
ನವದೆಹಲಿ(ಅ.27): ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ದೃಷ್ಟಿಕೋನವನ್ನು ಮಾಜಿ ನಾಯಕ ಅನಿಲ್ ಕುಂಬ್ಳೆ ಬೆಂಬಲಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ಗೆ ಪ್ರೇಕ್ಷಕರನ್ನು ಕರೆತರುವುದಕ್ಕೆ ದೇಶದೆಲ್ಲೆಡೆ 5 ಪ್ರಮುಖ ಮೈದಾನಗಳನ್ನು ಗುರುತಿಸಬೇಕೆಂದು ನಾಯಕ ಕೊಹ್ಲಿ ಪ್ರಸ್ತಾಪಿಸಿದ್ದರು.
ಇದನ್ನೂ ಓದಿ: ಭಾರತದಲ್ಲಿ ಟೆಸ್ಟ್ ಪಂದ್ಯಕ್ಕೆ 5 ಕ್ರೀಡಾಂಗಣ ಸಾಕು; ವಿರಾಟ್ ಕೊಹ್ಲಿ!
ಕೊಹ್ಲಿ ಹೊಂದಿರುವ ದೃಷ್ಟಿಕೋನವನ್ನು ಕುಂಬ್ಳೆ ಬೆಂಬಲಿಸಿರು. ‘ನಾನು ಕೋಚ್ ಆಗಿದ್ದಾಗ 6 ವಿವಿಧ ಮೈದಾನಗಳಲ್ಲಿ ಟೆಸ್ಟ್ ಆಡಿದ್ದೆವು. ಆದರೆ ಇಂದೋರ್ನಲ್ಲಿ ಮಾತ್ರ ಪ್ರೇಕ್ಷಕರು ತುಂಬಿದ್ದರು. 80-90ರ ದಶಕದಲ್ಲಿ ನಿರ್ಧಿಷ್ಟಮೈದಾನಗಳಲ್ಲಿ ಟೆಸ್ಟ್ ಆಯೋಜಿಸುತ್ತಿದ್ದರು. ಹೊಸವರ್ಷಕ್ಕೆ ಕೋಲ್ಕತಾ ಟೆಸ್ಟ್, ಪೊಂಗಲ್ ಹಬ್ಬಕ್ಕೆ ಚೆನ್ನೈನಲ್ಲಿ ಟೆಸ್ಟ್ ನಡೆಯುತ್ತಿತ್ತು. ಟೆಸ್ಟ್ ಋುತು ಡೆಲ್ಲಿಯಲ್ಲಿ ಆರಂಭವಾಗಿ, ಬೆಂಗಳೂರು, ಮುಂಬೈನಲ್ಲಿ ಪಂದ್ಯಗಳು ನಡೆಯುತ್ತಿದ್ದವು’ ಎಂದು ಕುಂಬ್ಳೆ ತಿಳಿಸಿದರು.
ಇದನ್ನೂ ಓದಿ: ಅನಿಲ್ ಕುಂಬ್ಳೆ ಕೆಳಗಿಳಿಸಿದ್ದು ಕೊಹ್ಲಿ; ಸೀಕ್ರೆಟ್ ಬಿಚ್ಚಿಟ್ಟ ಬಿಸಿಸಿಐ ನಿರ್ಗಮಿತ COA!
ಸೌತ್ ಆಫ್ರಿಕಾ ವಿರುದ್ಧದ ರಾಂಚಿ ಟೆಸ್ಟ್ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ವಿದೇಶಗಳಲ್ಲಿ ಇರುವಂತೆ ಭಾರತದಲ್ಲೂ 5 ಟೆಸ್ಟ್ ಮೈದಾನವನ್ನು ಗುರುತಿಸಬೇಕು. ಈ ಮೈದಾನದಲ್ಲಿ ಮಾತ್ರ ಟೆಸ್ಟ್ ಪಂದ್ಯ ಆಡಿಸಬೇಕು ಎಂದಿದ್ದರು. ರಾಂಚಿ ಟೆಸ್ಟ್ ಪಂದ್ಯಕ್ಕೆ ಅಭಿಮಾನಿಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ 5 ಮೈದಾನಗಳನ್ನು ಗುರುತಿಸಿಲು ಕೊಹ್ಲಿ ಸೂಚಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.