IPL 17ರ ಸೀಸನ್ಗೂ ಮುನ್ನ ಇದೇ ತಿಂಗಳು 19ರಂದು ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. RCB ಫ್ರಾಂಚೈಸಿ ಮತ್ತು ಟೀಂ ಮ್ಯಾನೇಜ್ಮೆಂಟ್ ಕೂಡ ಆಕ್ಷನ್‌ಗೆ ರೆಡಿಯಾಗಿದೆ. ಆದ್ರೆ, ರೆಡ್ ಆರ್ಮಿ ಎಂತಹ ಆಟ ಗಾರರನ್ನ ಖರೀದಿ ಸುತ್ತೋ ಅಂತ ಫ್ಯಾನ್ಸ್ ಫುಲ್ ಟೆನ್ಷನ್ ಮಾಡಿಕೊಂಡಿದ್ದಾರೆ.
ಬೆಂಗಳೂರು(ಡಿ.13) 17ನೇ ಆವೃತ್ತಿಯ ಮಿನಿ ಆಕ್ಷನ್‌ಗೆ ಇನ್ನು 6 ದಿನಗಳು ಮಾತ್ರ ಬಾಕಿ ಉಳಿದಿದೆ. ಯಾವ ಆಟಗಾರರು ಯಾವ ತಂಡ ಸೇರ್ತಾರೆ ಅನ್ನೋ ಕುತೂಹಲ ಮೂಡಿದೆ. ಈ ನಡುವೆ RCB ಫ್ಯಾನ್ಸ್ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದಾರೆ. ನಮ್ಮ ತಂಡದವ್ರು ಈ ಹಿಂದೆ ಮಾಡಿದ ತಪ್ಪುಗಳನ್ನ ಈ ಬಾರಿ ಮಾಡದೇ ಇರಲಪ್ಪಾ ಅಂತಿದ್ದಾರೆ. ಏನದು RCB ಹಿಂದೆ ಮಾಡಿದ ತಪ್ಪುಗಳು ಅಂತೀರಾ..? ಈ ಸ್ಟೋರಿ ನೋಡಿ ಗೊತ್ತಾಗುತ್ತೆ.
IPL 17ರ ಸೀಸನ್ಗೂ ಮುನ್ನ ಇದೇ ತಿಂಗಳು 19ರಂದು ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. RCB ಫ್ರಾಂಚೈಸಿ ಮತ್ತು ಟೀಂ ಮ್ಯಾನೇಜ್ಮೆಂಟ್ ಕೂಡ ಆಕ್ಷನ್‌ಗೆ ರೆಡಿಯಾಗಿದೆ. ಆದ್ರೆ, ರೆಡ್ ಆರ್ಮಿ ಎಂತಹ ಆಟ ಗಾರರನ್ನ ಖರೀದಿ ಸುತ್ತೋ ಅಂತ ಫ್ಯಾನ್ಸ್ ಫುಲ್ ಟೆನ್ಷನ್ ಮಾಡಿಕೊಂಡಿದ್ದಾರೆ. ಯಾಕಂದ್ರೆ, ಈ ಹಿಂದಿನ ಆಕ್ಷನ್‌ಗಳಲ್ಲಿ RCB ಕೆಲ ತಪ್ಪುಗಳನ್ನ ಮಾಡಿತ್ತು. ಕೆಲ ಆಟಾರರಿಗೆ ಸುಖಾಸುಮ್ಮೆನ ಕೋಟಿ-ಕೋಟಿ ನೀಡಿತ್ತು. ಆ ಮೂಲಕ ಪರ್ಸ್ನಲ್ಲಿದ್ದ ದುಡ್ಡನ್ನೆಲ್ಲಾ ಖಾಲಿ ಮಾಡಿಕೊಂಡಿತ್ತು.!
