ಬಾಂಗ್ಲಾದೇಶ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ತಿರುಗೇಟು ನೀಡಲು ರೋಹಿತ್ ಪಡೆ ಸಜ್ಜಾಗಿದೆ. ದೆಹಲಿ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡು ಸರಣಿ ಜೀವಂತವಾಗಿರಿಸಲು ಭಾರತ ತಯಾರಿ ಮಾಡಿಕೊಂಡಿದೆ. ಇದಕ್ಕಾಗಿ ತಂಡದಲ್ಲಿ ಕೆಲ ಬದಲಾವಣೆ ಮಾಡಲು ಟೀಂ ಮ್ಯಾನೇಜ್ಮೆಂಟ್ ಮುಂದಾಗಿದೆ.
ರಾಜ್‌ಕೋಟ್(ನ.06): ಬಾಂಗ್ಲಾದೇಶ ವಿರದ್ದದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಮುಗ್ಗರಿಸಿದ ಬೆನ್ನಲ್ಲೇ ಆಕ್ರೋಶಗಳು ಕೇಳಿ ಬಂದಿದೆ. ತಂಡದ ಆಯ್ಕೆ ಕುರಿತು ಹೆಚ್ಚು ಗಮನ ಹರಿಸುವಂತೆ ಒತ್ತಾಯ ಕೇಳಿ ಬಂದಿದೆ. ಇದೀಗ ರಾಜ್‌ಕೋಟ್‌ನಲ್ಲಿನ ಸೌರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ 2ನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಕೆಲ ಬದಲಾವಣೆ ಮಾಡಲು ಮುಂದಾಗಿದೆ.
ಇದನ್ನೂ ಓದಿ: ಇಂಡೋ-ಬಾಂಗ್ಲಾ ಫೈಟ್: 2ನೇ ಟಿ20ಗೆ 'ಮಹಾ' ಆತಂಕ!
undefined
ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರ ಕಳಪೆ ಪ್ರದರ್ಶನ ತಂಡದ ಫಲಿತಾಂಶದ ಮೇಲೆ ಪರಿಣಾಮ ಬಿದ್ದಿತು. ಹೀಗಾಗಿ ತಂಡದದಲ್ಲಿ ಕೆಲ ಬದಲಾವಣೆ ಮಾಡಿ ಕಣಕ್ಕಿಳಿಯಲು ನಾಯಕ ರೋಹಿತ್ ಶರ್ಮಾ ಮುಂದಾಗಿದ್ದಾರೆ. ಕಳಪೆ ಫಾರ್ಮ್‌ನಲ್ಲಿರುವ ಕೆಎಲ್ ರಾಹುಲ್ ಬದಲು ಸಂಜು ಸಾಮ್ಸನ್‌ಗೆ ಅವಕಾಶ ನೀಡೋ ಸಾಧ್ಯತೆ ಇದೆ. ಸಾಮ್ಸನ್ ಆಯ್ಕೆ ಮಾಡಿರುವುದು ಬ್ಯಾಟ್ಸ್‌ಮನ್ ಆಗಿ ಹೊರತು, ರಿಷಬ್ ಪಂತ್‌ಗೆ ಬದಲಿ ವಿಕೆಟ್ ಕೀಪರ್ ಆಗಿ ಅಲ್ಲ ಎಂದು ಆಯ್ಕೆ ಸಮಿತಿ ಈಗಾಗಲೇ ಸ್ಪಷ್ಟಪಡಿಸಿದೆ. ಸಂಜು ಸಾಮ್ಸನ್ ಹಾಗೂ ಮನೀಶ್ ಪಾಂಡೆ ನಡುವೆ ತೀವ್ರ ಪೈಪೋಟಿ ಇದೆ.
ಇದನ್ನೂ ಓದಿ: ರಾಜಧಾನಿಯಲ್ಲಿ ನಡೆಯಲಿಲ್ಲ ಆಟ; ಬಾಂಗ್ಲಾದೇಶ ವಿರುದ್ದ ಸೋಲು ಕಂಡ ಭಾರತ!
ಸಾಮ್ಸನ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಕಾಣಿಸಿಕೊಂಡರೆ, ರಿಷಬ್ ಪಂತ್ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ. ಇಷ್ಟಾದರೂ ಪಂತ್ ಸ್ಥಾನಕ್ಕೆ ಯಾವುದೇ ಸಮಸ್ಯೆ ಇಲ್ಲ. ಕ್ರುನಾಲ್ ಪಾಂಡ್ಯ ಹಾಗೂ ಶಿವಂ ದುಬೆ ಕೂಡ ಮತ್ತೊಂದು ಅವಕಾಶ ಪಡೆಯುವ ಸಾಧ್ಯತೆ ಇದೆ. ವೇಗದ ವಿಭಾಗದಲ್ಲಿ ಖಲೀಲ್ ಅಹಮ್ಮದ್ ಬದಲು ಶಾರ್ದೂಲ್ ಠಾಕೂರ್‌ಗೆ ಅವಕಾಶ ನೀಡುವ ಸಾಧ್ಯತೆ ಇದೆ.
ಭಾರತದ ಸಂಭವನೀಯ ತಂಡ:
ರೋಹಿತ್ ಶರ್ಮಾ(ನಾಯಕ), ಶಿಖರ್ ಧವನ್, ಸಂಜು ಸಾಮ್ಸನ್/ ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಕ್ರುನಾಲ್ ಪಾಂಡ್ಯ, ಶಿವಂ ದುಬೆ, ವಾಶಿಂಗ್ಟನ್ ಸುಂದರ್, ಯಜುವೇಂದ್ರ ಚಹಾಲ್, ದೀಪಕ್ ಚಹಾರ್, ಶಾರ್ದೂಲ್ ಠಾಕೂರ್
ನವೆಂಬರ್ 06ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;