
ಕೋಲ್ಕತಾ(ಜು.18): ಭಾರತ ತಂಡದ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, 3 ತಿಂಗಳು ಸಮಯಾವಕಾಶ ಕೊಟ್ಟರೆ ಟೆಸ್ಟ್ ಕ್ರಿಕೆಟ್‌ಗೆ ವಾಪಸಾಗಿ ಟೀಂ ಇಂಡಿಯಾ ಪರ ಮತ್ತೆ ರನ್ ಗಳಿಸುವುದಾಗಿ ಹೇಳಿಕೊಂಡಿದ್ದಾರೆ.
ಬಂಗಾಳಿ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಾವು 2008ರಲ್ಲಿ ನಿವೃತ್ತಿ ಪಡೆಯದಿದ್ದರೆ ಮತ್ತಷ್ಟು ದಿನಗಳ ಕಾಲ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿ ಉಳಿಯುತ್ತಿದ್ದಾಗಿ ತಿಳಿಸಿದ್ದಾರೆ. ‘ನನಗೆ ಮತ್ತೊಂದೆರಡು ಸರಣಿಗಳಲ್ಲಿ ಅವಕಾಶ ಕೊಟ್ಟಿದ್ದರೆ ಹೆಚ್ಚು ರನ್ ಗಳಿಸುತ್ತಿದ್ದೆ. ಆ ವರ್ಷ ಅತಿಹೆಚ್ಚು ರನ್ ಗಳಿಸಿದರೂ ನನ್ನನ್ನೂ ಏಕದಿನ ತಂಡದಿಂದ ಹೊರಹಾಕಲಾಯಿತು. ಈಗಲೂ ನನ್ನಲ್ಲಿ ಆಡುವ ಶಕ್ತಿ ಇದೆ. 3 ರಣಜಿ ಪಂದ್ಯಗಳಲ್ಲಿ ಆಡಿದರೆ ಲಯ ಕಂಡುಕೊಳ್ಳಲಿದ್ದೇನೆ. ನಂತರ ಟೆಸ್ಟ್‌ನಲ್ಲೂ ರನ್ ಗಳಿಸಲಿದ್ದೇನೆ’ ಎಂದು ಗಂಗೂಲಿ ಹೇಳಿದ್ದಾರೆ.
ಸ್ಟೋಕ್ಸ್, ಸಿಬ್ಲಿ ಶತಕ: ಬೃಹತ್ ಮೊತ್ತ ದಾಖಲಿಸಿದ ಇಂಗ್ಲೆಂಡ್
ಟೀಂ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಸೌರವ್ ಗಂಗೂಲಿಯನ್ನು ಗ್ರೇಗ್ ಚಾಪೆಲ್ ಕೋಚ್ ಆಗುತ್ತಿದ್ದಂತೆ ದಾದಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ರಾಹುಲ್ ದ್ರಾವಿಡ್‌ಗೆ ಪಟ್ಟ ಕಟ್ಟಲಾಯಿತು. 2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೌರವ್ ಗಂಗೂಲಿ ಭರ್ಜರಿ ಕಮ್‌ಬ್ಯಾಕ್ ಮಾಡಿದರಾದರೂ 2007-08ರ ಆಸ್ಟ್ರೇಲಿಯಾ ಸರಣಿಯಿಂದ ದಾದಾರನ್ನು ಕೈಬಿಡಲಾಯಿತು. ಇದರ ಬೆನ್ನಲ್ಲೇ ಸೌರವ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು. ಇದರ ಹೊರತಾಗಿಯೂ ಸೌರವ್ 2012ರ ವರೆಗೆ ಐಪಿಎಲ್ ಹಾಗೂ ದೇಸಿ ಕ್ರಿಕೆಟ್‌ನಲ್ಲಿ ಕ್ರಿಕೆಟ್ ಆಡಿದ್ದರು.
ಸೌರವ್ 113 ಟೆಸ್ಟ್ ಪಂದ್ಯಗಳನ್ನಾಡಿ 42.17ರ ಸರಾಸರಿಯಲ್ಲಿ 16 ಶತಕ ಸಹಿತ 7212 ರನ್ ಬಾರಿಸಿದ್ದರು. ಇನ್ನು 311 ಏಕದಿನ ಪಂದ್ಯಗಳಿಂದ 41.02ರ ಸರಾಸರಿಯಲ್ಲಿ 22 ಶತಕ ಸಹಿತ 11363 ರನ್ ಗಳಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.