ಟಿ20 ಸರಣಿ: ಆಸ್ಪ್ರೇಲಿಯಾಕ್ಕೆ ಶ್ರೀಲಂಕಾ ಸವಾಲು!

By Web DeskFirst Published Oct 27, 2019, 11:26 AM IST
Highlights

ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿ ಇಂದಿನಿಂದ ಆರಂಭವಾಗಲಿದೆ. ಹಲವು ಕಾರಣಗಳಿಂದ ಆಸೀಸ್ ಹಾಗೂ ಲಂಕಾ ನಡುವಿನ ಸರಣಿ ಮಹತ್ವ ಪಡೆದುಕೊಂಡಿದೆ. ಈ ಸರಣಿ ವಿವರ ಇಲ್ಲಿದೆ. 

ಅಡಿಲೇಡ್‌(ಅ.27) : ಆಸ್ಪ್ರೇಲಿಯಾ ಹಾಗೂ ಶ್ರೀಲಂಕಾ ನಡುವಣ 3 ಪಂದ್ಯಗಳ ಟಿ20 ಸರಣಿ ಭಾನುವಾರದಿಂದ(ಅ.27) ಇಲ್ಲಿ ಆರಂಭವಾಗಲಿದೆ. ಅಡಿಲೇಡ್‌ನಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ. ಗಾಯದಿಂದ ಚೇತರಿಸಿಕೊಂಡಿರುವ ಆಸೀಸ್‌ ನಾಯಕ ಫಿಂಚ್‌ ತಂಡದಲ್ಲಿ ಆಡಲಿದ್ದಾರೆ. ಫಿಂಚ್‌, ಡೇವಿಡ್‌ ವಾರ್ನರ್‌ರೊಂದಿಗೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. 

ಇದನ್ನೂ ಓದಿ: ಆಸ್ಟ್ರೇಲಿಯಾ vs ಶ್ರೀಲಂಕಾ ಟಿ20 ; ವಾಟರ್ ಬಾಯ್ ಆಗಿ ಬದಲಾದ ಪ್ರಧಾನಿ!

ವೇಗಿ ಆ್ಯಂಡ್ರೂ ಟೈ, ಗಾಯಗೊಂಡಿದ್ದು ಸರಣಿಗೆ ಅಲಭ್ಯರಾಗಿದ್ದಾರೆ. ಪೂರ್ವಭ್ಯಾಸದ ವೇಳೆ ಟೈ ಗಾಯಗೊಂಡಿದ್ದಾರೆ. ಚೆಂಡು ವಿರೂಪ ಪ್ರಕರಣದಲ್ಲಿ ಒಂದು ವರ್ಷ ಶಿಕ್ಷೆಗೊಳಗಾಗಿದ್ದ ಬಳಿಕ ಸ್ಟೀವ್‌ ಸ್ಮಿತ್‌ ಹಾಗೂ ಡೇವಿಡ್‌ ವಾರ್ನರ್‌ ಚುಟುಕು ಸರಣಿಯಲ್ಲಿ ಮೊದಲ ಬಾರಿಗೆ ಆಡುತ್ತಿದ್ದಾರೆ. ಅ.30 ರಂದು ಬ್ರಿಸ್ಬೇನ್‌ನಲ್ಲಿ 2ನೇ ಟಿ20, ನ.1 ರಂದು ಮೆಲ್ಬರ್ನ್‌ನಲ್ಲಿ 3ನೇ ಟಿ20 ಪಂದ್ಯ ನಡೆಯಲಿದೆ. 

ಇದನ್ನೂ ಓದಿ: ಆಸ್ಟ್ರೇಲಿಯಾ ಪ್ರಧಾನಿಯ T20 ವಿಶ್ವಕಪ್ ಮನವಿಗೆ ಸ್ಪಂದಿಸಿದ ನರೇಂದ್ರ ಮೋದಿ!

ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ನಡುವಿನ ಅಭ್ಯಾಸ ಪಂದ್ಯದಲ್ಲಿ ಆತಿಥೇಯ ತಂಡ ಗೆಲುವು ಸಾಧಿಸಿತ್ತು. ಈ ಪಂದ್ಯ ವಿಶ್ವಮಟ್ಟದಲ್ಲೇ ಸುದ್ದಿಯಾಗಿತ್ತು. ಈ ಪಂದ್ಯದ ಡ್ರಿಂಕ್ಸ್ ಬ್ರೇಕ್ ವೇಳೆ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಆಸೀಸ್ ಕ್ರಿಕೆಟಿಗರಿಗೆ ನೀರು ಸರಬರಾಜು ಮಾಡಿದ್ದರು. 

ಈ ಪಂದ್ಯದ ಬಳಿಕ 2020ರಲ್ಲಿ ಟಿ20 ವಿಶ್ವಕಪ್ ಆಯೋಜಿಸುತ್ತಿರು  ಆಸ್ಟ್ರೇಲಿಯಾ ಪರ ಪ್ರಧಾನಿ ಸ್ಕಾಟ್ ಮಾರಿಸನ್ ಭಾರತೀಯರನ್ನು ಆಹ್ವಾನಿಸಿದ್ದರು. ಟ್ವಿಟರ್ ಮೂಲಕ ಭಾರತೀಯರಿಗೆ ಆಹ್ವಾನ ನೀಡಿದ್ದ ಪ್ರಧಾನಿಗೆ, ಭಾರತೀಯ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದರು. 

click me!