ಹಾರ್ದಿಕ್‌ ಪಾಂಡ್ಯಗೆ ಶುರುವಾಯ್ತು ಢವ-ಢವ..! ಆಲ್ರೌಂಡರ್‌ ಹೊಸ ತಲೆನೋವು ತಂದ ಕೋಚ್ ಗೌತಮ್ ಗಂಭೀರ್

Published : Aug 31, 2024, 04:35 PM IST
ಹಾರ್ದಿಕ್‌ ಪಾಂಡ್ಯಗೆ ಶುರುವಾಯ್ತು ಢವ-ಢವ..! ಆಲ್ರೌಂಡರ್‌ ಹೊಸ ತಲೆನೋವು ತಂದ ಕೋಚ್ ಗೌತಮ್ ಗಂಭೀರ್

ಸಾರಾಂಶ

ಟೀಂ ಇಂಡಿಯಾ ನೂತನ ಹೆಡ್ ಕೋಚ್ ಗೌತಮ್ ಗಂಭೀರ್, ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ಹೊಸದೊಂದು ಟಾಸ್ಕ್ ನೀಡಲು ಮುಂದಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾದ ಈ ಆಟಗಾರ ಅದ್ಭುತ ಪ್ರದರ್ಶನ ನೀಡಿದ್ರು. ಆ ಮೂಲಕ ಭಾರತ 2ನೇ ಬಾರಿ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ರು. ಆದ್ರೀಗ, ಈತನ ಕರಿಯರ್‌ಗೆ ಸಂಕಷ್ಟ ಎದುರಾಗಿದೆ. ಯಾರು ಆ ಆಟಗಾರ..? ಏನ್ ಕಥೆ ಅಂತೀರಾ..? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.

ಹಾರ್ದಿಕ್‌ಗೆ ಹೊಸ ತಲೆನೋವು ತಂದ ಹೊಸ ಕೋಚ್..!

ಹಾರ್ದಿಕ್ ಪಾಂಡ್ಯ, ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್.  ಭಾರತ 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಂಡ್ಯ ಅದ್ಭುತ ಪ್ರದರ್ಶನ ನೀಡಿದ್ರು. ಬ್ಯಾಟಿಂಗ್ ಆ್ಯಂಡ್ ಬೌಲಿಂಗ್ ಎರಡರಲ್ಲೂ ಮಿಂಚಿದ್ರು. ಭಾರತ 2ನೇ ಬಾರಿ ಟಿ20 ವಿಶ್ವಕಪ್ ಎತ್ತಿಹಿಡಿಯುವಲ್ಲಿ  ಮಹತ್ವದ ಪಾತ್ರವಹಿಸಿದ್ರು. ಆದ್ರೀಗ, ಪಾಂಡ್ಯಗೆ ಹೊಸ ತಲೆನೋವು ಶುರುವಾಗಿದೆ. 

ಭಾರತ ಅಂಡರ್ 19 ತಂಡಕ್ಕೆ ಎಂಟ್ರಿ ಕೊಟ್ಟ ದ್ರಾವಿಡ್ ಪುತ್ರ; ಪಾದಾರ್ಪಣೆ ಪಂದ್ಯದಲ್ಲೇ ಸಮಿತ್‌ಗೆ ಅಗ್ನಿ ಪರೀಕ್ಷೆ..!

ಪಾಂಡ್ಯರ ಈ ತಲೆನೋವಿಗೆ ನಯಾ ಕೋಚ್ ಗೌತಮ್ ಗಂಭೀರ್ ಕಾರಣವಾಗಿದ್ದಾರೆ. ಅಷ್ಟಕ್ಕೂ ಮ್ಯಾಟರ್ ಏನಂದ್ರೆ, ಗಂಭೀರ್ ಈ ಹಿಂದೆ ಕಾಮೆಂಟೇಟರ್ ಆಗಿದ್ದಾಗ,  ಇಂಟರ್ನ್ಯಾಷನಲ್ ಕ್ರಿಕೆಟ್ ಆಡೋ ಆಟಗಾರರು ಮೂರು ಫಾರ್ಮೆಟ್ನಲ್ಲಿ ಆಡ್ಬೇಕು. ಯಾವುದೇ ಆಟಗಾರ ಕೇವಲ ಟೆಸ್ಟ್ ಅಥವಾ ಒನ್ಡೇ, ಟಿ20 ಕ್ರಿಕೆಟ್‌ಗೆ ಸೀಮಿತರಾಗಬಾರದು ಎಂದಿದ್ರು. 

