T20 World Cup: ದಕ್ಷಿಣ ಆಫ್ರಿಕಾಕ್ಕೆ ಸೆಮೀಸ್‌ ರೇಸಲ್ಲಿ ಉಳಿವ ಗುರಿ!

Kannadaprabha News   | Asianet News
Published : Nov 02, 2021, 06:51 AM ISTUpdated : Nov 02, 2021, 07:02 AM IST
T20 World Cup: ದಕ್ಷಿಣ ಆಫ್ರಿಕಾಕ್ಕೆ ಸೆಮೀಸ್‌ ರೇಸಲ್ಲಿ ಉಳಿವ ಗುರಿ!

ಸಾರಾಂಶ

*2 ಪಂದ್ಯಗಳಲ್ಲಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ದಕ್ಷಿಣ ಆಫ್ರಿಕಾ  *ಸತತ ಮೂರು ಪಂದ್ಯಗಳಲ್ಲಿ ಸೋಲನುಭವಿಸಿರುವ ಬಾಂಗ್ಲಾದೇಶ *ಸೆಮಿಫೈನಲ್‌ ರೇಸ್‌ನಲ್ಲಿ ಉಳಿಯಲು ಎದುರು ನೋಡುತ್ತಿರುವ ಹರಿಣಗಳು

ಅಬು ಧಾಬಿ (ನ. 2) : ಸತತ 2 ಪಂದ್ಯಗಳಲ್ಲಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ದಕ್ಷಿಣ ಆಫ್ರಿಕಾ (South Africa) ತಂಡ ಮಂಗಳವಾರ ( (ನ. 2) ಬಾಂಗ್ಲಾದೇಶ (Bangladesh) ವಿರುದ್ಧ ಸೆಣಸಾಡಲಿದೆ. ಸೆಮಿಫೈನಲ್‌ ರೇಸ್‌ನಲ್ಲಿ ಉಳಿಯಲು ಎದುರು ನೋಡುತ್ತಿರುವ ಹರಿಣಗಳಿಗೆ ಈ ಪಂದ್ಯ ಗೆಲ್ಲುವುದು ಅನಿವಾರ್ಯವಾಗಿದೆ. ಸತತ ಮೂರು ಪಂದ್ಯಗಳಲ್ಲಿ ಸೋಲನುಭವಿಸಿರುವ ಬಾಂಗ್ಲಾದೇಶ ಸೆಮೀಸ್‌ ರೇಸ್‌ನಿಂದ ಬಹುತೇಕ ಹೊರಬಿದ್ದಿದ್ದು, 4ನೇ ಸೋಲನ್ನು ತಪ್ಪಿಸುವ ಒತ್ತಡದಲ್ಲಿದೆ.

ಸೇಮಿಸ್ ಕನಸು ಬಲುದೂರ ಎಂದ ಸೆಹ್ವಾಗ್ ಕೊಟ್ಟ ಅಂಕಿ ಅಂಶ

ಅಂತಾರಾಷ್ಟ್ರೀಯ ಟಿ20ಯಲ್ಲಿ 6 ಪಂದ್ಯಗಳಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದು, 6 ಬಾರಿಯೂ ದ.ಆಫ್ರಿಕಾ ಗೆಲುವು ಸಾಧಿಸಿದೆ.4 ಅಂಕಗಳೊಂದಿಗೆ ಗುಂಪು-1ರಲ್ಲಿ ದ.ಆಫ್ರಿಕಾ 2ನೇ ಸ್ಥಾನದಲ್ಲಿದ್ದರೆ, ಆಸೀಸ್‌ (Australia) 3ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ನೆಟ್‌ ರನ್‌ರೇಟ್‌ ಉತ್ತಮಗೊಳಿಸಿಕೊಳ್ಳುವ ಕಡೆಗೂ ದ.ಆಫ್ರಿಕಾ ಗಮನ ಹರಿಸಬೇಕಿದೆ.

ಸಂಭವನೀಯ ಆಟಗಾರರ ಪಟ್ಟಿ

ದಕ್ಷಿಣ ಆಫ್ರಿಕಾ: ಟೆಂಬಾ ಬವುಮಾ (Temba Bavuma), ಕ್ವಿಂಟನ್ ಡಿ ಕಾಕ್ (Quinton de Kock), ರಾಸ್ಸೀ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ರೀಜಾ ಹೆಂಡ್ರಿಕ್ಸ್, ಡೇವಿಡ್ ಮಿಲ್ಲರ್, ಡ್ವೈನ್ ಪ್ರಿಟೋರಿಯಸ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಅನ್ರಿಚ್ ನಾರ್ಟ್ಜೆ, ತಬ್ರೈಜ್ ಶಮ್ಸಿ

 9 ತಿಂಗಳ ವಿರಾಟ್‌ ಮಗಳು ವಮಿಕಾಗೆ ಅತ್ಯಾಚಾರದ ಬೆದರಿಕೆ..! ಇದೇನಾ ಸಂಸ್ಕೃತಿ..?

