ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ಸೂರ್ಯಕುಮಾರ್ ಯಾದವ್

By Naveen Kodase  |  First Published Dec 13, 2023, 12:14 PM IST

ಎಸೆತಗಳನ್ನು ಎದುರಿಸಿದ ಆಧಾರದಲ್ಲಿ ಸೂರ್ಯಕುಮಾರ್ ಯಾದವ್ ಅತಿವೇಗವಾಗಿ 2,000 ರನ್ ಗಳಿಸಿದ ದಾಖಲೆ ಬರೆದರು. ಸೂರ್ಯ 2000 ರನ್ ಪೂರೈಸಲು ತೆಗೆದುಕೊಂಡಿದ್ದು ಕೇವಲ 1164 ಎಸೆತಗಳನ್ನು. ಆಸ್ಟ್ರೇಲಿಯಾದ ಮಾಜಿ ನಾಯಕ ಆ್ಯರೋನ್ ಫಿಂಚ್ 1283, ಗ್ಲೆನ್ ಮ್ಯಾಕ್ಸ್‌ವೆಲ್ 1,304 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು.


ಗೆಬೆರ್ಹಾ(ಡಿ.13): ವಿಶ್ವ ನಂ.1 ಬ್ಯಾಟರ್ ಸೂರ್ಯಕುಮಾರ್ ಯಾದವ್ ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿಕಡಿಮೆ ಎಸೆತಗಳನ್ನು ಎದುರಿಸಿ 2000 ರನ್ ಪೂರೈಸಿದ ದಾಖಲೆ ಬರೆದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಮಂಗಳವಾರ ನಡೆದ 2ನೇ ಟಿ20 ಪಂದ್ಯದಲ್ಲಿ ಸೂರ್ಯ 15 ರನ್ ಗಳಿಸಿದಾಗ, 2,000 ರನ್ ಮೈಲಿಗಲ್ಲು ತಲುಪಿದರು. ಈ ಇನ್ನಿಂಗ್ಸಲ್ಲಿ ಅವರು 36 ಎಸೆತದಲ್ಲಿ 56 ರನ್ ಸಿಡಿಸಿದರು.

ಎಸೆತಗಳನ್ನು ಎದುರಿಸಿದ ಆಧಾರದಲ್ಲಿ ಸೂರ್ಯಕುಮಾರ್ ಯಾದವ್ ಅತಿವೇಗವಾಗಿ 2,000 ರನ್ ಗಳಿಸಿದ ದಾಖಲೆ ಬರೆದರು. ಸೂರ್ಯ 2000 ರನ್ ಪೂರೈಸಲು ತೆಗೆದುಕೊಂಡಿದ್ದು ಕೇವಲ 1164 ಎಸೆತಗಳನ್ನು. ಆಸ್ಟ್ರೇಲಿಯಾದ ಮಾಜಿ ನಾಯಕ ಆ್ಯರೋನ್ ಫಿಂಚ್ 1283, ಗ್ಲೆನ್ ಮ್ಯಾಕ್ಸ್‌ವೆಲ್ 1,304 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು.

Latest Videos

undefined

ಐಪಿಎಲ್‌ನ ಹೊಸ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಬಿಸಿಸಿಐ ಹುಡುಕಾಟ: ಬಿಡ್‌ ಆಹ್ವಾನ

ನವದೆಹಲಿ: 2024-28ರ ಅವಧಿಗೆ ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಬಿಸಿಸಿಐ ಹುಡುಕಾಟ ಆರಂಭಿಸಿದ್ದು, ಆಸಕ್ತ ಸಂಸ್ಥೆಗಳಿಂದ ಬಿಡ್‌ ಆಹ್ವಾನಿಸಿದೆ. ಪ್ರಾಯೋಜಕತ್ವಕ್ಕೆ ಇಚ್ಛಿಸುವ ಸಂಸ್ಥೆಗಳು ಜ.8, 2024ರೊಳಗೆ ಟೆಂಡರ್‌ ಸಲ್ಲಿಸಬೇಕಿದೆ. 2022-23ರಲ್ಲಿ ಟಾಟಾ ಸಂಸ್ಥೆಯು ಶೀರ್ಷಿಕೆ ಪ್ರಾಯೋಜಕತ್ವ ಹೊಂದಿತ್ತು. ಸಂಸ್ಥೆಯು ಬಿಸಿಸಿಐಗೆ ವಾರ್ಷಿಕ 335 ಕೋಟಿ ರು. ಪಾವತಿಸಿದೆ. ಅದಕ್ಕೂ ಮುನ್ನ 2021ರಲ್ಲಿ ವಿವೊ ಸಂಸ್ಥೆ ₹440 ಕೋಟಿ ನೀಡಿ ಶೀರ್ಷಿಕೆ ಪ್ರಾಯೋಜಕತ್ವ ಪಡೆದಿತ್ತು.

