ಲಂಕಾ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌: ಕ್ರಿಕೆಟಿಗರಿಗೆ ಕೊರೋನಾ ರಿಪೋರ್ಟ್ ನೆಗೆಟಿವ್‌

By Suvarna NewsFirst Published Jul 12, 2021, 11:43 AM IST
Highlights

* ಶ್ರೀಲಂಕಾ ಕ್ರಿಕೆಟ್ ಪಾಳಯದಿಂದ ಗುಡ್‌ ನ್ಯೂಸ್‌

* RT PCR ಟೆಸ್ಟ್‌ನಲ್ಲಿ ಲಂಕಾ ಆಟಗಾರರ ಕೋವಿಡ್ ರಿಪೋರ್ಟ್ ನೆಗೆಟಿವ್ 

* ಜುಲೈ 18ರಿಂದ ಆರಂಭಗೊಳ್ಳಬೇಕಿರುವ ಏಕದಿನ ಸರಣಿಗೆ ಯಾವುದೇ ಅಡ್ಡಿಯಿಲ್ಲ

ಕೊಲಂಬೊ(ಜು.12): ಭಾರತ-ಶ್ರೀಲಂಕಾ ನಡುವಿನ ಇದ್ದ ಅಡೆ ತಡೆಗಳು ದೂರಾದಂತಿವೆ. ಲಂಕಾದ ಮುಖ್ಯ ತಂಡದಲ್ಲಿರುವ ಕುಸಾಲ್‌ ಪೆರೇರಾ, ದುಶ್ಮಾಂತ ಚಮೀರಾ, ಧನಂಜಯ ಡಿ ಸಿಲ್ವಾ ಸೇರಿದಂತೆ ಶ್ರೀಲಂಕಾ ಕ್ರಿಕೆಟ್ ತಂಡದ ಎಲ್ಲಾ ಆಟಗಾರರ ಕೋವಿಡ್‌ ಪರೀಕ್ಷಾ ವರದಿ ನೆಗೆಟಿವ್‌ ಬಂದಿದೆ.

ಎಲ್ಲಾ ಆಟಗಾರರು ಸೋಮವಾರ ಬಯೋ ಬಬಲ್‌ ಪ್ರವೇಶಿಸುವ ಸಾಧ್ಯತೆ ಇದ್ದು, ಜು.18ರಿಂದ ಆರಂಭಗೊಳ್ಳಬೇಕಿರುವ ಏಕದಿನ ಸರಣಿಗೆ ಯಾವುದೇ ಅಡ್ಡಿಯಿಲ್ಲ ಎಂದು ಲಂಕಾ ಕ್ರಿಕೆಟ್‌ ಮಂಡಳಿ ಮೂಲಗಳು ತಿಳಿಸಿವೆ. ಇಂಗ್ಲೆಂಡ್‌ನಲ್ಲಿ ಸರಣಿ ಮುಗಿಸಿಕೊಂಡು ತವರಿಗೆ ಆಗಮಿಸಿದ್ದ ಲಂಕಾ ತಂಡಕ್ಕೆ ಕೊರೋನಾಘಾತ ಎದುರಾಗಿತ್ತು. 

ಭಾರತ ಹಾಗೂ ಶ್ರೀಲಂಕಾ ನಡುವಿನ ಸೀಮಿತ ಓವರ್‌ಗಳ ಸರಣಿಯು ಜುಲೈ 13ರಿಂದಲೇ ಆರಂಭವಾಗಬೇಕಿತ್ತು. ಆದರೆ ಲಂಕಾ ಬ್ಯಾಟಿಂಗ್‌ ಕೋಚ್‌ ಗ್ರ್ಯಾಂಟ್‌ ಫ್ಲವರ್ ಹಾಗೂ ವಿಡಿಯೋ ವಿಶ್ಲೇಷಕನಿಗೆ ಸೋಂಕು ತಗುಲಿದ ಕಾರಣ, ಇಡೀ ತಂಡವನ್ನೇ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಮಾತ್ರವಲ್ಲದೇ ಸೀಮಿತ ಓವರ್‌ಗಳ ಸರಣಿಯನ್ನು ಜುಲೈ 18ಕ್ಕೆ ಮುಂದೂಡಲಾಗಿತ್ತು.

ಲಂಕಾ ತಂಡಕ್ಕೆ ಮತ್ತೊಂದು ಶಾಕ್‌; ಆಟಗಾರನೊಬ್ಬನಿಗೆ ಕೋವಿಡ್ ಪಾಸಿಟಿವ್..!

ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ ಈಗಾಗಲೇ ಶ್ರೀಲಂಕಾಗೆ ಬಂದಿಳಿದಿದ್ದು, ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸುತ್ತಿದೆ. ಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಒಟ್ಟು 6 ಸೀಮಿತ ಓವರ್‌ಗಳ ಪಂದ್ಯವನ್ನಾಡಲಿದೆ. ಮೊದಲಿಗೆ 3 ಪಂದ್ಯಗಳ ಏಕದಿನ ಸರಣಿಯು ಜುಲೈ 18ರಿಂದ ಆರಂಭವಾಗಲಿದೆ. ಇನ್ನು ಮೂರು ಪಂದ್ಯಗಳ ಟಿ20 ಸರಣಿಯು ಕ್ರಮವಾಗಿ ಜುಲೈ 25, 27 ಹಾಗೂ 29ರಂದು ನಡೆಯಲಿದೆ. ಈ ಎಲ್ಲಾ ಪಂದ್ಯಗಳಿಗೆ ಕೊಲಂಬೊದ ಆರ್‌. ಪ್ರೇಮದಾಸ ಮೈದಾನ ಆತಿಥ್ಯವನ್ನು ವಹಿಸಲಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!