಕ್ಕೇರಿಸಲು ಐಸಿಸಿ ವರ್ಷದಿಂದ ವರ್ಷಕ್ಕೆ ಹೊಸ ಹೊಸ ಯೋಜನೆಗಳನ್ನ ಹಾಕಿಕೊಳ್ಳುತ್ತಿದೆ. ಆದ್ರೆ 10 ವರ್ಷದ ಹಿಂದೆ ಟೆಸ್ಟ್ ಕ್ರಿಕೆಟ್ ಅನ್ನ ಇನ್ನಷ್ಟು ಬೆಳೆಸಲು ಒಂದು ಮಾಸ್ಟರ್ ಪ್ಲಾನ್ ಮಾಡಿತ್ತು. ದಶಕದಿಂದ ಇದೇ ಪ್ರಯತ್ನದಲ್ಲಿತ್ತು. ಆದ್ರೆ ಆ ಪ್ರಯತ್ನ ಈಗ ವಿಫಲವಾಗಿದೆ. ಇದೇ ನಿರಾಸೆಯಲ್ಲಿ ಆ ಟೆಸ್ಟ್ ಪಂದ್ಯ ಆಯೋಜಿಸದಿರಲು ಬಿಸಿಸಿಐ ನಿರ್ಧರಿಸಿದೆ. 

ಟೆಸ್ಟ್ ಕ್ರಿಕೆಟ್ ಅನ್ನ ಮತ್ತಷ್ಟು ಫೇಮಸ್ ಮಾಡಲು ಡೇ & ನೈಟ್ ಟೆಸ್ಟ್ ಅನ್ನ ಐಸಿಸಿ ಆಯೋಜಿಸುತ್ತಿದೆ. 2015ರಲ್ಲಿ ಮೊದಲ ಬಾರಿಗೆ ಈ ಪಿಂಕ್ ಬಾಲ್ ಟೆಸ್ಟ್ ಅನ್ನ ಆಡಿಸಲಾಯ್ತು. ಆದ್ರೂ 2015ರಿಂದ 2023ರವರೆಗೆ ಅಂದ್ರೆ ಈ 9 ವರ್ಷದಲ್ಲಿ ನಡೆದಿರುವುದು ಕೇವಲ 21 ಡೇ & ನೈಟ್ ಟೆಸ್ಟ್ಗಳು ಮಾತ್ರ. ಪಿಂಕ್ ಬಾಲ್ ಟೆಸ್ಟ್ಗೆ ಬೆಂಬಲ ಸೂಚಿಸಿ, ಸಾಥ್ ನೀಡಿದ್ದ ಬಿಸಿಸಿಐ, ಈಗ ಯಾಕೋ ಡೇ & ನೈಟ್ ಬಗ್ಗೆ ನಿರಾಸಕ್ತಿ ತೋರಿಸಿದೆ. ಇನ್ಮುಂದೆ ಪಿಂಕ್ ಬಾಲ್ ಟೆಸ್ಟ್‌ಗೆ ಆತಿಥ್ಯ ವಹಿಸುವುದಿಲ್ಲ ಅಂತ ಕಡ್ಡಿ ಮುರಿದಂತೆ ಹೇಳಿದೆ.

Tap to resize

Latest Videos

ಫುಟ್ಬಾಲ್‌ ಪಂದ್ಯ ಡ್ರಾ ಆಗಿದ್ದಕ್ಕೆ ರೆಫ್ರಿ ಮೇಲೆ ತಂಡದ ಮಾಲಿಕ ದಾಳಿ! ವಿಡಿಯೋ ವೈರಲ್

ಹೌದು, ಟೀಂ ಇಂಡಿಯಾ ಇದುವರೆಗೂ ನಾಲ್ಕು ಡೇ & ನೈಟ್ ಟೆಸ್ಟ್ಗಳನ್ನಾಡಿದೆ. 2019ರಲ್ಲಿ ಬಾಂಗ್ಲಾದೇಶ ವಿರುದ್ಧ ತಂಡ ಭಾರತ ಪಿಂಕ್ ಬಾಲ್ ಟೆಸ್ಟ್ ಆಡಿ ಗೆದ್ದಿತ್ತು. ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸೆಂಚುರಿ ಹೊಡೆದಿದ್ದರು. ಇನ್ನು 2020ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಿಂಕ್ ಬಾಲ್ ಟೆಸ್ಟ್ನಲ್ಲಿ ಭಾರತ ಸೋತಿತು. ಇನ್ನು ಇಂಗ್ಲೆಂಡ್ ಮತ್ತು ಶ್ರೀಲಂಕಾ ವಿರುದ್ಧ ತಲಾ ಒಂದು ಡೇ & ನೈಟ್ ಟೆಸ್ಟ್ಗಳನ್ನಾಡಿ ಗೆದ್ದಿದೆ. ನಾಲ್ಕರಲ್ಲಿ ಮೂರು ಗೆದ್ದರೂ ಬಿಸಿಸಿಐಗೆ ಮಾತ್ರ ಈ ಪಿಂಕ್ ಬಾಲ್ ಟೆಸ್ಟ್ ಮೇಲೆ ಇಂಟ್ರೆಸ್ಟೇ ಇಲ್ಲ. ಯಾಕೆ ಗೊತ್ತಾ..?

ಪೂರ್ತಿ ಐದು ದಿನ ನಡೆದಿಲ್ಲ ಪಿಂಕ್ ಬಾಲ್ ಟೆಸ್ಟ್..!

