ಭಾರತ ಅಂಡರ್ 19 ತಂಡಕ್ಕೆ ಎಂಟ್ರಿ ಕೊಟ್ಟ ದ್ರಾವಿಡ್ ಪುತ್ರ; ಪಾದಾರ್ಪಣೆ ಪಂದ್ಯದಲ್ಲೇ ಸಮಿತ್‌ಗೆ ಅಗ್ನಿ ಪರೀಕ್ಷೆ..!

ಭಾರತ ಅಂಡರ್ 19 ತಂಡಕ್ಕೆ ಸಮಿತ್ ದ್ರಾವಿಡ್ ಎಂಟ್ರಿಕೊಟ್ಟಿದ್ದು, ಬಲಿಷ್ಠ ತಂಡದ ಎದುರು ಪಾದಾರ್ಪಣೆಗೆ ಸಜ್ಜಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Samit Dravid gets selected for India Under 19 squad against Australia kvn

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಮಾಜಿ ಕೋಚ್ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್, ಇದೀಗ ತಮ್ಮ ತಂದೆಯ ಹೆಜ್ಜೆಯನ್ನೇ ಅನುಸರಿಸುತ್ತಾ ಮುನ್ನುಗ್ಗುತ್ತಿದ್ದಾನೆ. ಇದೀಗ ಸಮಿತ್ ದ್ರಾವಿಡ್, ಅಂಡರ್‌ 19 ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈಗಾಗಲೇ ವಿವಿಧ ಏಜ್‌ ಗ್ರೂಪ್‌ನಲ್ಲಿ ಮಿಂಚಿರುವ ಸಮಿತ್ ದ್ರಾವಿಡ್, ಭಾರತ ಅಂಡರ್ 19 ತಂಡದಲ್ಲಿ ಯಾವ ರೀತಿಯ ಪ್ರದರ್ಶನ ನೀಡಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ.

ಇನ್ನು ಭಾರತ ಅಂಡರ್ 19 ತಂಡಕ್ಕೆ ಇದೇ ಮೊದಲ ಬಾರಿಗೆ ಆಯ್ಕೆಯಾಗಿರುವ ಸಮಿತ್ ದ್ರಾವಿಡ್‌ಗೆ ಪಾದಾರ್ಪಣೆ ಪಂದ್ಯದಲ್ಲೇ ಅಗ್ನಿ ಪರೀಕ್ಷೆ ಎದುರಾಗಲಿದೆ. ಹೌದು, ಸಮಿತ್ ದ್ರಾವಿಡ್ ಇದೀಗ ಬಲಾಢ್ಯ ಆಸ್ಟ್ರೇಲಿಯಾ ಕಿರಿಯರ ತಂಡದ ಎದುರು ಭಾರತ ಅಂಡರ್ 19 ತಂಡಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಆಸ್ಟ್ರೇಲಿಯಾ ಅಂಡರ್ 19 ತಂಡದ ಎದುರು ಮೂರು ಪಂದ್ಯಗಳ ಏಕದಿನ ಸರಣಿಯು ಮುಂಬರುವ ಸೆಪ್ಟೆಂಬರ್ 21, 23 ಹಾಗೂ 26ರಂದು ಪಾಂಡಿಚೆರಿಯಲ್ಲಿ ನಡೆಯಲಿದೆ. ಭಾರತ ಅಂಡರ್ 19 ತಂಡವನ್ನು ಉತ್ತರಪ್ರದೇಶ ಮೂಲದ ಮೊಹಮ್ಮದ್ ಅಮಾನ್ ನಾಯಕನಾಗಿ ಮುನ್ನಡೆಸಲಿದ್ದಾರೆ.

ವಿರಾಟ್ ಕೊಹ್ಲಿಗೆ ಪ್ರಪೋಸ್, ಸಚಿನ್ ಮಗನಿಗೆ ಗಾಳ ಹಾಕಿದ್ದ ಆಟಗಾರ್ತಿ ಮದುವೆಯಾಗಿದ್ದು ಮತ್ತೊಬ್ಬಳನ್ನು!

ಇನ್ನು ಇದಾದ ಬಳಿಕ ಭಾರತ ಅಂಡರ್ 19 ತಂಡವು ಚೆನ್ನೈನತ್ತ ಪ್ರವಾಸ ಬೆಳೆಸಲಿದ್ದು, ಅಲ್ಲಿ ಸೆಪ್ಟೆಂಬರ್ 30ರಿಂದ ಆರಂಭವಾಗಲಿರುವ 4 ದಿನಗಳ ಎರಡು ಪಂದ್ಯಗಳನ್ನಾಡಲಿದೆ. ಈ ಸರಣಿಗೆ ಮಧ್ಯಪ್ರದೇಶ ಮೂಲದ ಸೋಹಮ್ ಪಟವರ್ಧನ್ ನಾಯಕನಾಗಿ ಭಾರತ ಅಂಡರ್ 19 ತಂಡವನ್ನು ಮುನ್ನಡೆಸಲಿದ್ದಾರೆ.

