ಐಪಿಎಲ್‌ಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್, ಪಂದ್ಯದ ಸಮಯ ಚೇಂಜ್...!

By Suvarna News  |  First Published Aug 2, 2020, 10:37 PM IST

ಕೊರೋನಾ ನಡುವೆಯೂ ಐಪಿಎಲ್‌ ವೀಕ್ಷಣೆಗೆ ಕಾತರದಿಂದ ಕಾಯುತ್ತಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿಸುದ್ದಿ. ಐಪಿಎಲ್ ಆರಂಭಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಅಲ್ಲದೇ ಪಂದ್ಯದ ಸಮಯ ಮತ್ತು ಫೈನಲ್ ಪಂದ್ಯದ ದಿನಾಂಕ ಬದಲಾವಣೆಯಾಗಿದೆ.


ನವದೆಹಲಿ, (ಆ.02): ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 13 ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ನಡೆಸುವುದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಐಪಿಎಲ್​ 13ನೇ ಆವೃತ್ತಿಯನ್ನು ಸೆಪ್ಟೆಂಬರ್​ 19ರಿಂದ ಯುಎಇಯಲ್ಲಿ ಆಯೋಜಿಸುವ ಬಿಸಿಸಿಐ ಯೋಜನೆಗೆ ಕೇಂದ್ರ ಸರ್ಕಾರ ಇಂದು (ಭಾನುವಾರ) ಗ್ರೀನ್ ಸಿಗ್ನಲ್ ನೀಡಿದೆ.

Latest Videos

ಐಪಿಎಲ್ 2020‌: ಫ್ರಾಂಚೈ​ಸಿ​ಗಳ ಮುಂದೆ ಎದುರಾಗಿವೆ ಹಲವು ಸವಾ​ಲು..!

ಮತ್ತೊಂದೆಡೆ ಯುಎಇಯಲ್ಲಿ ನಡೆಯಲಿರುವ 2020ನೇ ಐಪಿಎಲ್‌ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಇಂದು (ಭಾನುವಾರ)  ಆಡಳಿತ ಮಂಡಳಿ ಸಭೆ ನಡೆಸಿದ್ದು, ಸಭೆಲ್ಲಿ ಕೆಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿದೆ.

ಸಭೆಯ ನಿರ್ಣಯಗಳು
* ಪಂದ್ಯಗಳು ರಾತ್ರಿ 8 ಗಂಟೆ ಬದಲಾಗಿ ರಾತ್ರಿ 7.30ಕ್ಕೆ ಆರಂಭಗೊಳ್ಳಲಿವೆ.
* ಟೂರ್ನಿಯ ಫೈನಲ್​ ಪಂದ್ಯ ನವೆಂಬರ್​ 8ರ ಬದಲಾಗಿ ನ.10ರಂದು ನಡೆಯಲಿದೆ.
* ಪ್ರತಿ ತಂಡಕ್ಕೆ ಯುಎಇಗೆ ತಲಾ 24 ಆಟಗಾರರನ್ನು ಕರೆದೊಯ್ಯಲು ಅವಕಾಶ ನೀಡಲಾಗಿದೆ. 
* ಪ್ರತಿ ತಂಡಕ್ಕೆ ಯುಎಇಗೆ ತಲಾ 24 ಆಟಗಾರರನ್ನು ಕರೆದೊಯ್ಯಲು ಅವಕಾಶ ನೀಡಲಾಗಿದೆ 
* ಅಕಸ್ಮಾತ್‌ ಪಂದ್ಯದ ವೇಳೆ ಆ ದಿನದ ಪ್ಲೇಯಿಂಗ್ 11 ತಂಡದಲ್ಲಿರುವ ಆಟಗಾರನಲ್ಲಿ ಕೋವಿಡ್ 19 ಪಾಸಿಟಿವ್‌ ದೃಢಪಟ್ಟಲ್ಲಿ ಬದಲಿ ಆಟಗಾರನನ್ನು ಆಡಿಸುವ ನಿರ್ಧಾರಕ್ಕೆ ಬರಲಾಯಿತು.
* ಆಟಗಾರರೆಲ್ಲ ಪ್ರತ್ಯೇಕ ಖಾಸಗಿ ವಿಮಾನಗಳಲ್ಲಿ ಆ. 26ರೊಳಗೆ ಯುಎಇ ತಲುಪಬೇಕಿದೆ.

click me!