
ಮೆಲ್ಬರ್ನ್(ಅ.27): ಐಸಿಸಿ ಪ್ರಸ್ತಾಪಿಸಿದ 8 ವರ್ಷಗಳ ಫ್ಯೂಚರ್ ಟೂರ್ ಪ್ರೋಗ್ರಾಮ್ (FTP) ಬಗ್ಗೆ ಕ್ರಿಕೆಟ್ ಆಸ್ಪ್ರೇಲಿಯಾ ವಿರೋಧ ವ್ಯಕ್ತಪಡಿಸಿದೆ. ಐಸಿಸಿ ಪ್ರಸ್ತಾವನೆಯಿಂದ ದ್ವಿಪಕ್ಷೀಯ ಸರಣಿಗಳು ಹಾಗೂ ಅದರ ಮಹತ್ವ ಸತ್ತುಹೋಗಲಿದೆ. ದ್ವಿಪಕ್ಷೀಯ ಟೆಸ್ಟ್ ಸರಣಿಗಳನ್ನು ಆಯೋಜಿಸದಿರಲು ಸಾಧ್ಯವಿಲ್ಲವೆಂದು ಕ್ರಿಕೆಟ್ ಆಸ್ಪ್ರೇಲಿಯಾ ತಿಳಿಸಿದೆ.
ಇದನ್ನೂ ಓದಿ: ಗಂಗೂಲಿ ಅಥವಾ ಲಕ್ಷ್ಮಣ್? ICC ಪ್ರಶ್ನೆಗೆ ಫ್ಯಾನ್ಸ್ ಉತ್ತರ!
ಕಳೆದ ತಿಂಗಳು ದುಬೈನಲ್ಲಿ ನಡೆದಿದ್ದ ಐಸಿಸಿ ಸಭೆಯಲ್ಲಿ ಬಿಸಿಸಿಐ, ಎಫ್‌ಟಿಪಿಗೆ ವಿರೋಧ ವ್ಯಕ್ತಪಡಿಸಿತ್ತು. ಮುಂದಿನ 8 ವರ್ಷಗಳಲ್ಲಿ (2023-2031) 8 ಟೂರ್ನಿಗಳ ಪ್ರಸಾರ ಹಕ್ಕು ಮಾರಾಟ ಮಾಡುವ ಪ್ರಸ್ತಾಪವನ್ನು ಐಸಿಸಿ ಸದಸ್ಯ ರಾಷ್ಟ್ರಗಳ ಮುಂದಿಟ್ಟಿತ್ತು. ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಈಗಾಗಲೇ ವಿರೋಧಿಸಿದ್ದು, ಕ್ರಿಕೆಟ್ ಆಸ್ಪ್ರೇಲಿಯಾ ಸಿಇಒ ಕೆವಿನ್ ರಾಬಟ್ಸ್‌ರ್ ಸಹ ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಗಂಗೂಲಿಗೆ BCCI ಅಧ್ಯಕ್ಷ ಪಟ್ಟ; ಕೊನೆಗೂ ಪ್ರತಿಕ್ರಿಯೆ ನೀಡಿದ ರವಿ ಶಾಸ್ತ್ರಿ!
ಬಿಸಿಸಿಐ ಹಾಗೂ ಆಸ್ಟ್ರೇಲಿಯಾ ವಿರೋಧ ವ್ಯಕ್ತಪಡಿಸಿದ ಕಾರಣ, ಐಸಿಸಿ ಮಹತ್ವದ ಯೋಜನೆಗೆ ಭಾರಿ ಹಿನ್ನಡೆಯಾಗಿದೆ. ಪ್ರಮುಖ ಕ್ರಿಕೆಟ್ ಮಂಡಳಿಗಳೇ ಹಿಂದೆ ಸರಿದಿರುವುದರಿಂದ ಐಸಿಸಿ FTP ಕಾರ್ಯಗತ ಮಾಡುವುದು ಅಸಾಧ್ಯವಾಗಿ ಪರಿಣಮಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.