T20 World Cup 2021: ಜೋಸ್ ಬಟ್ಲರ್ ಸೆಂಚುರಿ, ಶ್ರೀಲಂಕಾಗೆ 164 ರನ್ ಗುರಿ!

By Suvarna NewsFirst Published Nov 1, 2021, 9:21 PM IST
Highlights
  •  ಜೋಸ್ ಬಟ್ಲರ್ ಸೆಂಚುರಿ ದಾಖಲೆ
  • ಶ್ರೀಲಂಕಾಗೆ 164 ರನ್ ಟಾರ್ಗೆಟ್ ನೀಡಿದ ಇಂಗ್ಲೆಂಡ್
  • ಶಾರ್ಜಾದಲ್ಲಿ ನಡೆಯುತ್ತಿರುವ ರೋಚಕ ಪಂದ್ಯ

ಶಾರ್ಜಾ(ನ.01):  ಜೋಸ್ ಬಟ್ಲರ್ ಭರ್ಜರಿ ಶತಕ, ನಾಯಾಕ ಇಯಾನ್ ಮಾರ್ಗನ್ ನೀಡಿದ ಉತ್ತಮ ಸಾಥ್‌ನಿಂದ ಶ್ರೀಲಂಕಾ ವಿರುದ್ಧ  ಇಂಗ್ಲೆಂಡ್ 4 ವಿಕೆಟ್ ನಷ್ಟಕ್ಕೆ 164 ರನ್ ಸಿಡಿಸಿದೆ. ಇದೀಗ ಶ್ರೀಲಂಕಾ ಗೆಲುವಿಗೆ 165 ರನ್ ಸಿಡಿಸಬೇಕಿದೆ.

ಸೇಮಿಸ್ ಕನಸು ಬಲುದೂರು ಎಂದ ಸೆಹ್ವಾಗ್ ಕೊಟ್ಟ ಅಂಕಿ ಅಂಶ

T20 World Cup 2021 ಟೂರ್ನಿಯಲ್ಲಿ ಎಲ್ಲಾ ತಂಡಗಳು ಸೆಕೆಂಡ್ ಬ್ಯಾಟಿಂಗ್ ಮಾಡಲು ಇಚ್ಚಿಸುತ್ತದೆ. ಇದಕ್ಕೆ ಕಾರಣ ಚೇಸಿಂಗ್ ಮಾಡಿದ ತಂಡ ಹೆಚ್ಚು ಗೆಲುವು ಸಾಧಿಸಿದೆ. ಆದರೆ ಶ್ರೀಲಂಕಾ ವಿರುದ್ಧ ಟಾಸ್ ಸೋತು ಅನಿವಾರ್ಯವಾಗಿ ಬ್ಯಾಟಿಂಗ್ ಇಳಿದ ಇಂಗ್ಲೆಂಡ್ ತಂಡದ ಪರಿಸ್ಥಿತಿ ಹೆಚ್ಚು ಭನ್ನವಾಗಿರಲಿಲ್ಲ. ಆರಂಭದಲ್ಲೇ ಜೇಸನ್ ರಾಯ್ ವಿಕೆಟ್ ಕಳೆದುಕೊಂಡಿತು.

ಜೇಸನ್ ರಾಯ್ 9 ರನ್ ಸಿಡಿಸಿ ಔಟಾದರು. ಜೋಸ್ ಬಟ್ಲರ್ ಹೋರಾಟ ಮುಂದುವರಿಸಿದರು. ಆದರೆ ಡೇವಿಡ್ ಮಲನ್ ಕೇವಲ 6 ರನ್ ಸಿಡಿಸಿ ಔಟಾದರು. 34 ರನ್‌ಗಳಿಗೆ ಇಂಗ್ಲೆಂಡ್ 2 ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿತು. ಇತ್ತ ಜಾನಿ ಬೈರ್‌ಸ್ಟೋ ಡಕೌಟ್ ಆದರು.

T20 World Cup: 9 ತಿಂಗಳ ವಿರಾಟ್‌ ಮಗಳು ವಮಿಕಾಗೆ ಅತ್ಯಾಚಾರದ ಬೆದರಿಕೆ..! ಇದೇನಾ ಸಂಸ್ಕೃತಿ..?

ಪ್ರಮುಖ 3 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ತಂಡಕ್ಕೆ ಬಟ್ಲರ್ ಹಾಗೂ ನಾಯಕ ಇಯಾನ್ ಮಾರ್ಗನ್ ಆಸರೆಯಾದರು. ಬಟ್ಲರ್ ಸ್ಪೋಟಕ ಬ್ಯಾಟಿಂಗ್ ಮೂಲಕ ತಂಡಕ್ಕೆ ನೆರವಾದರು. ಬಟ್ಲರ್ ಅರ್ಧಶತಕ ಸಿಡಿಸಿ ಮಿಂಚಿದರು. ಹಾಫ್ ಸೆಂಚುರಿ ಬಳಿಕ ಅಬ್ಬರಿಸಿದ ಬಟ್ಲರ್ ಆಕರ್ಷಕ ಶತಕ ಸಿಡಿಸಿದರು. ಇದು T20 World Cup 2021 ಟೂರ್ನಿಯ ಮೊದಲ ಸೆಂಚುರಿ ಅನ್ನೋ ದಾಖಲೆ ಬರೆಯಿತು.

