
ಮುಂಬೈ[ಡಿ.01]: ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ನೇತೃತ್ವದಲ್ಲಿ ಭಾನುವಾರ 88ನೇ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ)ಯನ್ನು ನಡೆಸಲಾಗುತ್ತಿದೆ. ಈ ಸಭೆಯಲ್ಲಿ ಕೂಲಿಂಗ್ ಆಫ್ ನಿಯಮ ಬದಲಾವಣೆ, ಕ್ರಿಕೆಟ್ ಸಲಹಾ ಸಮಿತಿ ಹಾಗೂ ನೂತನ ನೈತಿಕ ಅಧಿಕಾರಿ ನೇಮಕಾತಿಗಳ ಸಹಿತ ಹಲವು ಕುತೂಹಲಕರ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ.
ಪಿಂಕ್ ಬಾಲ್ ಟೆಸ್ಟ್ ಯಶಸ್ವಿ ಬೆನ್ನಲ್ಲೆ ಅಚ್ಚರಿಯ ಹೇಳಿಕೆ ನೀಡಿದ ದಾದಾ
ಗಂಗೂಲಿ ಅಧ್ಯಕ್ಷತೆಯಲ್ಲಿ ಇದು ಚೊಚ್ಚಲ ಸಭೆಯಾಗಿದೆ. ಗಂಗೂಲಿ ಅವಧಿ ಕೇವಲ 9 ತಿಂಗಳಾಗಿದ್ದು, ಅವಧಿ ವಿಸ್ತರಿಸಲು ಬಿಸಿಸಿಐ ಯತ್ನಿಸಲಿದೆ. ಬಿಸಿಸಿಐ ಅಥವಾ ರಾಜ್ಯ ಕ್ರಿಕೆಟ್‌ನಲ್ಲಿ 3 ವರ್ಷ ಸೇವೆ ಸಲ್ಲಿಸಿದವರು 3 ವರ್ಷ ಕಡ್ಡಾಯ ಕೂಲಿಂಗ್ ಆಫ್ ವ್ಯಾಪ್ತಿಗೆ ಬರಬೇಕು. ಕೂಲಿಂಗ್ ಆಫ್ ಸಮಯದಲ್ಲಿ ಕ್ರಿಕೆಟ್ ಚಟುವಟಿಕೆಗಳಿಂದ ದೂರ ಇರಬೇಕು. ಗಂಗೂಲಿ ಅನುಭವವನ್ನು ಕ್ರಿಕೆಟ್ ಅಭಿವೃದ್ಧಿಗೆ ಬಳಸಿಕೊಳ್ಳುವ ದೃಷ್ಟಿ ಕೋನದಿಂದ, ಬಿಸಿಸಿಐ ಅಥವಾ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಕನಿಷ್ಠ 6 ವರ್ಷ ಸೇವೆ ಸಲ್ಲಿಸಿದರೆ ಮಾತ್ರ ಕೂಲಿಂಗ್ ಆಫ್ ವ್ಯಾಪ್ತಿಗೆ ಬರಬೇಕೆಂದು ನಿಯಮ ಬದಲಿಸಲಾಗುವುದು.
ದಿಢೀರ್ ಇನಿಂಗ್ಸ್ ಡಿಕ್ಲೇರ್: ಟಿಮ್ ಪೈನೆ ಟ್ರೋಲ್ ಮಾಡಿದ ಫ್ಯಾನ್ಸ್..!
ಸಂವಿಧಾನದಲ್ಲಿ ಈ ತಿದ್ದುಪಡಿಗೆ ಸುಪ್ರೀಂ ಕೋರ್ಟ್ ಅಂಗೀಕಾರ ನೀಡಿದರೆ, 3 ವರ್ಷ ಬಿಸಿಸಿಐನಲ್ಲಿ ದಾದಾಗಿರಿ ನಡೆಯಲಿದೆ. ಅಲ್ಲದೇ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ)ಗೆ ಮತ್ತೆ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್ ಹಾಗೂ ವಿವಿಎಸ್ ಲಕ್ಷ್ಮಣ್ ಅವರನ್ನು ಸೇರಿಸಿಕೊಳ್ಳುವ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.