ಹಾರ್ದಿಕ್ ಕರಿಯರ್‌ಗೆ  ಅಡ್ಡಿಯಾಗುತ್ತಾ ಗಂಭೀರ್ ಯೋಚನೆ..? 

ಗಂಭೀರ್‌ ಈ ಆಲೋಚನೆಯೇ ಹಾರ್ದಿಕ್ ಪಾಂಡ್ಯಗೆ ಅಡ್ಡಿ ಯಾಗುತ್ತಾ..? ಅನ್ನೋ ಪ್ರಶ್ನೆ ಮೂಡಿದೆ. ಕೆಲ ವರ್ಷಗಳ ಥ್ರಿ ಫಾರ್ಮೆಟ್ ಪ್ಲೇಯರ್ ಆಗಿದ್ದ ಪಾಂಡ್ಯ, ಈಗ ಲಿಮಿಟೆಡ್ ಓವರ್ ಕ್ರಿಕೆಟ್ನಲ್ಲಿ ಮಾತ್ರ ಆಡ್ತಿದ್ದಾರೆ. 6 ವರ್ಷಗಳಿಂದ ಒಂದೇ ಒಂದು ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿಲ್ಲ. 

ವಿರಾಟ್ ಕೊಹ್ಲಿಗೆ ಪ್ರಪೋಸ್, ಸಚಿನ್ ಮಗನಿಗೆ ಗಾಳ ಹಾಕಿದ್ದ ಆಟಗಾರ್ತಿ ಮದುವೆಯಾಗಿದ್ದು ಮತ್ತೊಬ್ಬಳನ್ನು!

2018ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯವೇ ಹಾರ್ದಿಕ್ ಆಡಿದ ಕೊನೆಯ ಟೆಸ್ಟ್ ಪಂದ್ಯ. ಆದ್ರೀಗ, ಗಂಭೀರ್ ಕೋಚ್ ಆಗಿರೋದ್ರಿಂದ ಹಾರ್ದಿಕ್ ಮತ್ತೆ ಟೆಸ್ಟ್ ಕ್ಯಾಪ್ ಧರಿಸಬಹುದು ಅನ್ನೋ ಮಾತುಗಳು ಕೇಳಿಬರ್ತಿವೆ. 2021 ಮತ್ತು 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ನಲ್ಲಿ ಟೀಂ ಇಂಡಿಯಾ ಸೋಲು ಕಂಡಿತ್ತು. ಈ ಸೋಲುಗಳಿಗೆ ಪಾಂಡ್ಯರಂಥ ಬ್ಯಾಟಿಂಗ್ ಆಲ್ರೌಂಡರ್ ಇಲ್ಲದೇ ಇದ್ದದ್ದೇ, ಪ್ರಮುಖ ಕಾರಣವಾಗಿತ್ತು.  

ಟೀಂ ಇಂಡಿಯಾ ಮುಂದಿನ 3 ವರ್ಷಗಳಲ್ಲಿ ಗಂಭೀರ್ ತರಬೇತಿಯಲ್ಲಿ  4 ಐಸಿಸಿ ಟೂರ್ನಿ ಆಡಲಿದೆ.  ತಮ್ಮ ಅವಧಿಯಲ್ಲಿ ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದು ಕೊಡೋ ಪಣತೊಣತೊಟ್ಟಿರೋ ಗಂಭೀರ್, ಟೆಸ್ಟ್ ಫಾರ್ಮೆಟ್ನಲ್ಲೂ ಆಡುವಂತೆ ಹಾರ್ದಿಕ್‌ಗೆ ಮನವೊಲಿಸಲಿದ್ದಾರೆ ಎನ್ನಲಾಗ್ತಿದೆ. ಅದೇ ನಿಜವಾದ್ರೆ, ರೆಡ್‌ಬಾಲ್ ಕ್ರಿಕೆಟ್‌ಗೆ  ಹಾರ್ದಿಕ್ ಕಮ್‌ಬ್ಯಾಕ್ ಮಾಡೋದು ಫಿಕ್ಸ್. 

- ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