ಇಂಪ್ಯಾಕ್ಟ್ ಪ್ಲೇಯರ್ ಮುಂದುವರೆಸಲು ಬಿಸಿಸಿಐ ಚಿಂತನೆ; ರೋಹಿತ್, ಕೊಹ್ಲಿ ಮಾತಿಗೆ ಬೆಲೆನೇ ಇಲ್ವಾ?

By Suvarna News  |  First Published Sep 1, 2024, 8:08 AM IST

ಭಾರತೀಯ ಕ್ರಿಕೆಟ್‌ಗೆ ತೊಡಕಾಗಿರುವ ಇಂಪ್ಯಾಕ್ಟ್ ಪ್ಲೇಯರ್ ರೂಲ್ಸ್‌ ಐಪಿಎಲ್‌ನಲ್ಲಿ ಮುಂದುವರೆಸಲು ಬಿಸಿಸಿಐ ಬಯಸಿದೆ ಎನ್ನಲಾಗುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ಬೆಂಗಳೂರು: ಹೊಸ ರೂಲ್ಸ್ ಐಪಿಎಲ್ ಕಿಕ್ ಏರಿಸಲಿದೆ. ಈ ರೂಲ್ಸ್‌ನಿಂದ ಕ್ರಿಕೆಟ್ ಅಭಿಮಾನಿಗಳಿಗೆ ಎಂಟರ್ಟೇಮೆಂಟ್ ಸಿಗುತ್ತೆ. ಫ್ರಾಂಚೈಸಿಗಳಿಗೆ ಗೆಲುವು ದಕ್ಕುತ್ತೆ. ಆದ್ರೆ ಈ ರೂಲ್ಸ್ ಭಾರತೀಯ ಕ್ರಿಕೆಟ್‌ಗೆ ಮಾರಕ. ಇದನ್ನ ಕ್ಯಾಪ್ಟನ್ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ ಸಹ ಹೇಳಿದ್ದರು. ಆದ್ರೂ ಈ ರೂಲ್ಸ್ ಅನ್ನ ಮುಂದಿನ ಐಪಿಎಲ್ನಲ್ಲೂ ಉಳಿಸಿಕೊಳ್ಳಲು ಬಿಸಿಸಿಐ ಪ್ಲಾನ್ ಮಾಡ್ತಿದೆ. ಯಾವುದು ಆ ರೂಲ್ಸ್ ಅನ್ನೋದು ಇಲ್ಲಿದೆ ನೋಡಿ.

ಇಂಪ್ಯಾಕ್ಟ್ ಪ್ಲೇಯರ್‌ನಿಂದ ಆಗೋ ದುಷ್ಪರಿಣಾಮಗಳೇನು ಗೊತ್ತಾ..?

Tap to resize

Latest Videos

undefined

ಇಂಪ್ಯಾಕ್ಟ್ ಪ್ಲೇಯರ್. ಐಪಿಎಲ್‌ನ ಹೊಸ ನಿಯಮ ಆರಂಭದಲ್ಲಿ ಸಖತ್ತಾಗಿದೆ ಅನಿಸುತ್ತಿತ್ತು. 12ನೇ ಆಟಗಾರನಿಗೂ ಆಡಲು ಚಾನ್ಸ್ ಸಿಗುತ್ತೆ. ಇದರಿಂದ ಆಟಗಾರರಿಗೆ ಲಾಭವಾಗುತ್ತೆ ಅನ್ನೋರೇ ಹೆಚ್ಚು ಮಂದಿ. ಆದ್ರೀಗ ಇದೇ ಇಂಪ್ಯಾಕ್ಟ್ ಪ್ಲೇಯರ್ ರೂಲ್ಸ್ ಕ್ರಿಕೆಟ್‌ಗೆ ಮಾರಕವಾಗ್ತಿದೆ. ಆದ್ರೂ ಮುಂದಿನ ಸೀಸನ್ ಐಪಿಎಲ್ನಲ್ಲಿ ಈ ಇಂಪ್ಯಾಕ್ಟ್ ಪ್ಲೇಯರ್ ರೂಲ್ಸ್ ಉಳಿಸಿಕೊಳ್ಳಲು ಬಿಸಿಸಿಐ ಚಿಂತಿಸುತ್ತಿದೆ.