ಭಾರತ ಅಂ-19 ವಿಶ್ವಕಪ್‌ ತಂಡಕ್ಕೆ ರಾಜ್ಯದ ಧನುಷ್‌ ಗೌಡಗೆ ಸ್ಥಾನ

ಭಾರತ ‘ಎ’ ವಿರುದ್ಧ ಟೆಸ್ಟ್‌: ದ.ಆಫ್ರಿಕಾ ‘ಎ’ 5ಕ್ಕೆ 298

ಪಾಚೆಫ್‌ಸ್ಟ್ರೂಮ್‌(ದ.ಆಫ್ರಿಕಾ): ಭಾರತ ‘ಎ’ ತಂಡದ ವಿರುದ್ಧದ ಮೊದಲ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ದ.ಆಫ್ರಿಕಾ ‘ಎ’ ತಂಡ ಉತ್ತಮ ಮೊತ್ತ ಗಳಿಸಿದೆ. ಮೊದಲ ದಿನವಾದ ಸೋಮವಾರ ಮಳೆಯಿಂದಾಗಿ ಪಂದ್ಯ ನಡೆಯಲಿಲ್ಲ. ಮಂಗಳವಾರ ಬ್ಯಾಟಿಂಗ್ ಆರಂಭಿಸಿದ ದ.ಆಫ್ರಿಕಾ 92 ಓವರ್‌ಗಳಲ್ಲಿ 5 ವಿಕೆಟ್‌ಗೆ 298 ರನ್‌ ಕಲೆಹಾಕಿದೆ. ಜೀನ್‌ ಡು ಪ್ಲೆಸಿ ಔಟಾಗದೆ 103 ರನ್‌ ಸಿಡಿಸಿದ್ದು, ರುಬಿನ್‌ ಹರ್ಮನ್‌(95) ಶತಕ ವಂಚಿತರಾದರು. ಸ್ಪಿನ್ನರ್‌ ಸೌರಭ್ ಕುಮಾರ್‌ 3, ಶಾರ್ದೂಲ್‌ ಠಾಕೂರ್‌, ಕನ್ನಡಿಗ ವೇಗಿ ವಿದ್ವತ್‌ ಕಾವೇರಪ್ಪ ತಲಾ 1 ವಿಕೆಟ್‌ ಕಬಳಿಸಿದರು.

ಗೂಗಲ್‌ನಲ್ಲಿ ಅತಿಹೆಚ್ಚು ಹುಡುಕಾಟಕ್ಕೆ ಒಳಪಟ್ಟ ಕ್ರಿಕೆಟಿಗ ವಿರಾಟ್‌ ಕೊಹ್ಲಿ!

ಕ್ಯಾಲಿಫೋರ್ನಿಯಾ: ಭಾರತದ ತಾರಾ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಮೈದಾನದ ಜೊತೆ ಮೈದಾನದಾಚೆಗೂ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದು, ಇದೀಗ ಗೂಗಲ್‌ನಲ್ಲಿ ಅತಿಹೆಚ್ಚು ಹುಡುಕಾಟಕ್ಕೆ ಒಳಪಟ್ಟ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Ind vs SA: ಹರಿಣಗಳ ಹೊಡೆತಕ್ಕೆ ಬೆಚ್ಚಿದ ಟೀಂ ಇಂಡಿಯಾ..!

1998ರಲ್ಲಿ ಆರಂಭಗೊಂಡ ಗೂಗಲ್‌ ಸಂಸ್ಥೆಯು 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅತಿಹೆಚ್ಚು ಹುಡುಕಾಟಕ್ಕೆ ಒಳಪಟ್ಟ ವ್ಯಕ್ತಿಗಳು, ಕ್ಷಣಗಳ ಪಟ್ಟಿ ಬಿಡುಗಡೆ ಮಾಡಿದೆ. ಕ್ರಿಕೆಟಿಗರ ಪೈಕಿ ಕೊಹ್ಲಿ ಅಗ್ರಸ್ಥಾನದಲ್ಲಿದ್ದು, ಒಟ್ಟಾರೆ ಅತಿಹೆಚ್ಚು ಹುಡುಕಾಟಕ್ಕೆ ಒಳಪಟ್ಟ ಕ್ರೀಡಾಪಟು ಎನ್ನುವ ಖ್ಯಾತಿಗೆ ಪೋರ್ಚುಗಲ್‌ನ ಕ್ರಿಸ್ಟಿಯಾನೋ ರೊನಾಲ್ಡೋ ಪಾತ್ರರಾಗಿದ್ದಾರೆ. ಇನ್ನು, ಫುಟ್ಬಾಲ್‌ ಅತಿಹೆಚ್ಚು ಹುಡುಕಾಟಕ್ಕೆ ಒಳಪಟ್ಟ ಕ್ರೀಡೆ ಎಂಬ ಹಿರಿಮೆ ಗಳಿಸಿದೆ.
 

click me!