ಬಾಂಗ್ಲಾದೇಶ:  ಸೌಮ್ಯ ಸರ್ಕಾರ್, ಮೊಹಮ್ಮದ್ ನಯಿಮ್, ಲಿಟನ್ ದಾಸ್ (Liton Das) , ಮುಶ್ಫಿಕುರ್ ರಹೀಂ, ಮಹಮ್ಮದುಲ್ಲಾ (Mahmudullah), ಅಫೀಫ್ ಹೊಸೈನ್, ಮಹೇದಿ ಹಸನ್, ಶೋರಿಫುಲ್ ಇಸ್ಲಾಂ, ನಸುಮ್ ಅಹ್ಮದ್/ಶಮೀಮ್ ಹೊಸೈನ್, ಮುಸ್ತಫಿಜುರ್ ರೆಹಮಾನ್, ತಸ್ಕಿನ್ ಅಹ್ಮದ್

ಪಿಚ್‌ ರಿಪೋರ್ಟ್‌

ಅಬುಧಾಬಿಯ (Abu Dhabi) ಪಿಚ್ ಯಾವುದೇ ರೀತಿಯಿಂದಲೂ ಬ್ಯಾಟಿಂಗ್‌ಗೆ (Batting) ಉತ್ತಮವಾಗಿಲ್ಲ. ವಿಶ್ವಕಪ್‌ನಲ್ಲಿನ ಮೊದಲ ಇನ್ನಿಂಗ್ಸ್ ಸ್ಕೋರ್ ಸರಾಸರಿ (Average) ಗಮನಿಸಿದರೆ ಈ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡುವುದು ಉತ್ತಮವಲ್ಲ ಎಂಬುದನ್ನು ತೋರಿಸುತ್ತದೆ. ಇದಲ್ಲದೆ, ಈ ಮೈದಾನದಲ್ಲಿ 75 ಪ್ರತಿಶತ ಪಂದ್ಯಗಳನ್ನು ಚೇಸಿಂಗ್ ತಂಡಗಳೇ (Chasing Team)) ಗೆದ್ದಿವೆ. ಇಲ್ಲಿ 8 T20Is T20 ವಿಶ್ವಕಪ್ 2021ರ ಪಂದ್ಯಗಳ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್  ಕೇವಲ 128.

ಲಂಕಾ ಮಣಿಸಿ ಸೆಮಿಫೈನಲ್ ಎಂಟ್ರಿ ಬಹುತೇಕ ಖಚಿತಪಡಿಸಿದ ಇಂಗ್ಲೆಂಡ್!

ಸೆಮಿಫೈನಲ್ ಎಂಟ್ರಿ ಬಹುತೇಕ ಖಚಿತಪಡಿಸಿದ ಇಂಗ್ಲೆಂಡ್!

T20 World Cup 2021 ಟೂರ್ನಿಯಲ್ಲಿ ಇಂಗ್ಲೆಂಡ್(England) ಮೊದಲ ತಂಡವಾಗಿ ಸೆಮಿಫೈನಲ್ (Semifinal) ಪ್ರವೇಶವನ್ನು ಖಚಿತಪಡಿಸಿದೆ. ಜೋಸ್ ಬಟ್ಲರ್(Jos buttler) ಆಕರ್ಷಕ ಶತಕ ಹಾಗೂ ಬೌಲರ್‌ಗಳ ಅದ್ಭುತ ಪ್ರದರ್ಶನದಿಂದ ಇಂಗ್ಲೆಂಡ್, ಶ್ರೀಲಂಕಾ(Srilanka) ವಿರುದ್ಧ ರನ್ ಗೆಲುವು ದಾಖಲಿಸಿದೆ. ಸತತ 4 ಗೆಲುವು ದಾಖಲಿಸಿದ ಇಂಗ್ಲೆಂಡ್ ನೇರವಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಅಂಕಪಟ್ಟಿ

ಶ್ರೀಲಂಕಾ (Sri Lanka) ವಿರುದ್ಧದ ಗೆಲುವಿನ ಬಳಿಕ ಇಂಗ್ಲೆಂಡ್ (England) ತಂಡ 8 ಅಂಕ ಸಂಪಾದಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದಿದೆ. ಸತತ 4 ಗೆಲುವಿನ ಮೂಲಕ ಇಂಗ್ಲೆಂಡ್ ತಂಡದ ಸೆಮಿಫೈನಲ್ ಕನಸು ಕೈಗೂಡಿದೆ. ಇತ್ತ ಶ್ರೀಲಂಕಾ ಮತ್ತೊಂದು ಸೋಲಿಗೆ ಗುರಿಯಾಯಿತು. ಈ ಮೂಲಕ ಶ್ರೀಲಂಕಾ ಆಡಿದ 4 ಪಂದ್ಯದಲ್ಲಿ ಕೇವಲ 1 ಗೆಲುವು ಸಾಧಿಸಿದೆ. 

ಅನುಮಾನ ಬೇಡ, ಈಗಲೂ ಇದೆ ಟೀಂ ಇಂಡಿಯಾಗೆ ಸೆಮೀಸ್‌ಗೇರುವ ಅವಕಾಶ..!

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?