2ನೇ ಮಹಿಳಾ ಟಿ20: ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ ರೋಚಕ ಜಯ

By Suvarna NewsFirst Published Jul 12, 2021, 9:23 AM IST
Highlights

* ಎರಡನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಹರ್ಮನ್‌ಪ್ರೀತ್‌ ಪಡೆಗೆ ರೋಚಕ ಜಯ

* ಸ್ಪೋಟಕ ಬ್ಯಾಟಿಂಗ್ ನಡೆಸಿದ ಶಫಾಲಿ ವರ್ಮಾ

* ಒಂದೇ ಓವರ್‌ನಲ್ಲಿ 5 ಬೌಂಡರಿ ಚಚ್ಚಿದ ಶಫಾಲಿ ವರ್ಮಾ

ಹೋವ್(ಜು.12)‌: ಸ್ಪಿನ್ನರ್‌ಗಳಾದ ಪೂನಂ ಯಾದವ್‌ ಹಾಗೂ ದೀಪ್ತಿ ಶರ್ಮಾ ಅವರ ಆಕರ್ಷಕ ಬೌಲಿಂಗ್‌ ಪ್ರದರ್ಶನದ ನೆರವಿನಿಂದ ಇಂಗ್ಲೆಂಡ್‌ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ , 8 ರನ್‌ಗಳ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-1ರಲ್ಲಿ ಸಮಬಲ ಸಾಧಿಸಿತು. 

ಶಫಾಲಿ ವರ್ಮಾ ಸ್ಫೋಟಕ ಆಟ (38 ಎಸೆತದಲ್ಲಿ 48 ರನ್‌) ನೆರವಿನಿಂದ ಭಾರತ 20 ಓವರಲ್ಲಿ 4 ವಿಕೆಟ್‌ಗೆ 148 ರನ್‌ ಗಳಿಸಿತು. ಇಂಗ್ಲೆಂಡ್‌, ಟ್ಯಾಮಿ ಬ್ಯುಯೊಮೊಂಟ್‌ರ ಅರ್ಧಶತಕದ ಹೊರತಾಗಿಯೂ ಕುಸಿತ ಕಂಡಿತು. ಕೊನೆ 36 ಎಸೆತಗಳಲ್ಲಿ ಕೇವಲ 43 ರನ್‌ ಬೇಕಿತ್ತು. ಆದರೂ ಇಂಗ್ಲೆಂಡ್‌ 8 ವಿಕೆಟ್‌ಗೆ ಕೇವಲ 140 ರನ್‌ ಗಳಿಸಿತು.

India win by 8 runs 👊

The visitors mount a stunning comeback in the second T20I to level the series 1-1!
| https://t.co/ekQqayb1a6 pic.twitter.com/uZ47QZNgti

— ICC (@ICC)

ಇದೀಗ ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯವು ಜುಲೈ 14ರಂದು ಕೌಂಟಿ ಗ್ರೌಂಡ್‌ನಲ್ಲೇ ನಡೆಯಲಿದೆ. ಈಗಾಗಲೇ ಏಕದಿನ ಸರಣಿಯನ್ನು ಕೈಚೆಲ್ಲಿರುವ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಚುಟುಕು ಕ್ರಿಕೆಟ್‌ ಸರಣಿಯನ್ನು ಗೆದ್ದು ಬೀಗಲು ಸಿದ್ದವಾಗಿದೆ.

ಪಂದ್ಯ ಸೋತರೂ ಅಭಿಮಾನಿಗಳ ಹೃದಯ ಗೆದ್ದ ಡಿಯೋಲ್ ಹಿಡಿದ ಅದ್ಭುತ ಕ್ಯಾಚ್‌..!

ಓವರಲ್ಲಿ 5 ಬೌಂಡರಿ ಸಿಡಿಸಿದ ಶಫಾಲಿ ವರ್ಮಾ: ಭಾರತದ ಸ್ಫೋಟಕ ಆಟಗಾರ್ತಿ ಶಫಾಲಿ ವರ್ಮಾ, ಕ್ಯಾಥರೀನ್‌ ಬ್ರಂಟ್‌ರ ಓವರ್‌ನಲ್ಲಿ ಸತತ 5 ಬೌಂಡರಿ ಬಾರಿಸಿ ಗಮನ ಸೆಳೆದರು. ಓವರ್‌ನ ಮೊದಲ ಎಸೆತದಲ್ಲಿ ಸ್ಮೃತಿ ಒಂದು ರನ್‌ ಪಡೆದು ಶಫಾಲಿಗೆ ಸ್ಟೆ್ರೖಕ್‌ ನೀಡಿದರು. ಶಫಾಲಿ 5 ಬೌಂಡರಿ ಬಾರಿಸಿ, ಕ್ರಿಕೆಟ್‌ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದರು.

ಇಂಗ್ಲೆಂಡ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಬ್ರಂಟ್‌ ಬೌಲಿಂಗ್‌ನಲ್ಲೇ ಶಫಾಲಿ ವರ್ಮಾ ಶೂನ್ಯ ಸುತ್ತಿ ಪೆವಿಲಿಯನ್‌ ಸೇರಿದ್ದರು. ಇದೀಗ ಎರಡನೇ ಪಂದ್ಯದಲ್ಲಿ  ಸತತ 5 ಬೌಂಡರಿ ಬಾರಿಸುವ ಮೊದಲ ಪಂದ್ಯದ ಶಾಕ್‌ಗೆ ಸೇಡು ತೀರಿಸಿಕೊಂಡರು. 

ಸ್ಕೋರ್‌: 
ಭಾರತ 148/4
ಇಂಗ್ಲೆಂಡ್‌ 140/8
 

click me!