ಪತ್ನಿ ಸಾನಿಯಾ ಮಿರ್ಜಾಳಿಂದ ಶೋಯೆಬ್ ಮಲಿಕ್ ದೂರವಾಗಿದ್ದಾರೆ ಅನ್ನೋ ಮಾತುಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಪಾಕಿಸ್ತಾನ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಭಾವುಕರಾಗಿದ್ದಾರೆ. ತಮ್ಮ ವೈಯುಕ್ತಿಕ ಬದುಕಿನ ಕೆಲ ವಿಚಾರ ಹಂತಿಕೊಂಡು ಕಣ್ಣೀರಿಟ್ಟಿದ್ದಾರೆ.
ಇಸ್ಲಾಮಾಬಾದ್(ನ.23) ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಹಾಗೂ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಮಾಧ್ಯಮಗಳಲ್ಲಿ ಈ ಕುರಿತು ಹಲವು ಸುದ್ದಿಗಳು ಹರಿದಾಡುತ್ತಿದೆ. ಇತ್ತ ಪಾಕಿಸ್ತಾನ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಲು ತಯಾರಿ ಆರಂಭಿಸಿರುವ ಶೋಯೆಬ್ ಮಲಿಕ್, ಪಾಕಿಸ್ತಾನ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಭಾವುಕರಾಗಿದ್ದಾರೆ. ತಮ್ಮ ವೈಯುಕ್ತಿಕ ಜೀವನ ವಿಚಾರಗಳನ್ನು ಹಂಚಿಕೊಂಡು ಕಣ್ಣೀರಿಟ್ಟಿದ್ದಾರೆ.
ನಿರೂಪಕ ಫಕಾರ್ ಇ ಅಲಾಮ್ ನಡೆಸಿಕೊಡುವ ಸಂದರ್ಶನ ಕಾರ್ಯಕ್ರಮದಲ್ಲಿ ಶೋಯೆಬ್ ಮಲಿಕ್ ಜೊತೆ ಮಾತುಕತೆ ನಡೆಸಲಾಗಿತ್ತು. ಸಂದರ್ಶನದಲ್ಲಿ ಶೋಯೆಬ್ ಮಲಿಕ್ ಕ್ರಿಕೆಟ್ ಹಾಗೂ ವೈಯುಕ್ತಿಕ ಬದುಕಿನ ಕುರಿತು ಮಾತನಾಡಿದ್ದಾರೆ. ತಮ್ಮ ಕ್ರಿಕೆಟ್ ಕರಿಯರ್‌ನಲ್ಲಿ ಸಹೋದರಿಯರ ನೆರವು , ತಂದೆಯ ನಿಧನ ಸೇರಿದಂತೆ ಹಲವು ವಿಚಾರ ಹಂಚಿಕೊಂಡಿದ್ದಾರೆ.
ಮಗನ ಬರ್ತ್‌ಡೇ ಜೊತೆಯಾಗಿ ಆಚರಿಸಿದ ಸಾನಿಯಾ-ಶೋಯೆಬ್, 'ಡೈವೋರ್ಸ್ ಆಗಿರೋ ಬಗ್ಗೆ ಡೌಟೇ ಇಲ್ಲ' ಎಂದ ಫ್ಯಾನ್ಸ್!
ಮನೆಯ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿತ್ತು. ಆದರೆ ನನ್ನ ಸಹೋದರಿಯರು ನನ್ನ ಕ್ರಿಕೆಟ್‌ಗೆ ಆರ್ಥಿಕ ನೆರವು ನೀಡಿದರು. ನನ್ನ ಕ್ರಿಕೆಟ್ ಜೊತೆ ಮನೆಯ ಆರ್ಥಿಕ ಸ್ಥಿತಿಗತಿಯನ್ನು ನೋಡಿಕೊಳ್ಳುತ್ತಿದ್ದರು ಎಂದು ಭಾವುಕರಾಗಿದ್ದಾರೆ. ಬಳಿಕ ತಂದೆಯ ನಿಧನ ಕುರಿತು ಮಾತನಾಡಿದ ಶೋಯೆಬ್ ಮಲಿಕ್ ಕಣ್ಮೀರಿಟ್ಟಿದ್ದಾರೆ.
