ಪತ್ನಿ ಅನುಷ್ಕಾ ಶರ್ಮಾಳನ್ನು ಟ್ರೋಲ್ ಮಾಡುತ್ತಿರುವ ವಿರುದ್ದ ನಾಯಕ ವಿರಾಟ್ ಕೊಹ್ಲಿ ಗರಂ ಆಗಿದ್ದಾರೆ. ಟ್ರೋಲ್ ಕುರಿತು ಇದೇ ಮೊದಲ ಬಾರಿ ಕೊಹ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
ಮುಂಬೈ(ನ.30): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ನೀಡಿದರೆ, ತಂಡದ ಆಯ್ಕೆ, ಟೀಂ ಇಂಡಿಯಾ ಮೀಟಿಂಗ್ ಸೇರಿದಂತೆ ಯಾವುದೇ ವಿಚಾರಕ್ಕೂ, ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಟ್ರೋಲ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಷ್ಟು ದಿನ ಮೌನವಾಗಿದ್ದ ಕೊಹ್ಲಿ, ಇದೀಗ ಮೌನ ಮುರಿದಿದ್ದಾರೆ.
ಇದನ್ನೂ ಓದಿ:
undefined
ಪ್ರತಿ ವಿಚಾರಕ್ಕೂ ಅನುಷ್ಕಾ ಶರ್ಮಾ ಟ್ರೋಲ್ ಮಾಡುವುದು ಸರಿಯಲ್ಲ. ನಾನು ಅನುಷ್ಕಾ ಶರ್ಮಾ ಮೊದಲ ಬೇಟಿಯಾದಾಗಲೇ ಆಕೆ ಸ್ಟಾರ್ ಆಗಿದ್ದಳು. ಅನುಷ್ಕಾ ತನ್ನ ಪ್ರಯತ್ನದಿಂದ ಸಾಧನೆ ಶಿಖರ ಏರಿದ್ದಾಳೆ. ಆದರೆ ಯಾವತ್ತೂ ತಪ್ಪು ದಾರಿಯಲ್ಲಿ ನಡೆದಿಲ್ಲ. ಇಷ್ಟಾದರೂ ಕ್ರಿಕೆಟ್ ಅಭಿಮಾನಿಗಳು, ಬಾಲಿವುಡ್ ಅಭಿಮಾನಿಗಳು
ಟ್ರೋಲ್ ಮಾಡುತ್ತಿರುವುದು ಸರಿಯಲ್ಲ ಎಂದು ಕೊಹ್ಲಿ ಹೇಳಿದ್ದಾರೆ.
ಇದನ್ನೂ ಓದಿ:
ಅನುಷ್ಕಾ ಯಾವತ್ತೂ ಟೀಂ ಇಂಡಿಯಾ ವಿಚಾರದಲ್ಲಿ ಮೂಗು ತುರಿಸಿಲ್ಲ. ನಾನು ಕೂಡ ಆಕೆ ಬಾಲಿವುಡ್ ಕ್ಷೇತ್ರಕ್ಕೆ ತಲೆಹಾಕಿಲ್ಲ. ಆದರೆ ಟ್ರೋಲಿಗರು ಮಾತ್ರ ಸಂಬಂಧವಿಲ್ಲದ ಒಂದಕ್ಕೊಂದು ವಿಟಾರಗಳನ್ನು ಥಳುಕು ಹಾಕುತ್ತಾರೆ. ಇದು ಸರಿಯಲ್ಲ. ನಾವು ಟ್ರೋಲ್‌ಗಳನ್ನು ಗಂಭೀರವಾಗಿ ಪರಗಣಿಸುವುದಿಲ್ಲ. ಆದರೆ ಪ್ರತಿ ಬಾರಿ ಟ್ರೋಲ್ ಆಗುತ್ತಿರುವುದು ಬೇಸರ ತಂದಿದೆ ಎಂದು ಕೊಹ್ಲಿ ಹೇಳಿದ್ದಾರೆ.
ಬಾಂಗ್ಲಾದೇಶ ವಿರುದ್ದದ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿರುವ ಕೊಹ್ಲಿ ಸೈನ್ಯ ಸದ್ಯ ವಿಶ್ರಾಂತಿಯಲ್ಲಿದೆ. ಡಿಸೆಂಬರ್ 6 ರಿಂದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಆರಂಭವಾಗಲಿದೆ. ಮೊದಲು 3 ಪಂದ್ಯದ ಟಿ20 ಸರಣಿ ನಡೆಯಲಿದ್ದು, ಬಳಿಕ 3 ಪಂದ್ಯದ ಏಕದಿನ ಸರಣಿ ಆಯೋಜಿಸಲಾಗಿದೆ.