ಬಾಂಗ್ಲಾದೇಶ ವಿರುದ್ದದ 2ನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜಾಗಿದೆ. ಕೋಲ್ಕತಾದಲ್ಲಿ ನಡೆಯಲಿರುವ ಈ ಪಂದ್ಯ ಹಗಲು ರಾತ್ರಿ ನಡಯಲಿದೆ. ಈ ಐತಿಹಾಸಿಕ ಪಂದ್ಯಕ್ಕೆ ಭಾರತ ತಂಡ ಹೇಗಿರಲಿದೆ? ಯಾರಿಗಿದೆ ಅವಕಾಶ? ಇಲ್ಲಿದೆ ವಿವರ.
ಕೋಲ್ಕತಾ(ನ.21): ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಐತಿಹಾಸಿಕ ಡೆ ಅಂಡ್ ನೈಟ್ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆಯಿಂದ(ನ.22) ಕೋಲ್ಕತಾದಲ್ಲಿ ನಡೆಯಲಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಅಧ್ಯಾಯ ಬರೆಯಲಿದೆ. ಈ ಐತಿಹಾಸಿಕ ಪಂದ್ಯ ಆಡಲು ಯಾರಿಗಿದೆ ಚಾನ್ಸ್, ಯಾರಿಗೆ ಕೊಕ್ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.
ಇದನ್ನೂ ಓದಿ: ಹಗಲು-ರಾತ್ರಿ ಟೆಸ್ಟ್ ಆರಂಭಕ್ಕೂ ಮುನ್ನ ಶುರುವಾಯ್ತು ಬಿಗ್ ಟೆನ್ಷನ್..!.
undefined
ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಸಂಭವನೀಯ ಭಾರತ ತಂಡ:
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ವೃದ್ದಿಮಾನ್ ಸಾಹ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್
ಇದನ್ನೂ ಓದಿ: ಡೇ & ನೈಟ್ ಟೆಸ್ಟ್: ಪಿಂಕ್ ಬಾಲ್ ತಯಾರಿಕೆ ಹೇಗಿದೆ? ಇಲ್ಲಿದೆ ವಿಶೇಷತೆ!
ದ್ವಿತೀಯ ಟೆಸ್ಟ್ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಕಡಿಮೆ. ಎಲ್ಲಾ ಆಟಗಾರರು ಫಿಟ್ ಆಗಿದ್ದು, ಮೊದಲ ತಂಡದಲ್ಲಿ ಕಣಕ್ಕಿಳಿದ ತಂಡವೇ ಬಹುತೇಕ ಕಣಕ್ಕಿಳಿಯಲಿದೆ.
ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕಾಗಿ ಇಡೀ ಕೋಲ್ಕತಾ ನಗರವೇ ಪಿಂಕ್ ಮಯವಾಗಿದೆ. ಕಟ್ಟಗಳ ಲೈಟ್, ಬ್ಯಾನರ್ ಎಲ್ಲವೂ ಕೂಡ ಪಿಂಕ್ ಬಣ್ಣವಾಗಿದೆ. ಐತಿಹಾಸಿಕ ಪಂದ್ಯವನ್ನು ಸ್ಮರಣೀಯವನ್ನಾಗಿಸಲು ಬಿಸಿಸಿಐ ಹಾಗೂ ಬಂಗಾಳ ಕ್ರಿಕೆಟ್ ಸಂಸ್ಛೆ ಎಲ್ಲಾ ತಯಾರಿ ಮಾಡಿಕೊಂಡಿದೆ.