ಮತ್ತೊಮ್ಮೆ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಗೆದ್ದ ಭಾರತ
ಇರಾನ್ ಮಣಿಸಿ 8ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಟೀಂ ಇಂಡಿಯಾ
ಇರಾನ್ ಎದುರು 10 ಅಂಕಗಳ ಅಂತರದ ಗೆಲುವು ಸಾಧಿಸಿದ ಇಂಡಿಯಾ
ಬೂಸಾನ್(ಜೂ.30): ಆತಿಥೇಯ ಕೊರಿಯಾ ತಂಡದ ಎದುರು ಅಮೋಘ ಪ್ರದರ್ಶನ ತೋರಿದ ಪವನ್ ಶೆರಾವತ್ ನೇತೃತ್ವದ ಕಬಡ್ಡಿ ತಂಡವು ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ದಾಖಲೆಯ 8ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕಳೆದ ಮೂರು ದಿನಗಳ ಕಾಲ ನಡೆದ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡವು 42-32 ಅಂತರದಲ್ಲಿ ಕೊರಿಯಾ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಕೊರಿಯಾದ ಬೂಸಾನ್‌ನಲ್ಲಿ ಜೂನ್ 27ರಂದು ಆರಂಭವಾಗಿತ್ತು. 6 ತಂಡಗಳು ಪಾಲ್ಗೊಂಡಿದ್ದ ಟೂರ್ನಿಯಲ್ಲಿ ಭಾರತ ಕಬಡ್ಡಿ ತಂಡವು ಅಜೇಯವಾಗಿಯೇ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. 1980ರಲ್ಲಿ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಆರಂಭಗೊಂಡಿತ್ತು. ಈ ಆವೃತ್ತಿಯೂ ಸೇರಿದಂತೆ 9 ಬಾರಿ ಈ ಟೂರ್ನಿ ಆಯೋಜನೆಗೊಂಡಿದ್ದು, ಭಾರತ 8 ಬಾರಿ ಚಾಂಪಿಯನ್ ಆಗುವ ಮೂಲಕ ಕಬಡ್ಡಿ ಸಾಮ್ರಾಟನಾಗಿ ಹೊರಹೊಮ್ಮಿದೆ.
undefined
ಗುರುವಾರ ನಡೆದ ಬಲಿಷ್ಠ ಇರಾನ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 33-28 ಅಂಕಗಳ ರೋಚಕ ಗೆಲುವು ಸಾಧಿಸಿದ ಭಾರತ, ಸತತ 4ನೇ ಪಂದ್ಯದಲ್ಲೂ ಯಶಸ್ಸು ಕಂಡು ಫೈನಲ್‌ಗೆ ಲಗ್ಗೆಯಿಟ್ಟಿತ್ತು. ಬರೋಬ್ಬರಿ 6 ವರ್ಷಗಳ ಬಳಿಕ ನಡೆದ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಹಾಲಿ ಚಾಂಪಿಯನ್ ಭಾರತ ತಂಡವು ಮೊದಲಾರ್ಧದಲ್ಲೇ ಆಕ್ರಮಣಕಾರಿ ಆಟವಾಡುವ ಮೂಲಕ ಫೈನಲ್ ಪಂದ್ಯದಲ್ಲಿ ಹಿಡಿತ ಸಾಧಿಸಿತ್ತು. ಆದರೆ ದ್ವಿತಿಯಾರ್ಧದಲ್ಲಿ ಭಾರತಕ್ಕೆ ಇರಾನ್ ತಂಡವು ತಿರುಗೇಟು ನೀಡುವತ್ತ ದಿಟ್ಟ ಹೋರಾಟ ನಡೆಸಿತು. ಹೀಗಿದ್ದೂ ಭಾರತ ತಂಡವು 10 ಅಂಕಗಳ ಅಂತರದ ಗೆಲುವು ದಾಖಲಿಸುವ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ವಿದೇಶದಲ್ಲಿ ಭಜರಂಗ್, ವಿನೇಶ್ ಅಭ್ಯಾಸಕ್ಕೆ ಕ್ರೀಡಾ ಸಚಿವಾಲಯದಿಂದ ಓಕೆ
ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತ ಕಬಡ್ಡಿ ತಂಡವು ಚಿನ್ನದ ಪದಕಕ್ಕೆ ಕೊರಳೊಡ್ಡಿದರೆ, ರನ್ನರ್ ಅಪ್ ಇರಾನ್ ತಂಡವು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು. ಇನ್ನು 5 ಪಂದ್ಯಗಳ ಪೈಕಿ 3 ಪಂದ್ಯಗಳನ್ನು ಜಯಿಸುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದ ಚೈನೀಸ್ ತೈಪೆ ತಂಡವು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿತು.
ಇನ್ನು ಭಾರತ ಕಬಡ್ಡಿ ತಂಡವು ಚಾಂಪಿಯನ್ ಆಗುತ್ತಿದ್ದಂತೆಯೇ ಕೇಂದ್ರ ಕ್ರೀಡಾಸಚಿವ ಅನುರಾಗ್ ಠಾಕೂರ್ ಟ್ವೀಟ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
CHAMPIONS FOR THE 8️⃣th TIME 🔥🔥🇮🇳 keeps the flag soaring at the 2023 Asian Championship with its utter dominance & unbeaten record on the mat!
Defending their title against formidable rivals Iran🇮🇷 with confidence is a reflection of their belief, hard work… pic.twitter.com/Lgl5nwKLNN
ಭಾರತದ ಚಾಂಪಿಯನ್ ಕಬಡ್ಡಿ ತಂಡ ಹೀಗಿದೆ:
: India reclaimed the Asian Kabaddi Championship title after beating Iran 42-32 in the final here at the Dong-Eui Institute of Technology Seokdang Cultural Center on Friday.
This was India's eighth title in the last nine editions played so far while Iran… pic.twitter.com/AYZN2KOpSh
ಪವನ್ ಶೆರಾವತ್, ಅರ್ಜುನ್ ದೇಶ್ವಾಲ್, ನವೀನ್ ಕುಮಾರ್, ಸಚಿನ್, ಅಸ್ಲಾಂ ಇನಾಂದಾರ್, ಮೋಹಿತ್ ಗೋಯತ್, ಸುನಿಲ್ ಕುಮಾರ್, ಪರ್ವೇಶ್ ಬೈನ್ಸ್‌ವಾಲ್, ನಿತಿನ್ ರಾವಲ್, ನಿತೀಶ್ ಕುಮಾರ್, ಸುರ್ಜೀತ್ ಸಿಂಗ್, ವಿಶಾಲ್ ಭಾರದ್ವಾಜ್.
ಮೀಸಲು ಆಟಗಾರರು: ವಿಜಯ್ ಮಲಿಕ್, ಶುಭಂ ಶಿಂಧೆ.