ಟೈಮಲ್ ಮಿಲ್ಸ್ಗೆ 12 ಕೋಟಿ ನೀಡಿದ್ದು ಲಾಭವಾಗಲಿಲ್ಲ..!
2017ರ IPLಗು ಮುನ್ನ ನಡೆದ ಹರಾಜಿನಲ್ಲಿ RCB, ಇಂಗ್ಲೆಂಡ್ ವೇಗಿ ಟೈಮಲ್ ಮಿಲ್ಸ್ಗೆ 12 ಕೋಟಿ ರೂಪಾಯಿ ನೀಡಿ ಖರೀದಿಸಿತ್ತು. ಆದ್ರೆ, ಮಿಲ್ಸ್ರಿಂದ ತಂಡಕ್ಕೆ ಯಾವುದೇ ಲಾಭವಾಗಲಿಲ್ಲ. ಆ ಸೀಸನ್ನಲ್ಲಿ 5 ಪಂದ್ಯ ಗಳನ್ನಾಡಿದ್ದ ಮಿಲ್ಸ್, 8.5ರ ಎಕಾನಮಿಯಲ್ಲಿ ರನ್ ನೀಡಿ ಕೇವಲ 5 ವಿಕೆಟ್ ಪಡೆದಿದ್ರು.
Sports Flashback: ನೀಗಿದ ಕೊಹ್ಲಿ ಟೆಸ್ಟ್ ಶತಕದ ಬರ, ಮಾರ್ಚ್‌ನಲ್ಲಿ WPL & IPL ಕಲರವ..!
ಕೈಲ್ ಜೇಮಿಸನ್‌ಗೆ 15 ಕೋಟಿ ನೀಡಿದ್ದ RCB..!
RCBಯ ಮತ್ತೊಂದು ಬ್ಯಾಡ್ ಪಿಕ್ ಅಂದ್ರೆ, ಅದು ನ್ಯೂಜಿಲೆಂಡ್ ವೇಗಿ ಕೈಲ್ ಜೇಮಿಸನ್. 2021ರ ಹರಾಜಿನಲ್ಲಿ ಜೇಮಿಸನ್‌ಗೆ 15 ಕೋಟಿ ಸುರಿದು ತಮ್ಮ ಕ್ಯಾಂಪ್‌ಗೆ ಬರಮಾಡಿಕೊಂಡಿತ್ತು. ಆರಂಭದ ಕೆಲ ಪಂದ್ಯಗಳಲ್ಲಿ ಮಿಂಚಿದ ಕಿವೀಸ್ ಸ್ಪೀಡ್ ಬೌಲರ್, ನಂತರ ಸೈಲಂಟಾದ್ರು. 9 ಪಂದ್ಯಗಳಿಂದ 9 ವಿಕೆಟ್‌ಗಳನ್ನು ಮಾತ್ರ ಪಡೆದುಕೊಂಡ್ರು.
ಸೌರಭ್ ತಿವಾರಿಗೆ 7.36 ನೀಡಿದ್ದ ರೆಡ್ ಆರ್ಮಿ..!
ಯೆಸ್, RCB ಕೇವಲ ವಿದೇಶಿ ಆಟಗಾರರಿಗೆ ಮಾತ್ರ ಕೋಟಿ-ಕೋಟಿ ನೀಡಿಲ್ಲ. ಭಾರತದ ಕೆಲ ಆಟಗಾರರ ಮೇಲೂ ಅಚ್ಚರಿಯ ರೀತಿಯಲ್ಲಿ ಬಿಡ್ ಮಾಡಿದೆ. 2011ರಲ್ಲಿ ಎಡಗೈ ಬ್ಯಾಟ್ಸ್ಮನ್ ಸೌರಭ್ ತಿವಾರಿಗೆ 7.36 ಕೋಟಿ ಕೊಟ್ಟಿತ್ತು. RCB ಪರ ಮೂರು ಸೀಸನ್ಗಳಲ್ಲಿ ಬ್ಯಾಟ್ ಬೀಸಿದ ತಿವಾರಿ, 22.23 ಸರಾಸರಿಯಲ್ಲಿ 578 ರನ್ ಗಳಿಸಿದರು.