ಅಂತಿಮ ಎಸೆತದಲ್ಲಿ ಬಟ್ಲರ್ ಸಿಕ್ಸರ್ ಸಿಡಿಸಿ ಸೆಂಚುರಿ ಪೂರೈಸಿದರು. ಇದು ಬಟ್ಲರ್ ಟಿ20 ಮಾದರಿಯಲ್ಲಿ ಸಿಡಿಸಿದ ಮೊದಲ ಶತಕವಾಗಿದೆ. ಈ ಸೆಂಚುರಿ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಜೋಸ್ ಬಟ್ಲರ್ 2085 ರನ್ ಸಿಡಿಸಿದ್ದಾರೆ. ಲಂಕಾ ವಿರುದ್ಧ ಸಿಡಿಸಿದ ಚೊಚ್ಚಲ ಶತಕ ಹಾಗೂ 15 ಹಾಫ್  ಸೆಂಚುರಿ ಸಿಡಿಸಿದ್ದಾರೆ. ಟಿ20ಯಲ್ಲಿ ಜೋಸ್ ಬಟ್ಲರ್ ಸ್ಟ್ರೈಕ್ ರೇಟ್ 141.16.

ಬಟ್ಲರ್ ಟಿ20 ಟೂರ್ನಿಯಲ್ಲಿ ಸಿಡಿಸಿದ ಅತ್ಯಧಿಕ ಮೊತ್ತ ಅನ್ನೋ ಹೆಗ್ಗಳಿಕೆಗೂ ಈ ಇನ್ನಿಂಗ್ಸ್ ಪಾತ್ರವಾಯಿತು. 
101* vs ಶ್ರೀಲಂಕಾ, 2021
83* vs ಭಾರತ, 2021
77* vs ಆಸ್ಟ್ರೇಲಿಯಾ, 2020
73* vs ಶ್ರೀಲಂಕಾ, 2016
71* vs ಆಸ್ಟ್ರೇಲಿಯಾ, 2021

ಮಾರ್ಗನ್ 40 ರನ್ ಸಿಡಿಸಿ ಔಟಾದರು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಬಟ್ಲರ್ ಅಜೇಯ 101 ರನ್ ಸಿಡಿಸಿದರು. ಈ ಮೂಲಕ ಇಂಗ್ಲೆಂಡ್ 4 ವಿಕೆಟ್ ನಷ್ಟಕ್ಕೆ 163 ರನ್ ಸಿಡಿಸಿತು. 

ಅಂಕಪಟ್ಟಿ:
ಮೊದಲ ಗುಂಪಿನಲ್ಲಿರುವ ಇಂಗ್ಲೆಂಡ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಶ್ರೀಲಂಕಾ 4ನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ತಂಡ 3 ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಹೀಗಾಗಿ 6 ಅಂಕಗಳನ್ನು ಪಡೆದುಕೊಂಡಿದೆ. ಶ್ರೀಲಂಕಾ ತಂಡ 2 ಸೋಲು ಹಾಗೂ 1 ಗೆಲುವು ತಂಡಿದೆ. ಈ  ಮೂಲಕ 4ನೇ ಸ್ಥಾನ ಅಲಂಕರಿಸಿದೆ. ಇನ್ನು ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಲಾ ಎರಡೆರಡು ಗೆಲುವು ಕಂಡಿದೆ. ಸೌತ್ ಆಫ್ರಿಕಾ 2 ಹಾಗೂ ಆಸ್ಟ್ರೇಲಿಯಾ 3ನೇ ಸ್ಥಾನದಲ್ಲಿದೆ. 

ವೆಸ್ಟ್ ಇಂಡೀಸ್ ತಂಡ 3ರಲ್ಲಿ 1 ಗೆಲುವು ಕಂಡಿದೆ. ಈ ಮೂಲಕ 5ನೇ ಸ್ಥಾನದಲ್ಲಿದೆ. ಇತ್ತ ಬಾಂಗ್ಲಾದೇಶ ಮೂರರಲ್ಲೂ ಸೋಲು ಅನುಭವಿಸುವ ಮೂಲಕ ಟೂರ್ನಿಯಿಂದ ಬಹುತೇಕ ನಿರ್ಗಮಿಸಿದೆ. ಇತ್ತ ವೆಸ್ಟ್ ಇಂಡೀಸ್ ಪರಿಸ್ಥಿತಿಯೂ ಬಾಂಗ್ಲಾಕ್ಕಿಂತ ಭಿನ್ನವಾಗಿಲ್ಲ.

click me!