
ಅಬು ಧಾಬಿ(ನ.21): ಕ್ರಿಕೆಟ್ ಪಂದ್ಯ ಹಲವು ಕಾರಣಗಳಿಂದ ರದ್ದಾಗಿದೆ. ಮಳೆಯಿಂದ ರದ್ದು, ಮಂದ ಬೆಳಕಿನ ಕಾರಣ ರದ್ದು ಸೇರಿದಂತೆ ಕೆಲ ಕಾರಣಗಳನ್ನು ನೋಡಿದ್ದೇವೆ. ಆದರೆ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಮುದ್ರಿತ ದಾಖಲೆ ಇಲ್ಲ ಅನ್ನೋ ಕಾರಣಕ್ಕೆ ಪಂದ್ಯ ರದ್ದಾಗಿದೆ. ಈ ಮೂಲಕ ವಿಚಿತ್ರ ಕಾರಣಕ್ಕೆ ಪಂದ್ಯ ರದ್ದಾದ ಅಪಖ್ಯಾತಿಗೆ ಅಬುಧಾಬಿ ಟಿ10 ಲೀಗ್ ಪಾತ್ರವಾಗಿದೆ.
ಇದನ್ನೂ ಓದಿ: 762 ರನ್ ಟಾರ್ಗೆಟ್; ಗುರಿ ಬೆನ್ನಟ್ಟಿದ ತಂಡ ಕೇವಲ 7 ರನ್‌ಗೆ ಆಲೌಟ್!
ಡೆಕ್ಕನ್ ಗ್ಲಾಡಿಯೇಟರ್ಸ್ ಹಾಗೂ ಟೀಂ ಅಬು ಧಾಬಿ ನಡುವಿನ ಪಂದ್ಯ. ಮೊದಲು ಬ್ಯಾಟಿಂಗ್ ಮಾಡಿದ ಅಬು ಧಾಬಿ 118 ರನ್ ಸಿಡಿಸಿತ್ತು. ಈ ಗುರಿ ಬೆನ್ನಟ್ಟಿದ್ದ ಗ್ಲಾಡಿಯೇಟರ್ಸ್ 2.2 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 25 ರನ್ ಸಿಡಿಸಿತ್ತು. ಈ ವೇಳೆ ಸುರಿ ಮಳೆಯಿಂದ ಪಂದ್ಯ ತಾತ್ಕಾಲಿಕ ಸ್ಥಗಿತಗೊಂಡಿತು. ಕನಿಷ್ಠ 5 ಓವರ್ ಆಡಿದ್ದರೆ ಡಕ್ವರ್ತ್ ನಿಯಮ ಅನ್ವಯಿಸಿ ಫಲಿತಾಂಶ ನಿರ್ಧರಿಸಲಾಗುತ್ತಿತ್ತು. ಆದರೆ 2.2 ಓವರ್ ಮಾತ್ರ ಮುಕ್ತಾಯಗೊಂಡಿತ್ತು.
ಇದನ್ನೂ ಓದಿ: ವಿಂಡೀಸ್ ಸರಣಿಗೆ ಭಾರತ ತಂಡ ಪ್ರಕಟ; ಇಬ್ಬರು ಕನ್ನಡಿಗರಿಗೆ ಚಾನ್ಸ್!
ಮಳೆ ನಿಂತು ಮೈದಾನವನ್ನು ಸಜ್ಜುಗೊಳಿಸಲಾಯಿತು. ಪಂದ್ಯ ಪುನರ್ ಆರಂಭಕ್ಕೆ ರಾತ್ರಿ 9.59 ಕಟ್ ಆಫ್ ಸಮಯ ನೀಡಲಾಗಿತ್ತು. ಈ ಸಮಯದೊಳಗೆ ಪಂದ್ಯ ಪುನರ್ ಆರಂಭವಾಗಬೇಕು. ಟೂರ್ನಿ ಸಂಘಟರು ಡಕ್ವರ್ತ್ ನಿಯಮ ಅನ್ವಯಿಸಿ ಓವರ್ ಕಡಿತಗೊಳಿಸಿದರು. 5 ಓವರ್‌ಗೆ 62 ರನ್ ಟಾರ್ಗೆಟ್ ನೀಡಲಾಯಿತು.
ಇದನ್ನೂ ಓದಿ:IPLಗೆ ಮತ್ತೊಂದು ತಂಡ ಸೇರ್ಪಡೆ; 9 ಫ್ರಾಂಚೈಸಿಗಳೊಂದಿಗೆ ಚುಟುಕು ವಾರ್?
ಬ್ಯಾಟಿಂಗ್‌ಗಾಗಿ ಗ್ಲಾಡಿಯೇಟರ್ಸ್ ಬ್ಯಾಟ್ಸ್‌ಮನ್‌ಗಳು ಕ್ರೀಸಿಗಳಿದರು. ಇತ್ತ ಅಬು ಧಾಬಿ ತಂಡ ಕೂಡ ಮೈದಾನಕ್ಕಿಳಿಯಿತು. ಆದರೆ ಓವರ್ ಕಡಿತ ಹಾಗೂ ಡಕ್ವರ್ತ್ ನಿಯಮ ಅನ್ವಯಿಸಿದ ಪ್ರಿಂಟೌಟ್ ಮಿಸ್ಸಾಗಿದೆ. ಹೀಗಾಗಿ ಮೈದಾನಕ್ಕೆ ಬಂದ ಅಂಪೈರ್‌ಗಳಿಗೆ ಮುದ್ರಿತ ದಾಖಲೆ ಇಲ್ಲದೆ ಪಂದ್ಯ ಆರಂಭಿಸಲು ಸಾಧ್ಯವಿಲ್ಲ ಎಂದರು. ತಕ್ಷಣವೇ ಪ್ರೌಂಟೌಟ್ ತೆಗೆದು ಬಂದಾಗ ಪಂದ್ಯ ಪುನರ್ ಆರಂಭದ ಕಟ್ ಆಫ್ ಸಮಯ ಮುಗಿದಿತ್ತು. ಹೀಗಾಗಿ ಪಂದ್ಯವನ್ನು ರೆಫ್ರಿ ರದ್ದುಗೊಳಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.