ಭಾರತ ಅಂಡರ್ 19 ತಂಡಕ್ಕೆ ಎಂಟ್ರಿ ಕೊಟ್ಟ ದ್ರಾವಿಡ್ ಪುತ್ರ; ಪಾದಾರ್ಪಣೆ ಪಂದ್ಯದಲ್ಲೇ ಸಮಿತ್‌ಗೆ ಅಗ್ನಿ ಪರೀಕ್ಷೆ..!

ಇಂಪ್ಯಾಕ್ಟ್ ಪ್ಲೇಯರ್. ಬದಲಿ ಆಟಗಾರ. ಒಬ್ಬ ಬ್ಯಾಟರ್ ಅಥವಾ ಬೌಲರ್ ತನ್ನ ಆಟ ಮುಗಿಸಿದ ನಂತರ ಆತನನ್ನ ಹೊರಗಿಟ್ಟು ಇನ್ನೊಬ್ಬ ಆಟಗಾರ ಎಂಟ್ರಿಯಾಗ್ತಾನೆ. ಆತನೇ ಇಂಪ್ಯಾಕ್ಟ್ ಪ್ಲೇಯರ್. ಈ ಇಂಪ್ಯಾಕ್ಟ್ ಪ್ಲೇಯರ್ ಐಪಿಎಲ್ನಲ್ಲಿ ಧೂಳೆಬ್ಬಿಸಿದ್ದಾನೆ. ಆತನಿಂದಲೇ ತಂಡಗಳು ಸಾಕಷ್ಟು ಪಂದ್ಯಗಳನ್ನ ಗೆದ್ದಿವೆ. ಹೀಗಾಗಿ ಐಪಿಎಲ್ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಹೆಚ್ಚು ಸದ್ದು ಮಾಡ್ತಿದ್ದಾನೆ.

ಇಂಪ್ಯಾಕ್ಟ್ ಪ್ಲೇಯರ್‌ನಿಂದಾಗಿ ಪಂದ್ಯಗಳು ರೋಚಕವಾಗಿ ಅಂತ್ಯಗೊಳ್ಳುತ್ತಿವೆ. ಐಪಿಎಲ್ ಕಿಕ್ ಏರುತ್ತಿದೆ. 12ನೆ ಆಟಗಾರನಿಗೂ ಆಡಲು ಚಾನ್ಸ್ ಸಿಗುತ್ತೆ. ಹೀಗೆ ಯೋಚಿಸಿದ್ರೆ ಎಲ್ಲವೂ ಪಾಸಿಟಿವ್ ಆಗಿಯೇ ಕಾಣುತ್ತೆ. ಆದ್ರೆ ಇಂಪ್ಯಾಕ್ಟ್ ಪ್ಲೇಯರ್ ನಿಂದ ಸದ್ಯಕ್ಕೇನು ಎಂಟರ್ಟೇಮೆಂಟ್ ಸಿಗ್ತಿದೆ. ಆದ್ರೆ ಭವಿಷ್ಯದ ಕ್ರಿಕೆಟ್‌ಗೆ ಇಂಪ್ಯಾಕ್ಟ್ ಪ್ಲೇಯರ್ ಮಾರಕ.

