IPL ಉದ್ಘಾಟನಾ ಸಮಾರಂಭ; ಕಳೆದ ಬಾರಿ ಪುಲ್ವಾಮಾ, ಈಗ ಮತ್ತೊಂದು ಕಾರಣಕ್ಕೆ ರದ್ದು?

By Web Desk  |  First Published Nov 6, 2019, 5:49 PM IST

2020ರ ಐಪಿಎಲ್ ಟೂರ್ನಿಯಲ್ಲೂ ಉದ್ಘಾಟನಾ ಸಮಾರಂಭ ರದ್ದು ಮಾಡಲು ಬಿಸಿಸಿಐ ಮುಂದಾಗಿದೆ. ಕಳೆದ ಬಾರಿ ಪುಲ್ವಾಮಾ ಹುತಾತ್ಮ ಕುಟುಂಬಕ್ಕಾಗಿ ಒಪನಿಂಗ್ ಸೆರಮನಿ ಹಣವನ್ನು ನೀಡಲಾಗಿತ್ತು. ಇದೀಗ 2020ರಲ್ಲಿ ಮತ್ತೊಂದು ಕಾರಣಕ್ಕೆ ಸಮಾರಂಭ ರದ್ದಾಗಲಿದೆ.


ಮುಂಬೈ(ನ.06): ಐಪಿಎಲ್ ಟೂರ್ನಿಗೆ ಬಿಸಿಸಿಐ ತಯಾರಿ ಆರಂಭಗೊಂಡಿದೆ. 2020ರ ಐಪಿಎಲ್ ಟೂರ್ನಿಯಲ್ಲಿ ಹಲವು ಬದಲಾವಣೆ ತರಲು ಬಿಸಿಸಿಐ ಮುಂದಾಗಿದೆ. ಈಗಾಗಲೇ ನೋ ಬಾಲ್‌ಗಾಗಿ ಅಂಪೈರ್ ನೇಮಿಸಲು ಬಿಸಿಸಿಐ ನಿರ್ಧರಿಸಿದೆ. ಇದರ ಬೆನ್ನಲ್ಲೇ ಈ ಬಾರಿಯೂ ಐಪಿಎಲ್ ಉದ್ಘಾಟನಾ ಸಮಾರಂಭವನ್ನು ರದ್ದು ಮಾಡಲು ಬಿಗ್‌ಬಾಸ್ ನಿರ್ಧರಿಸಿದೆ.

ಇದನ್ನೂ ಓದಿ: RCB ಸೇರಿಕೊಳ್ತಾರಾ ಬುಮ್ರಾ? ಅಭಿಮಾನಿ ಪ್ರಶ್ನೆಗೆ ಮುಂಬೈ ಇಂಡಿಯನ್ಸ್ ಉತ್ತರ!

Tap to resize

Latest Videos

undefined

2020ರ ಐಪಿಎಲ್ ಟೂರ್ನಿಯಲ್ಲೂ ಉದ್ಘಾಟನಾ ಸಮಾರಂಭ ಕ್ಯಾನ್ಸಲ್ ಮಾಡಲಾಗಿದೆ. ಇದು ಹಣದ ದುಂದು ವೆಚ್ಚ. ಒಪನಿಂಗ್ ಸೆರಮನಿಯಲ್ಲಿ ಬಾಲಿವುಡ್ ಹಾಗೂ ಇತರ ಸೆಲೆಬ್ರೆಟಿಗಳಿಗೆ ಬಿಸಿಸಿಐ ಹೆಚ್ಚಿನ ಹಣ ಖರ್ಚು ಮಾಡುತ್ತಿತ್ತು. ಅಭಿಮಾನಿಗಳು ಕೂಡ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಹೆಚ್ಚಿನ ಸ್ಪಂದನೆ ನೀಡಿಲ್ಲ. ಹೀಗಾಗಿ 2020ರಲ್ಲೂ ಒಪನಿಂಗ್ ಸೆರಮನಿ ರದ್ದು ಮಾಡಲಾಗುವುದು ಎಂದು ಬಿಸಿಸಿಐ ಮೂಲಗಳು ಹೇಳಿವೆ.

ಇದನ್ನೂ ಓದಿ: ಅಭ್ಯಾಸ ಆರಂಭಿಸಿದ ಶ್ರೀಶಾಂತ್, IPL ಟೂರ್ನಿಗೆ ವಾಪಾಸ್ಸಾಗಲು ಪ್ಲಾನ್!

2019ರ ಐಪಿಎಲ್ ಟೂರ್ನಿಗೂ ಮುನ್ನ ಪುಲ್ವಾಮಾ ದಾಳಿ(ಫೆ.14) ನಡೆದಿತ್ತು. ಭಾರತದ ಇತಿಹಾಸದಲ್ಲೇ ನಡೆದ ಅತ್ಯಂತ ಭೀಕರ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು. ಇದರ ಪರಿಣಾಮ 12ನೇ ಆವೃತ್ತಿ ಐಪಿಎಲ್ ಉದ್ಘಾಟನಾ ಸಮಾರಂಭ ರದ್ದು ಮಾಡಲಾಗಿತ್ತು. ಉದ್ಘಟನಾ ಸಮಾರಂಭದ ಹಣವನ್ನು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಕುಟುಂಬಕ್ಕೆ ನೀಡುವ ಸಲುವಾಗಿ ಬಿಸಿಸಿಐ ನಿರ್ಧಾರ ಕೈಗೊಂಡಿತ್ತು.

click me!