ಮಧ್ಯಮ ವೇಗದ ಬೌಲರ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿರುವ ಸಮಿತ್ ದ್ರಾವಿಡ್, ಸದ್ಯ ಕೆಎಸ್‌ಸಿಎ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಸಮಿತ್ ದ್ರಾವಿಡ್, 7 ಇನಿಂಗ್ಸ್‌ಗಳನ್ನಾಡಿ ಕೇವಲ 82 ರನ್ ಗಳಿಸಲಷ್ಟೇ ಶಕ್ತವಾಗಿದ್ದಾರೆ.  ಇನ್ನು ಇದಕ್ಕೂ ಮೊದಲು ಈ ವರ್ಷಾರಂಭದಲ್ಲಿ ನಡೆದ ಕೋಚ್ ಬೆಹಾರ್ ಟ್ರೋಫೀ ಟೂರ್ನಿಯಲ್ಲಿ ಸಮಿತ್ ದ್ರಾವಿಡ್ ಅಮೋಘ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಕರ್ನಾಟಕ ಕಿರಿಯರ ಕ್ರಿಕೆಟ್ ತಂಡವು ಚೊಚ್ಚಲ ಬಾರಿಗೆ ಕೋಚ್ ಬೆಹಾರ್ ಟ್ರೋಫಿ ಗೆಲುವಿನಲ್ಲಿ ಸಮಿತ್ ದ್ರಾವಿಡ್ ಪಾತ್ರ ಮಹತ್ವದ್ದಾಗಿತ್ತು.

"ನಮಾಝ್ ಮಾಡುವಾಗ ಸಿಗುವ ನೆಮ್ಮದಿ, ಶತಕ ಚಚ್ಚಿದರೂ ಸಿಗಲ್ಲ": ಭಾರತೀಯ ಕ್ರಿಕೆಟಿಗನ ದಿಟ್ಟ ಮಾತು..!

ಏಕದಿನ ಸರಣಿಗೆ ಭಾರತ ಅಂಡರ್ 19 ತಂಡ:

ರುದ್ರ ಪಟೇಲ್, ಸಾಹಿಲ್ ಪಾರಖ್, ಕಾರ್ತಿಕೇಯ ಕೆ.ಪಿ, ಮೊಹಮ್ಮದ್ ಅಮಾನ್, ಕಿರಣ್ ಚೋರ್ಮಲೆ, ಅಭಿಜ್ಞಾನ್ ಕುಂದು, ಹರ್ವನಾಶ್ ಸಿಂಗ್ ಪಂಗಾಲಿಯಾ, ಸಮಿತ್ ದ್ರಾವಿಡ್, ಯುದಜಿತ್ ಗುಹಾ, ಸಮರ್ಥ್ ಎನ್, ನಿಖಿಲ್ ಕುಮಾರ್, ಚೇತನ್ ಶರ್ಮಾ, ಹಾರ್ದಿಕ್ ರಾಜ್, ರೋಹಿತ್ ರಾಜಾವತ್, ಮೊಹಮ್ಮದ್ ಎನಾನ್.

4 ದಿನಗಳ ಕ್ರಿಕೆಟ್ ಪಂದ್ಯಕ್ಕೆ ಭಾರತ ಅಂಡರ್ 19 ತಂಡ:

ವೈಭವ್ ಸೂರ್ಯವಂಶಿ, ನಿತ್ಯ ಪಾಂಡ್ಯ, ವಿಹಾನ್ ಮಲ್ಹೋತ್ರಾ, ಸೋಹಮ್ ಪಟವರ್ಧನ್, ಕಾರ್ತಿಕೇಯ ಕೆ.ಪಿ, ಸಮಿತ್ ದ್ರಾವಿಡ್, ಅಭಿಜ್ಞಾನ್ ಕುಂದು, ಹರ್ವನಾಶ್ ಸಿಂಗ್ ಪಂಗಾಲಿಯಾ, ಚೇತನ್ ಶರ್ಮಾ, ಸಮರ್ಥ್ ಎನ್, ಆದಿತ್ಯ ರಾವತ್, ನಿಖಿಲ್ ಕುಮಾರ್, ಅನ್ಮೋಲ್‌ಜಿತ್ ಸಿಂಗ್, ಆದಿತ್ಯ ಸಿಂಗ್, ಮೊಹಮ್ಮದ್ ಎನಾನ್.

Latest Videos
Follow Us:
Download App:
  • android
  • ios