ವಿದೇಶಿ ಟಿ20 ಲೀಗ್ ಮೂಲಕ ಕ್ರಿಕೆಟ್‌ಗೆ ಮರಳಲು ಸಜ್ಜಾದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ..!

By Kannadaprabha NewsFirst Published Aug 2, 2020, 4:55 PM IST
Highlights

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿದೇಶಿ ಟೂರ್ನಿಯೊಂದರಲ್ಲಿ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇನ್ನು ಫುಟ್ಬಾಲ್ ಲೋಕದ ದಂತಕಥೆ ಲಿಯೋನೆಲ್ ಮೆಸ್ಸಿಗೆ ಇಟ​ಲಿ​ಯನ್‌ ಲೀಗ್‌ ಭರ್ಜರಿ ಆಫರ್ ನೀಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವ​ದೆ​ಹ​ಲಿ(ಆ.02): ಭಾರ​ತದ ಮಾಜಿ ಆಲ್ರೌಂಡರ್‌ ಇರ್ಫಾನ್‌ ಪಠಾಣ್‌, ಇದೇ ತಿಂಗಳು 28ರಿಂದ ಆರಂಭ​ಗೊ​ಳ್ಳ​ಲಿ​ರುವ ಉದ್ಘಾ​ಟನಾ ಆವೃ​ತ್ತಿಯ ಲಂಕಾ ಪ್ರೀಮಿ​ಯರ್‌ ಲೀಗ್‌(ಎಲ್‌ಪಿಎಲ್‌) ಟಿ20 ಲೀಗ್‌ನಲ್ಲಿ ಪಾಲ್ಗೊ​ಳ್ಳುವ ಸಾಧ್ಯತೆ ಇದೆ. 

ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಆಡಲು 70 ವಿದೇಶಿ ಆಟ​ಗಾ​ರರು ಆಸಕ್ತಿ ತೋರಿದ್ದು, ಇದ​ರಲ್ಲಿ ಪಠಾಣ್‌ ಸೇರಿ​ದಂತೆ ಕೆಲ ಭಾರ​ತೀಯ ಆಟ​ಗಾ​ರ​ರೂ ಇದ್ದಾರೆ ಎನ್ನ​ಲಾ​ಗದೆ. ಇದೇ ವರ್ಷ ಜನ​ವ​ರಿ​ಯಲ್ಲಿ ಪಠಾಣ್‌ ಅಂತಾ​ರಾ​ಷ್ಟ್ರೀಯ, ದೇಸಿ ಕ್ರಿಕೆಟ್‌ ಹಾಗೂ ಐಪಿ​ಎಲ್‌ನಿಂದ ನಿವೃತ್ತಿ ಪಡೆ​ದಿ​ದ್ದರು. ಭಾರ​ತೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಆಟ​ಗಾ​ರ​ರಿಗೆ, ವಿದೇಶಿ ಲೀಗ್‌ಗಳಲ್ಲಿ ಆಡಲು ಬಿಸಿ​ಸಿಐ ಅನು​ಮತಿ ನೀಡ​ಲಿದೆ.

ಐಪಿಎಲ್ 2020‌: ಫ್ರಾಂಚೈ​ಸಿ​ಗಳ ಮುಂದೆ ಎದುರಾಗಿವೆ ಹಲವು ಸವಾ​ಲು..!

ಇಟಲಿ ಕ್ಲಬ್‌ನಿಂದ ಮೆಸ್ಸಿ​ಗೆ 2300 ಕೋಟಿ ಆಫರ್‌?

ಮಿಲಾನ್‌: ಅರ್ಜೆಂಟೀನಾ ಹಾಗೂ ಬಾರ್ಸಿ​ಲೋ​ನಾದ ತಾರಾ ಫುಟ್ಬಾ​ಲಿಗ ಲಿಯೋ​ನೆಲ್‌ ಮೆಸ್ಸಿ, ಸದ್ಯ​ದಲ್ಲೇ ಸ್ಪ್ಯಾನಿಶ್‌ ಲೀಗ್‌ ತೊರೆದು ಇಟ​ಲಿ​ಯನ್‌ ಲೀಗ್‌ಗೆ ಸೇರ್ಪಡೆಗೊಳ್ಳುವ ಸಾಧ್ಯ​ತೆ ಇದೆ. 

ಇಟ​ಲಿಯ ಇಂಟರ್‌ ಮಿಲಾನ್‌ ಫುಟ್ಬಾಲ್‌ ಕ್ಲಬ್‌, ಮೆಸ್ಸಿಗೆ 4 ವರ್ಷದ ಅವ​ಧಿಗೆ ಬರೋ​ಬ್ಬರಿ 2300 ಕೋಟಿ ರುಪಾಯಿ (235 ಮಿಲಿ​ಯನ್‌ ಪೌಂಡ್‌) ಒಪ್ಪಂದದ ಪ್ರಸ್ತಾ​ಪ​ವಿ​ರಿ​ಸಿದೆ ಎಂದು ಬ್ರಿಟನ್‌ನ ಪ್ರತಿ​ಷ್ಠಿತ ಪತ್ರಿಕೆ ‘ದಿ ಸನ್‌’ ವರದಿ ಮಾಡಿದೆ. ಅಂದರೆ ಮೆಸ್ಸಿ ವರ್ಷಕ್ಕೆ 500 ಕೋಟಿ ರುಪಾಯಿ (60 ಮಿಲಿ​ಯನ್‌ ಪೌಂಡ್‌)ಗೂ ಹೆಚ್ಚು ಸಂಪಾ​ದಿ​ಸ​ಲಿ​ದ್ದಾರೆ. ಇದ​ರೊಂದಿಗೆ ಲೀಗ್‌ನಲ್ಲಿ ಅತಿ​ಹೆಚ್ಚು ಸಂಭಾ​ವನೆ ಪಡೆ​ಯ​ಲಿ​ರುವ ಆಟ​ಗಾರ ಎನಿ​ಸಿ​ಕೊ​ಳ್ಳ​ಲಿ​ದ್ದಾರೆ.
ಯುವೆಂಟುಸ್‌ ತಂಡ​, ಕ್ರಿಸ್ಟಿ​ಯಾನೋ ರೊನಾಲ್ಡೋಗೆ ವಾರ್ಷಿಕ 267 ಕೋಟಿ ರು. (27.3 ಮಿಲಿ​ಯನ್‌ ಪೌಂಡ್‌) ಸಂಭಾ​ವನೆ ನೀಡುತ್ತಿದೆ.
 

click me!