2004ರ ಸುನಾಮಿ ಸೃಷ್ಟಿಸಿದ ಭೀಕರತೆಯನ್ನು ಯಾರ ಮರೆತಿಲ್ಲ. ದಕ್ಷಿಣ ಭಾರತದಲ್ಲಿ ಸುನಾಮಿ ಅಬ್ಬರಕ್ಕೆ ಸಾವಿರಕ್ಕೂ ಹೆಚ್ಚು ಕುಟುಂಬಗಳು ನಲುಗಿ ಹೋಗಿತ್ತು. ಏನಾಗುತ್ತಿದೆ ಅನ್ನುವಷ್ಟರಲ್ಲಿ ಜನ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಈ ಸುನಾಮಿ ಅಲೆಯಿಂದ ಅನಿಲ್ ಕುಂಬ್ಳೆ ಹಾಗೂ ಕುಟುಂಬ ಪಾರಾಗಿತ್ತು. ಈ ಭೀಕರತೆಯನ್ನು ಅನಿಲ್ ಕುಂಬ್ಳೆ ವಿವರಿಸಿದ್ದಾರೆ.
ಬೆಂಗಳೂರು(ಆ.03): ಅದು 2004ನೇ ಇಸವಿ. ಪ್ರಾಕೃತಿ ವಿಕೋಪಗಳಾದ ಪ್ರವಾಹ, ಬರಗಾಲ, ಭೂಕಂಪ ಸೇರಿದಂತೆ ಹಲವು ಅನಾಹುತಗಳನ್ನು ಭಾರತ ಕಂಡಿತ್ತು. ಆದರೆ ಸುನಾಮಿ ಅನ್ನೋ ರಕ್ಕಸ ಅಲೆಗಳನ್ನು ಭಾರತ ಮಾತ್ರವಲ್ಲ ಬಹುತೇಕ ರಾಷ್ಟ್ರಗಳು ಕಂಡಿರಲಿಲ್ಲ. ಎಲ್ಲವೂ ಎಂದಿನಂತೆ ನಡೆಯುತ್ತಿತ್ತು. ದಿಢೀರನೇ 100 ಅಡಿ ಎತ್ತರದಲ್ಲಿ ಸಮದ್ರ ಅಲೆಗಳು ಬಡಿದಪ್ಪಿಸಿತು. ಕ್ಷಣಾರ್ಧದಲ್ಲೇ ಜಲಾವೃತ. ಸಮುದ್ರ ತೀರಗಳು ಸಾಗರವಾಗಿತ್ತು. ಸಮುದ್ರ ಸನಿಹದಲ್ಲಿದ್ದ ಪ್ರದೇಶಗಳಿಗೆ ನೀರು ನುಗ್ಗಿ ಮನೆ ಮಠಗಳು ಕೊಚ್ಚಿ ಹೋಗಿತ್ತು. ಭೀಕರ ಸುನಾಮಿಯಿಂದ ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಅನಿಲ್ ಕುಂಬ್ಳೆ ಹಾಗೂ ಕುಟುಂಬ ಪಾರಾದ ಘಟನೆ ಮೈ ಜುಮ್ಮೆನಿಸುವಂತಿದೆ.
ಶೃಂಗೇರಿ ಶಾರದಾಂಬೆಗೆ ನಮಿಸಿದ ಸ್ಪಿನ್ ಮಾಂತ್ರಿಕ, ಸುಮಧುರ ಗಾಯಕ
ಕ್ರಿಕೆಟಿಗ ಆರ್ ಅಶ್ವಿನ್ ಜೊತೆಗಿನ ಮಾತುಕತೆಯಲ್ಲಿ ಕುಂಬ್ಳೆ ಈ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಡಿಸೆಂಬರ್ 26, 2006. ಅನಿಲ್ ಕುಂಬ್ಳೆ ಹಾಗೂ ಕುಟುಂಬ ಚೆನ್ನೈಗೆ ಪ್ರವಾಸ ತೆರಳಿತ್ತು. ಕುಂಬ್ಳೆ ಪುತ್ರ 10 ತಿಂಗಳ ಮಗುವಾಗಿದ್ದ ಕಾರಣ ಕಾರಿನಲ್ಲಿ ಪ್ರಯಾಣ ಮಾಡುವ ಬದಲು ವಿಮಾನದ ಮೂಲಕ ಚೆನ್ನೈಗೆ ತೆರಳಿದ್ದರು. ಕುಂಬ್ಳೆ, ಪತ್ನಿ ಹಾಗೂ ಮುದ್ದಾಗ ಮಗುವಿನೊಂದಿಗೆ ರಜಾದಿನವನ್ನು ಹಾಯಾಗಿ ಕಳೆದಿತ್ತು. ಚೆನ್ನೈನ ಫಿಶರ್‌ಮೆನ್ ಕೊವ್ ರೆಸಾರ್ಟ್ ಅತ್ಯಂತ ಜನಪ್ರಿಯವಾಗಿದೆ. ಕಾರಣ ಈ ರೆಸಾರ್ಟ್‌ನಲ್ಲಿ ಕುಳಿತರೆ ಸಮುದ್ರ ಕಾಣಿಸುತ್ತದೆ. ಇಷ್ಟೇ ಅಲ್ಲ ಸುಂದರ ಪ್ರಕೃತಿ ಸೌಂದರ್ಯನ್ನು ಆಸ್ವಾದಿಸುತ್ತಾ ಸಮಯ ಕಳೆಯಬಹುದು. ಹೀಗಾಗಿ ಕುಂಬ್ಳೆ ಕುಟುಂಬವೂ ಇದೇ ರೆಸಾರ್ಟ್‌ನಲ್ಲಿ ತಂಗಿತ್ತು.