ಐಪಿಎಲ್ ಹರಾಜಿಗೆ ಕ್ಷಣಗಣನೆ: 333 ಮಂದಿ ಹೆಸರು ಫೈನಲ್..!
ಟೆಸ್ಟ್ ಸ್ಪೆಷಲಿಸ್ಟ್ ಪೂಜಾರಗೆ 3.22 ಕೋಟಿ..!
ಚೇತೇಶ್ವರ್ ಪೂಜಾರ ಪಕ್ಕಾ ಟೆಸ್ಟ್ ಸ್ಪೆಷಲಿಸ್ಟ್. ಆದ್ರೆ ಇಂತಹ ಟೆಸ್ಟ್ ಬ್ಯಾಟ್ಸ್‌ಮನ್‌ಗೂ RCB ಮೂರು ಕೋಟಿ ಸುರಿದಿತ್ತು. 2011ರ ಆಕ್ಷನ್ನಲ್ಲಿ ಪೂಜಾರ ಅವರನ್ನು ರೂ.3.22 ಕೋಟಿಗೆ ಖರೀದಿಸಿತ್ತು. ಮೂರು ಋತುಗಳಲ್ಲಿ RCB ಪರ 14 ಪಂದ್ಯಗಳನ್ನಾಡಿರೋ ಪೂಜಾರ, ಕೇವಲ 14.3ರ ಸರಾಸರಿಯಲ್ಲಿ 143 ರನ್ ಕಲೆಹಾಕಿದ್ರು.
ಇಂಗ್ಲೆಂಡ್ ವೇಗಿ ಕ್ರಿಸ್ ವೋಕ್ಸ್‌ಗೆ 7.4 ಕೋಟಿ..!
2018ರಲ್ಲಿ RCB ಕ್ರಿಸ್ ವೋಕ್ಸ್ ಅವರನ್ನು 7.4 ಕೋಟಿ ರೂಪಾಯಿಗೆ ಖರೀದಿಸಿತ್ತು. ಆದ್ರೆ, ಇಂಗ್ಲೆಂಡ್ ವೇಗಿ ಫ್ಲಾಪ್ ಶೋ ನೀಡಿದ್ರು. 5 ಪಂದ್ಯಗಳನ್ನಾಡಿ, ಪ್ರತಿ ಓವರ್‌ಗೆ ಸರಾಸರಿ 10.36 ರನ್‌ಗಳಂತೆ 8 ವಿಕೆಟ್‌ಗಳನ್ನು ಮಾತ್ರ ಪಡೆದುಕೊಂಡ್ರು.
ಹಿಂದಿನ ಆಕ್ಷನ್‌ಗಳ ಕಥೆ ಏನೇ ಇರಲಿ, ಸದ್ಯ RCB ಪರ್ಸ್ನಲ್ಲಿ 23.25 ಕೋಟಿ ಉಳಿದಿದೆ. ಇದ್ರಲ್ಲಿ ಆರು ಮಂದಿ ಆಟಗಾರರನ್ನ ಖರೀದಿಸಬೇಕಿದೆ. ಈ ಆರರಲ್ಲಿ ಮೂವರು ವಿದೇಶಿ ಆಟಗಾರರನ್ನ ತಂಡಕ್ಕೆ ಸೇರಿಸಿಕೊಳ್ಳಬೇಕಿದೆ. ಇದರಿಂದ ಹಿಂದೆ ಮಾಡಿದ ತಪ್ಪುಗಳನ್ನ ಮಾಡದೇ, ಅಳೆದು ತೂಗಿ ಮ್ಯಾಚ್ ವಿನ್ನರ್ಗಳನ್ನ PICK ಮಾಡಬೇಕಿದೆ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್