ಹೌದು, ಪಿಂಕ್ ಬಾಲ್ ಟೆಸ್ಟ್‌ಗಳು ಪೂರ್ತಿ ಐದು ದಿನ ನಡೆದೇ ಇಲ್ಲ. ನಡೆದಿರುವ 21 ಟೆಸ್ಟ್‌ಗಳು ಫಲಿತಾಂಶ ಕಂಡಿವೆ. ಟೆಸ್ಟ್ ಕ್ರಿಕೆಟ್ ಅನ್ನ ನಾಲ್ಕರಿಂದ ಐದು ದಿನ ವೀಕ್ಷಿಸಲು ಇಷ್ಟಪಡುತ್ತಾರೆ. ಆದ್ರೆ 2-3 ದಿನಗಳಲ್ಲಿ ಟೆಸ್ಟ್ ಮುಗಿದ್ರೆ ಫ್ಯಾನ್ಸ್‌ಗೆ ನಿರಾಸೆಯಾಗುತ್ತದೆ. ಜೊತೆಗೆ ಟೆಸ್ಟ್ ಕ್ರಿಕೆಟ್ ತನ್ನ ಆಸಕ್ತಿಯನ್ನೇ ಕಳೆದುಕೊಳ್ಳಲಿದೆ. ಭಾರತ ಆಡಿರುವ ನಾಲ್ಕೂ ಟೆಸ್ಟ್‌ಗಳು ಐದು ದಿನ ನಡೆದೇ ಇಲ್ಲ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ಭಾರತ ಕೊನೆಯ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಆಡಿದ್ದು, ಅದು ಕೂಡ ಮೂರು ದಿನಗಳಲ್ಲಿ ಕೊನೆಗೊಂಡಿತು.

IPL Auction ಹಿಂದೆ ಮಾಡಿದ ತಪ್ಪುಗಳಿಂದ ಈ ಬಾರಿ ಪಾಠ ಕಲಿಯುತ್ತಾ RCB..? ಪೂಜಾರಗೆ 3.22 ಕೋಟಿ ನೀಡಿದ್ದ ಬೆಂಗಳೂರು

ಭಾರತೀಯ ಕ್ರಿಕೆಟ್ ಮಂಡಳಿಯು ಇನ್ನು ಮುಂದೆ ಪಿಂಕ್ ಬಾಲ್ ಟೆಸ್ಟ್‌ಗೆ ಉತ್ಸುಕವಾಗಿಲ್ಲ. ಏಕೆಂದರೆ ಇದು 4 ಅಥವಾ 5 ದಿನಗಳ ಬದಲಿಗೆ 2 ರಿಂದ 3 ದಿನಗಳಲ್ಲಿ ಕೊನೆಗೊಳ್ಳುತ್ತದೆ. ಪಿಂಕ್ ಬಾಲ್ ಟೆಸ್ಟ್ ಅನ್ನು ಜನರಲ್ಲಿ ಜನಪ್ರಿಯಗೊಳಿಸಲು ಬಿಸಿಸಿಐ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದೆ ಅನ್ನೋ ಮೂಲಕ  ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಬೇಸರ ವ್ಯಕ್ತಪಡಿಸಿದ್ದಾರೆ.

ಯೆಸ್, ಜೈ ಶಾ ಹೇಳಿರೋದ್ರಲ್ಲೂ ಸತ್ಯವಿದೆ. ಡೇ & ನೈಟ್ ಟೆಸ್ಟ್‌ಗಳು ನಡೆದ್ರೆ ಟೆಸ್ಟ್ ಕ್ರಿಕೆಟ್ ಇನ್ನಷ್ಟು ಫೇಮಸ್ ಆಗಲಿದೆ ಅಂತ ಐಸಿಸಿ ಸೇರಿದಂತೆ ಎಲ್ಲಾ ಕ್ರಿಕೆಟ್ ಮಂಡಳಿಗಳು ಇನ್ನಿಲ್ಲದ ಪ್ರಯತ್ನ ಪಟ್ಟವು. 21 ಟೆಸ್ಟ್ಗಳಲ್ಲಿ ಒಂದೇ ಒಂದು ಟೆಸ್ಟ್ ಸಹ ಐದಕ್ಕೆ ಐದು ದಿನ ನಡೆದಿಲ್ಲ ಅಂದ್ರೆ ನೀವೇ ಊಹಿಸಿ. ಮೂರ್ನಾಲ್ಕು ದಿನದಲ್ಲಿ ಟೆಸ್ಟ್ ಮುಗಿದ್ರೆ ಫ್ಯಾನ್ಸ್‌ಗೆ ಮಾತ್ರ ನಿರಾಸೆಯಾಗಲ್ಲ. ಕ್ರಿಕೆಟ್ ಮಂಡಳಿ, ಐಸಿಸಿ, ಪ್ರಯೋಜಕರು, ಮ್ಯಾಚ್ ಟೆಲಿಕಾಸ್ಟ್ ಮಾಡೋ ಚಾನಲ್ ಹೀಗೆ ಎಲ್ಲರೂ ಕೋಟಿಗಟ್ಟಲೆ ನಷ್ಟವಾಗುತ್ತದೆ. ಅದಕ್ಕೆ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದೆ. ಅಲ್ಲಿಗೆ ಇನ್ಮುಂದೆ ಟೀಂ ಇಂಡಿಯಾ ಪಿಂಕ್ ಬಾಲ್ ಟೆಸ್ಟ್ ಆಡೋದಿಲ್ಲ ಅನ್ನೋದು ಕನ್ಫರ್ಮ್ ಆಯ್ತು.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

click me!