ನನ್ನ ತಂದೆಗೆ ನನ್ನನ್ನು ಕ್ರಿಕೆಟಿಗನಾಗಿ ನೋಡುವ ಆಸೆ ಇತ್ತು. ಪಾಕಿಸ್ತಾನದಲ್ಲಿ ಭಾರತ ವಿರುದ್ದ ಸರಣಿ ನಡೆಯುತ್ತಿತ್ತು. ಈ ವೇಳೆ ತಂದೆ ಆಸ್ಪತ್ರೆ ದಾಖಲಾಗಿದ್ದರು. ನನ್ನ ಆರೋಗ್ಯದ ಕುರಿತು ಚಿಂತೆ ಬೇಡ, ನೀನು ಪಾಕಿಸ್ತಾನ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಬೇಕು ಎಂದಿದ್ದರು. ತಂದೆಯ ನೆನೆದು ಶೋಯೆಬ್ ಮಲಿಕ್ ಭಾವುಕರಾಗಿದ್ದಾರೆ.
ಇದೇ ಸಂದರ್ಶನದಲ್ಲಿ ಫ್ಯಾಮಿಲಿ ಲೈಫ್ ಕುರಿತು ಪ್ರಶ್ನೆಗಳನ್ನು ಕೇಳಲಾಗಿತ್ತು. ಮಗನನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೀರಿ ಎಂಬ ಪ್ರಶ್ನೆಗೆ ಮಲಿಕ್, ನಾನು ಕ್ರಿಕೆಟ್‌ಗಾಗಿ ಪ್ರವಾಸ ಮಾಡುತ್ತೇನೆ. ಹೀಗಾಗಿ ಮಗನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಆದರೆ ಪ್ರತಿ ದಿನ ವಿಡಿಯೋ ಕಾಲ್ ಮೂಲಕ ಮಾತನಾಡುತ್ತೇನೆ ಎಂದಿದ್ದಾರೆ. ಈ ವೇಳೆ ಸಾನಿಯಾ ಮಿರ್ಜಾ ಕುರಿತು ಯಾವುದೇ ಮಾತುಗಳನ್ನಾಡಿಲ್ಲ. ಇಷ್ಟೇ ಅಲ್ಲ ದಾಂಪತ್ಯದ ಕುರಿತು ಯಾವುದೇ ಹೇಳಿಕೆ ನೀಡಿಲ್ಲ.
ಶೋಯೆಬ್ ಮಲಿಕ್ - ಸಾನಿಯಾ ಮಿರ್ಜಾ ಡಿವೋರ್ಸ್? ಇನ್‌ಸ್ಟಾ ಬಯೋದಲ್ಲಿ ಪತ್ನಿ ಹೆಸರು ಕೈಬಿಟ್ಟ ಪಾಕ್ ಕ್ರೆಕಿಟಿಗ
ಶೋಯೆಬ್ ಮಲಿಕ್ ಹಾಗೂ ಸಾನಿಯಾ ಮಿರ್ಜಾ ಡಿವೋರ್ಸ್ ಸುದ್ದಿ ಹಲವು ಬಾರಿ ಮಾಧ್ಯಮದಲ್ಲಿ ಹರಿದಾಡಿದೆ. ಇದರ ಬೆನ್ನಲ್ಲೇ ಇತ್ತೀಚೆಗಷ್ಟೇ ಶೋಯೆಬ್ ಮಲಿಕ್ ಹಾಗೂ ಸಾನಿಯಾ ಮಿರ್ಜಾ ತಮ್ಮ ಪುತ್ರನ ಹುಟ್ಟು ಹಬ್ಬ ದಿನಾಚರಣೆಯಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಆದರೆ ಫೋಟೋದಲ್ಲಿ ಇವರಿಬ್ಬರು ಅನ್ಯೋನ್ಯವಾಗಿಲ್ಲ ಅನ್ನೋ ಮಾತುಗಳು ಕೇಳಿಬಂದಿತ್ತು.