ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಜಿತ್‌ ಅಗರ್ಕರ್‌ ನೇಮಕ? ಸ್ಯಾಲರಿ ಭರ್ಜರಿ ಏರಿಕೆ!

By Santosh NaikFirst Published Jun 30, 2023, 5:10 PM IST
Highlights

ಟೀಮ್‌ ಇಂಡಿಯಾ ಮಾಜಿ ಆಲ್ರೌಂಡರ್‌ ಅಜಿತ್‌ ಅಗರ್ಕರ್‌ ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷರಾಗಿ ನೇಮಕರಾಗೋದು ಬಹುತೇಕ ಖಚಿತವಾಗಿದೆ. ಮೂಲಗಳ ಪ್ರಕಾರ, ಅವರ ಸ್ಯಾಲರಿ ಕೂಡ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.
 

ಮುಂಬೈ (ಜೂ.30): ಟೀಮ್‌ ಇಂಡಿಯಾ ಮಾಜಿ ಆಲ್ರೌಂಡರ್‌ ಮುಂಬೈನ ಅಜಿತ್‌ ಅಗರ್ಕರ್‌ ರಾಷ್ಟ್ರೀಯ ಆಯ್ಕೆ ಸಮಿತಿ ಚೇರ್ಮನ್‌ ಆಗೋದು ಬಹುತೇಕ ಖಚಿತವಾಗಿದೆ. ಕಳೆದ ಫೆಬ್ರವರಿ 17 ರಂದು ನಡೆದ ಸ್ಟಿಂಗ್‌ ಆಪರೇಷನ್‌ನಲ್ಲಿ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಚೇತನ್‌ ಶರ್ಮ ರಾಜೀನಾಮೆ ನೀಡಿದ ಬೆನ್ನಲ್ಲಿಯೇ ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನ ಖಾಲಿ ಉಳಿದಿತ್ತು. ಮುಖ್ಯ ಆಯ್ಕೆಗಾರರ ವಾರ್ಷಿಕ ವೇತನವನ್ನು ಹೆಚ್ಚಿಸುವ ಭರವಸೆಯೊಂದಿಗೆ ಬಿಸಿಸಿಐ ಅಧಿಕಾರಿಗಳು ಅಗರ್ಕರ್ ಅವರನ್ನು ಸಂಪರ್ಕ ಮಾಡಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಬಿಸಿಸಿಐನ ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷನಿಗೆ ವಾರ್ಷಿಕವಾಗಿ 1 ಕೋಟಿ ರೂಪಾಯಿಯ ಪ್ಯಾಕೇಜ್‌ ನೀಡುತ್ತಿದೆ. ಇದನ್ನು ಏರಿಸುವ ಭರವಸೆ ಕೊಟ್ಟ ಬೆನ್ನಲ್ಲಿಯೇ ಅಜಿತ್‌ ಅಗರ್ಕರ್‌ ತಮ್ಮ ಹೆಸರನ್ನು ಸಲ್ಲಿಕೆ ಮಾಡಿದ್ದಾರೆ. ಎನ್ನಲಾಗಿದೆ. ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಕೆ ಮಾಡಿರುವ ಅರ್ಜಿದಾರರ ಪಟ್ಟಿಯಲ್ಲಿ ಅವರೊಬ್ಬರೇ ದೊಡ್ಡ ಹೆಸರು. ಈ ನಡುವೆ ಗುರುವಾರ ಅವರು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಸಹಾಯಕ ಕೋಚ್‌ ಸ್ಥಾನವನ್ನು ತೊರೆದಿದ್ದಾರೆ. ಕುತೂಹಲಕಾರಿಯಾಗಿ, 2020 ರಲ್ಲಿ, ಆಯ್ಕೆಗಾರರ ಹುದ್ದೆಗೆ ಅರ್ಜಿ ಸಲ್ಲಿಸಿದಾಗ ಬಿಸಿಸಿಐ ಅಗರ್ಕರ್ ಅವರನ್ನು ಆಯ್ಕೆ ಮಾಡಿರಲಿಲ್ಲ.