ಬೆಂಗಳೂರು ಪೊಲೀಸರ ನೆರವಿಗೆ ನಿಂತ ಕ್ರಿಕೆಟಿಗ ಅನಿಲ್ ಕುಂಬ್ಳೆ
ಸಮುದ್ರ ಸೇರಿದಂತೆ ಹಲವು ತಾಣಗಳಿಗೆ ಬೇಟಿ ನೀಡಿದ್ದ ಕುಂಬ್ಳೆ ಹಾಗು ಕುಟುಂಬ ಡಿಸೆಂಬರ್ 26 ರಂದು ಬೆಂಗಳೂರಿಗೆ ವಾಪಸ್ ಆಗಲು ವಿಮಾನ ಟಿಕೆಟ್ ಬುಕ್ ಮಾಡಲಾಗಿತ್ತು. ಹಲವು ಪ್ರದೇಶಗಳನ್ನು ಸುತ್ತಾಡಿದ್ದ ಕಾರಣ ಅನಿಲ್ ಕುಂಬ್ಳೆ ಕೊಂಚ ಆಯಾಸಗೊಂಡಿದ್ದರು. 11.30ಕ್ಕೆ ವಿಮಾನವಾದ ಕಾರಣ 9.30ಕ್ಕೆ ತಂಗಿದ್ದ ರೆಸಾರ್ಟ್‌ನಿಂದ ಹೊರಡಬೇಕಿತ್ತು. ತಡವಾಗಬಾರದು ಅನ್ನೋ ಕಾರಣಕ್ಕೆ ಪತ್ನಿ ಬೆಳಂಬೆಳಗ್ಗೆ ಕುಂಬ್ಳೆಯನ್ನು ಎಚ್ಚರಿಸಿದ್ದರು.
'Big Brother'ಅನಿಲ್ ಕುಂಬ್ಳೆ ಸಹಾಯವನ್ನು ಸ್ಮರಿಸಿಕೊಂಡ ಪಾಕ್ ಸ್ಪಿನ್ ಲೆಜೆಂಡ್..!
ಪತ್ನಿ ಹಾಗೂ ಮಗುವಿನೊಂದಿಗೆ ಬೆಳಗ್ಗೆ8.30ಕ್ಕೆ ತಿಂಡಿ ತಿನ್ನಲು ರೆಸಾರ್ಟ್ ರೆಸ್ಟೋರೆಂಟ್‌ಗೆ ತೆರಳಿದೆವು. ನಾವು ತಿಂಡಿ ಮಾಡುತ್ತಿರುವ ವೇಳೆ ಭೀಕರ ಸುನಾಮಿಯ ಮೊದಲ ಅಲೆಗಳು ದಡಕ್ಕೆ ಬಡಿದಿದೆ. ನಾವು ತಂಗಿದ್ದ ಪ್ರದೇಶ ಸಮುದ್ರ ತೀರದಲ್ಲೇ ಇತ್ತು. ಹೀಗಾಗಿ ಬೆಳಗ್ಗೆ ಸಮುದ್ರ ತೀರಕ್ಕೆ ತೆರಳಿದ್ದ ಹಲವರು ಒದ್ದೆಯಾಗಿ, ಭಯದಿಂದ ವಾಪಾಸು ಬರುತ್ತಿರುವುದನ್ನು ನೋಡಿದೆ. ಆದರೆ ನಮಗೇನು ಅರ್ಥವಾಗಿಲ್ಲ. ಕಾರಣ ಎಲ್ಲೂ ಮಳೆ ಇಲ್ಲ. ಹೀಗಾಗಿ ಜನರ ಮುಖದಲ್ಲಿ ಆತಂಕವೇಕೆ ಅನ್ನೋದು ಅರ್ಥವಾಗಿರಲಿಲ್ಲ ಎಂದು ಕುಂಬ್ಳೆ ಘಟನೆಯನ್ನು ವಿವರಿಸಿದ್ದಾರೆ.