ಹಾರ್ದಿಕ್‌ ಪಾಂಡ್ಯಗೆ ಶುರುವಾಯ್ತು ಢವ-ಢವ..! ಆಲ್ರೌಂಡರ್‌ ಹೊಸ ತಲೆನೋವು ತಂದ ಕೋಚ್ ಗೌತಮ್ ಗಂಭೀರ್

ಇಂಪ್ಯಾಕ್ಟ್ ಪ್ಲೇಯರ್‌ನಿಂದಾಗಿ ಶಿವಂ ದುಬೆಯಂತ ಆಟಗಾರರಿಂದ ಬೌಲಿಂಗ್ ಮರೆಯಾಗ್ತಿದೆ. ಇದು ಹೀಗೆ ಮುಂದುವರೆದ್ರೆ ಭಾರತಕ್ಕೆ ಆಲ್ರೌಂಡರ್ಸ್ ಸಿಗದೆ ಇರಬಹುದು. ಇಂಪ್ಯಾಕ್ಟ್ ಪ್ಲೇಯರ್ ಕ್ರಿಕೆಟ್‌ಗೆ ಮಾರಕ. ಅದರಲ್ಲೂ ಭಾರತಕ್ಕಂತೂ ಇದರಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿ ಅಂತ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಹೇಳಿದ್ದರು. ದುಬೆ ಉದಾಹರಣೆ ಕೊಟ್ಟೇ ಟೀಕಿಸಿದ್ದರು. ಯಾಕಂದ್ರೆ ದುಬೆ ಆಲ್ರೌಂಡರ್ ಆದ್ರೂ ಸಿಎಸ್‌ಕೆ ತಂಡ ಬರೀ ಅವರನ್ನ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಂಡಿತ್ತು. ಬ್ಯಾಟಿಂಗ್ ಮಾಡಿ ಪೆವಿಲಿಯನ್ನಲ್ಲಿ ಕೂತು ಬಿಡುತ್ತಿದ್ದರು. ಇದರಿಂದ ದುಬೆ ಬೌಲಿಂಗ್ ಮಾಡುವುದನ್ನೇ ಮರೆತಿದ್ದರು ಅಂದ್ರೆ ತಪ್ಪಲ್ಲ.

ದುಬೆಯಂತಹ ಆಲ್ರೌಂಡರ್, ಬರೀ ಬ್ಯಾಟಿಂಗ್ ಮಾಡಿ, ಬೌಲಿಂಗ್ ಮಾಡದಿದ್ದರೆ ಅವರ ಸಾಮರ್ಥ್ಯ ಪ್ರೂವ್ ಮಾಡೋಕಾಗಲ್ಲ. ಹಾಗಾಗಿ ಆಲ್ರೌಂಡರ್ ಬರೀ ಬ್ಯಾಟರ್ ಆಗಿರ್ತಾನೆ. ಅದು ಭಾರತೀಯ ಕ್ರಿಕೆಟ್‌ಗೆ ನಷ್ಟವೇ ಹೊರತು  ಬೇರೆ ಯಾರಿಗೂ ನಷ್ಟವಾಗಲ್ಲ. ಇದೇ ಉದ್ದೇಶದಿಂದ ರೋಹಿತ್ ಅಂದು ಆತಂಕ ವ್ಯಕ್ತಪಡಿಸಿದ್ದರು. ರೋಹಿತ್, ಆತಂಕ ವ್ಯಕ್ತಡಿಸಿದ್ರೂ ಬಿಸಿಸಿಐಗೆ ಅರ್ಥವಾಗುವಂತೆ ಕಾಣ್ತಿಲ್ಲ. ಇದನ್ನ ಅರ್ಥ ಮಾಡಿಕೊಂಡ್ರೆ ಒಳಿತು. ಅದನ್ನ ಬಿಟ್ಟು ಮತ್ತೆ ಇಂಪ್ಯಾಕ್ಟ್ ಪ್ಲೇಯರ್ಸ್ ರೂಲ್ಸ್ ತಂದ್ರೆ ಮತ್ತೊಂದು ಐಸಿಸಿ ಟೂರ್ನಿ ಗೆಲ್ಲಲು ಮತ್ತೊಂದು ದಶಕ ಕಾಯಬೇಕಾಗುತ್ತದೆ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
 

click me!