ಐಪಿಎಲ್ ಹರಾಜು: ಕೋಲ್ಕ​ತಾದಲ್ಲಿ ಆಟಗಾರರ ಖರೀದಿಗೆ ಡೇಟ್ ಫೈನಲ್

By Web DeskFirst Published Nov 6, 2019, 3:06 PM IST
Highlights

2020ನೇ ಸಾಲಿನ ಐಪಿಎಲ್ ಆಟಗಾರರ ಹರಾಜಿ ದಿನಾಂಕ ಖಚಿತವಾಗಿದ್ದು, ಇದೇ ಮೊದಲ ಬಾರಿಗೆ ಐಪಿಎಲ್ ಆಟಗಾರರ ಹರಾಜಿ ಕೋಲ್ಕತಾ ಆತಿಥ್ಯ ವಹಿಸಲಿದೆ. ಯಾವ ಫ್ರಾಂಚೈಸಿ ಬಳಿ ಎಷ್ಟು ಹಣವಿದೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ...

ಮುಂಬೈ[ನ.06]: ಐಪಿ​ಎಲ್‌ 13ನೇ ಆವೃ​ತ್ತಿಯ ಆಟ​ಗಾ​ರರ ಹರಾಜು ಡಿ.19ರಂದು ಕೋಲ್ಕ​ತಾ​ದಲ್ಲಿ ನಡೆ​ಯ​ಲಿದೆ ಎಂದು ಆಡ​ಳಿತ ಸಮಿತಿ ಸ್ಪಷ್ಟ​ಪ​ಡಿಸಿದೆ.

ಐಪಿ​ಎಲ್‌ನಲ್ಲಿ ಇನ್ಮುಂದೆ ನೋಬಾಲ್‌ ಅಂಪೈರ್‌!

ಫ್ರಾಂಚೈ​ಸಿ​ಗಳು ಆಟ​ಗಾ​ರರನ್ನು ಖರೀ​ದಿ​ಸಲು ಈ ವರ್ಷ 3 ಕೋಟಿ ರುಪಾಯಿ ಹೆಚ್ಚು​ವ​ರಿ​ಯಾಗಿ ಖರ್ಚು ಮಾಡ​ಬ​ಹು​ದಾ​ಗಿದೆ. 2019ರ ಆವೃ​ತ್ತಿಗೆ 82 ಕೋಟಿ ರುಪಾಯಿ ಇದ್ದ ಮಿತಿಯನ್ನು 2020ರ ಆವೃತ್ತಿಗೆ 85 ಕೋಟಿಗೆ ಏರಿಕೆ ಮಾಡ​ಲಾಗಿದೆ. ಕಳೆದ ಆವೃ​ತ್ತಿಯ ಹರಾ​ಜಿ​ನಲ್ಲಿ ಉಳಿ​ಸಿ​ಕೊಂಡಿ​ರು​ವುದರ ಜತೆಗೆ 3 ಕೋಟಿ ಹೆಚ್ಚುವರಿಯಾಗಿ ಖರ್ಚು ಮಾಡಲು ಅವ​ಕಾ​ಶ​ವಿ​ರ​ಲಿದೆ.

ಐಪಿ​ಎಲ್‌ನಲ್ಲಿ ಇನ್ಮುಂದೆ ನೋಬಾಲ್‌ ಅಂಪೈರ್‌!

ಅಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಖಾತೆಯಲ್ಲಿ 1.80 ಕೋಟಿ ರುಪಾಯಿ ಉಳಿಸಿಕೊಂಡಿದೆ. ಇದರ ಜತೆಗೆ 3 ಕೋಟಿ ಅಂದರೆ ಒಟ್ಟು 4.80 ಕೋಟಿ ರುಪಾಯಿ ಮೊತ್ತದಲ್ಲಿ ತಮಗೆ ಬೇಕಾಗಿರುವ ಆಟಗಾರರನ್ನು ಖರೀದಿಸಬಹುದಾಗಿದೆ. ಇನ್ನು ಗರಿಷ್ಠ ಮೊತ್ತವನ್ನು ತನ್ನ ಪಾಕೆಟ್’ನಲ್ಲಿ ಉಳಿಸಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ[8.2 ಕೋಟಿ] 11.2 ಕೋಟಿ ರುಪಾಯಿ ನೀಡಿ ಆಟಗಾರರನ್ನು ಖರೀದಿಸಬಹುದಾಗಿದೆ. ಇದೇ ಅಂತಿಮವಲ್ಲ, ಹರಾಜಿಗೂ ಮುನ್ನ ಕೆಲ ಆಟಗಾರರನ್ನು ಫ್ರಾಂಚೈಸಿ ತಂಡದಿಂದ ಕೈಬಿಡಲಿದ್ದು, ಆ ಮೊತ್ತವೂ ತಂಡದ ಖಾತೆಗೆ ಜಮೆಯಾಗಲಿದೆ.

IPL 2020:ಕಿಂಗ್ಸ್ XI ಪಂಜಾಬ್ ತಂಡಕ್ಕೆ ಕನ್ನಡಿಗ ಅನಿಲ್ ಕುಂಬ್ಳೆ ಕೋಚ್!

ಡೆಲ್ಲಿ ಕ್ಯಾಪಿ​ಟಲ್ಸ್‌ ತಂಡ ಅತಿ​ಹೆಚ್ಚು ಹಣ ಉಳಿ​ಸಿ​ಕೊಂಡಿತ್ತು. ತಂಡದ ಬಳಿ 8.2 ಕೋಟಿ ಬಾಕಿ ಇದೆ. ರಾಜ​ಸ್ಥಾನ ರಾಯಲ್ಸ್‌ 7.15 ಕೋಟಿ, ಕೋಲ್ಕತಾ ನೈಟ್‌ ರೈಡರ್ಸ್ 6.05 ಕೋಟಿ, ಸನ್‌ರೈಸರ್ಸ್ ಹೈದ​ರಾ​ಬಾದ್‌ 5.30 ಕೋಟಿ, ಕಿಂಗ್ಸ್‌ ಇಲೆ​ವೆನ್‌ ಪಂಜಾಬ್‌ 3.7 ಕೋಟಿ, ಮುಂಬೈ ಇಂಡಿ​ಯನ್ಸ್‌ 3.55 ಕೋಟಿ, ಚೆನ್ನೈ ಸೂಪರ್‌ ಕಿಂಗ್ಸ್‌ 3.2 ಕೋಟಿ, ಆರ್‌ಸಿಬಿ 1.80 ಕೋಟಿ ರುಪಾಯಿ ಉಳಿ​ಸಿ​ಕೊಂಡಿವೆ.

 

click me!