ರೆಸ್ಟೋರೆಂಟ್‌ನಿಂದ ಮರಳಿದ ನಾವು ಲಗೇಜ್ ಹಿಡಿದು ಕಾರಿನಲ್ಲಿ ಕುಳಿತೆವು. ಆಗಲೂ ನಮಗೆ ಯಾವುದರ ಅರಿವೇ ಇಲ್ಲ. ರೆಸಾರ್ಟ್‌ನಿಂದ ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಸೇತುವೆ ನಮಗೆ ಭೀಕರತೆ ಅರಿವು ನೀಡಿತ್ತು. ಆಗಲೆ ಸುನಾಮಿ ಅಲೆಗಳ ಆರ್ಭಟ ಆರಂಭಗೊಂಡಿತ್ತು. ತೀರ ಪ್ರದೇಶಗಳು ಮುಳುಗಡೆಯಾಗಿತ್ತು. ಜನರು ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಚೆನ್ನೈ ನಗರಕ್ಕೂ ನೀರು ಎಂಟ್ರಿಕೊಟ್ಟಿತು. ಸೇತುವೆ ಮುಳುಗಲು ಕೆಲವೇ ಅಡಿಗಳು ಮಾತ್ರ ಬಾಕಿ ಇತ್ತು. ನೀರಿನ ರಭಸ ನೋಡಿದಾಗ ನಮಗೆ ಭಯವಾಗಿತ್ತು ಎಂದು ಕುಂಬ್ಳೆ ಹೇಳಿದ್ದಾರೆ.
ಜನರು ರಸ್ತೆಗಳಲ್ಲಿ ಭಯದಿಂದ ಓಡುತ್ತಿದ್ದಾರೆ. ಪುಟ್ಟ ಕಂದಮ್ಮಗಳನ್ನು ಕೈಯಲ್ಲಿ ಹಿಡಿದು, ಕೈಗೆ ಸಿಕ್ಕ ವಸ್ತುಗಳನ್ನು ಹಿಡಿದು ಜನರು ಪ್ರಾಣ ಉಳಿಸಿಕೊಳ್ಳಲು ಓಡುತ್ತಿದ್ದಾರೆ. ನಾವು ಸಿನಿಮಾದಲ್ಲಿ ನೋಡುತ್ತಿದ್ದ ದೃಶ್ಯಗಳಂತೆ ಇತ್ತು. ನಮ್ಮ ಕಾರು ಚಾಲಕನಿಗೆ ಫೋನ್ ಕರೆಗಳು ಬರಲು ಆರಂಭಿಸಿತು. ನಾವು ನೀನು ಚಾಲನೆಯಲ್ಲಿ ಗಮನ ಕೊಡು ಫೋನ್‌ನತ್ತ ಗಮನ ಬೇಡ ಎಂದು ಹೇಳಿದ. ಆ ವೇಳೆ ಸರ್, ನೀರು ಬಂದಿದೆ, ಆದರೆ ಮಳೆ ಇಲ್ಲ, ಜನರು ಕೊಚ್ಚಿ ಹೋಗುತ್ತಿದ್ದಾರೆ. ಯಾವುದು ಅರ್ಥವಾಗುತ್ತಿಲ್ಲ ಎಂದು ಚಾಲಕ ಹೇಳಿದ ಎಂದು ಕುಂಬ್ಳೆ ಕರಾಳ ದಿನವನ್ನು ನೆನಪಿಸಿದ್ದಾರೆ.
ವಿಮಾನ ನಿಲ್ದಾಣಕ್ಕೆ ತೆರಳಿದ ಕುಂಬ್ಳೆ ಹಾಗೂ ಕುಟಂಬ ವಿಮಾನ ಏರಿ ಬೆಂಗಳೂರಿಗೆ ವಾಪಾಸ್ಸಾಯಿತು. ಮನೆಗೆ ಬಂದು ಟಿವಿ ಹಾಕಿ ನೋಡಿದಾಗಲೇ ಸುನಾಮಿ ಅಪ್ಪಳಿಸಿದ ಅನ್ನೋ ಸುದ್ದಿ ತಿಳಿಯಿತು ಎಂದು ಕುಂಬ್ಳೆ ಹೇಳಿದ್ದಾರೆ. ಬೆಂಗಳೂರಿಗೆ ಮರಳಿ ಬರುವ ವಿಮಾನ ಸಮಯ ವಿಳಂಬವಾಗಿದ್ದರೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿತ್ತು. ಅನಿಲ್ ಕುಂಬ್ಳೆ ಕೂಡ ಸುನಾಮಿ ಅಲೆಯಿಂದ ಪಾರಾಗಿದ್ದಾರೆ ಅನ್ನೋ ವಿಚಾರ ಬಹುತೇಕರಿಗೆ ತಿಳಿದಿರಲಿಲ್ಲ. ಇದೀಗ ಅಶ್ವಿನ್ ಜೊತೆಗಿನ ಸಂಭಾಷಣೆಯಲ್ಲಿ ಕುಂಬ್ಳೆ ಈ ಘಟನೆ ವಿವರಿಸಿದ್ದಾರೆ.