ಇಂಡಿಯನ್ ಎಕ್ಸ್‌ಪ್ರೆಸ್‌ ವರದಿಯ ಪ್ರಕಾರ, ಅಗರ್ಕರ್ ಅವರು ಮುಂದಿನ ಮುಖ್ಯ ಆಯ್ಕೆದಾರರಾಗಲು ಸಿದ್ಧರಾಗಿದ್ದಾರೆ, ಬಿಸಿಸಿಐ ಅವರಿಗೆ ವಾರ್ಷಿಕ ವೇತನದಲ್ಲಿ ಹೆಚ್ಚಳದ ಭರವಸೆಯನ್ನೂ ನೀಡಿದೆ.  ಅರ್ಜಿದಾರರಲ್ಲಿ ದೊಡ್ಡ ಹೆಸರುಗಳ ಕೊರತೆಯಿಂದಾಗಿ ಅಗರ್ಕರ್ ಅವರು ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ ಮತ್ತು ಮುಂಚೂಣಿಯಲ್ಲಿದ್ದಾರೆ ಎಂದು ವರದಿಯಾಗಿದೆ.

Latest Videos

ಸುಬ್ರತೋ ಬ್ಯಾನರ್ಜಿ, ಸಲೀಲ್ ಅಂಕೋಲಾ, ಶ್ರೀಧರನ್ ಶರತ್ ಮತ್ತು ಶಿವಸುಂದರ್ ದಾಸ್ ಅವರಿರುವ ಆಯ್ಕೆ ಸಮಿತಿಗೆ ಅಜಿತ್‌ ಅಗರ್ಕರ್‌ ಅಧ್ಯಕ್ಷರಾಗಲಿದ್ದಾರೆ. ಚೇತನ್‌ ಶರ್ಮಾ ಅವರ ನಿರ್ಗಮನದ ನಂತರ ಶಿವಸುಂದರ್‌ ದಾಸ್‌ ಹಂಗಾಮಿ ಮುಖ್ಯ ಆಯ್ಕೆಗಾರರಾಗಿ ಕೆಲಸ ಮಾಡಿದ್ದರು. ಆಯ್ಕೆ ಸಮಿತಿಯ ಇತರ ಸದಸ್ಯರಿಗೆ ವರ್ಷಕ್ಕೆ ತಲಾ 90 ಲಕ್ಷ ರೂಪಾಯಿ ವೇತನ ಸಿಗಲಿದೆ.

ಏಕದಿನ ವಿಶ್ವಕಪ್​ಗೂ ಮುನ್ನ ಟೀಂ ಇಂಡಿಯಾಗೆ ಮತ್ತೊಂದು ಆಘಾತ..!

ಯಾವುದೇ ದೊಡ್ಡ ಹೆಸರುಗಳನ್ನು ಆಕರ್ಷಿಸಲು ವಿಫಲವಾದ ನಂತರ ಬಿಸಿಸಿಐ ಅಧ್ಯಕ್ಷರ ವೇತನವನ್ನು ಹೆಚ್ಚಿಸಲು ನಿರ್ಧರಿಸಿದೆ ಎಂದು ವರದಿ ತಿಳಿಸಿದೆ.  ಪೋಸ್ಟ್‌ಗೆ ಅರ್ಹರಾದವರು ಸಹ ಕಾಮೆಂಟರಿ ಮತ್ತು ಸ್ಟುಡಿಯೋ ತಜ್ಞರ ಪಾತ್ರಗಳ ಮೂಲಕ ಉತ್ತಮ ಸಂಭಾವನೆ ಪಡೆಯುತ್ತಿದ್ದ ಕಾರಣ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನದಿಂದ ದೂರವಿರುತ್ತಿದ್ದರು. ಭಾರತದ ಪರವಾಗಿ 26 ಟೆಸ್ಟ್‌, 191 ಏಕದಿನ ಹಾಗೂ ನಾಲ್ಕು ಟಿ20 ಪಂದ್ಯಗಳನ್ನು ಅಜಿತ್‌ ಅಗರ್ಕರ್‌ ಆಗಿದ್ದಾರೆ. ಎಂಎಸ್‌ ಧೋನಿ ನಾಯಕತ್ವದಲ್ಲಿ ಟೀಮ್‌ ಇಂಡಿಯಾ ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್‌ ಗೆದ್ದಾಗ ಅಜಿತ್‌ ಅಗರ್ಕರ್‌ ತಂಡದ ಭಾಗವಾಗಿದ್ದರು.

ODI World Cup 2023: ಜುಲೈ 01ರಿಂದ ಏಕದಿನ ವಿಶ್ವಕಪ್ ಟಿಕೆಟ್ ಮಾರಾಟ?

click me!