ಇತಿಹಾಸ ಸೃಷ್ಟಿಸಿದ ODI ಕ್ರಿಕೆಟ್! 5000 ಪಂದ್ಯ ಮುಕ್ತಾಯದ ಬೆನ್ನಲ್ಲೇ ಹೊರಬಿತ್ತು ಟಾಪ್ 10 ಬಲಿಷ್ಠ ತಂಡಗಳ ಮಾಹಿತಿ, ಭಾರತಕ್ಕೆ ಎಷ್ಟನೇ ಸ್ಥಾನ?

Published : Aug 11, 2026, 01:34 PM IST
Indian Cricket Team

ಸಾರಾಂಶ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 5000 ಏಕದಿನ ಪಂದ್ಯಗಳು ಪೂರ್ಣಗೊಂಡಿವೆ. ಅತಿ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆ ಭಾರತದ ಹೆಸರಿನಲ್ಲಿದ್ದರೆ, ಅತಿ ಹೆಚ್ಚು ಗೆಲುವುಗಳನ್ನು ದಾಖಲಿಸಿದ ಕೀರ್ತಿ ಆಸ್ಟ್ರೇಲಿಯಾ ತಂಡಕ್ಕೆ ಸಲ್ಲುತ್ತದೆ. ಈ ಲೇಖನವು ಏಕದಿನ ಕ್ರಿಕೆಟ್‌ನ ಪ್ರಮುಖ ದಾಖಲೆಗಳು ಮತ್ತು ತಂಡಗಳ ಪ್ರದರ್ಶನದ ಸಂಪೂರ್ಣ ವಿವರಗಳನ್ನು ನೀಡುತ್ತದೆ.

ಬೆಂಗಳೂರು: ಕಳೆದ ಆಗಸ್ಟ್‌ 07ರಂದು ನಡೆದ ಸ್ಕಾಟ್ಲೆಂಡ್ ಹಾಗೂ ಕೆನಡಾ ನಡುವಿನ ಪಂದ್ಯವು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 5000ನೇ ಏಕದಿನ ಪಂದ್ಯ ಎನಿಸಿಕೊಂಡಿತು. ಈ ಪಂದ್ಯದಲ್ಲಿ ಕೆನಡಾ ಎದುರು ಸ್ಕಾಟ್ಲೆಂಡ್ ತಂಡವು 9 ರನ್‌ಗಳ ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಇದೇ ವೇಳೆ 5000 ಏಕದಿನ ಪಂದ್ಯಗಳ ಮುಕ್ತಾಯದ ಬಳಿಕ ಯಾವ ತಂಡಗಳು ಅತಿಹೆಚ್ಚು ಏಕದಿನ ಪಂದ್ಯಗಳನ್ನು ಆಡಿವೆ. ಯಾವ ತಂಡ ಅತಿಹೆಚ್ಚು ಗೆಲುವುಗಳನ್ನು ದಾಖಲಿಸಿದೆ. ಭಾರತ ಎಷ್ಟನೇ ಸ್ಥಾನದಲ್ಲಿದೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ನೋಡೋಣ ಬನ್ನಿ.

1971ರಲ್ಲಿ ಆರಂಭವಾದ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ 1971ರ ಜನವರಿಯಲ್ಲಿ ಆರಂಭವಾಯಿತು. ಕಳೆದ 55 ವರ್ಷಗಳಲ್ಲಿ ಈ ಮಾದರಿಯ ಕ್ರಿಕೆಟ್‌ನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇದುವರೆಗೂ 29 ದೇಶಗಳು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಆಡುತ್ತಾ ಬಂದಿವೆ. ಏಕದಿನ ವಿಶ್ವಕಪ್ ಟೂರ್ನಿ ಜನಪ್ರಿಯ ಕ್ರಿಕೆಟ್ ಟೂರ್ನಿಗಳಲ್ಲಿ ಒಂದು ಎನಿಸಿಕೊಂಡಿದೆ. ಭಾರತ ತಂಡವು ಎರಡು ಬಾರಿ ಐಸಿಸಿ ಏಕದಿನ ವಿಶ್ವಕಪ್ ಗೆದ್ದು ಬೀಗಿದೆ.

ಏಕದಿನ ಕ್ರಿಕೆಟ್‌ನ ಮೇಜರ್ ರೆಕಾರ್ಡ್ಸ್‌ಗಳು ಏನು?

ಐದು ಸಾವಿರ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳ ಈ ಜರ್ನಿಯಲ್ಲಿ ಹಲವು ಅಪರೂಪದ ದಾಖಲೆಗಳು ನಿರ್ಮಾಣವಾಗಿವೆ. ಅತಿಹೆಚ್ಚು ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನಾಡಿದ ತಂಡ ಯಾವುದು? ಅತಿಹೆಚ್ಚು ಏಕದಿನ ಗೆಲುವು ದಾಖಲಿಸಿದ ತಂಡ ಯಾವುದು? ಅತಿಹೆಚ್ಚು ಏಕದಿನ ಪಂದ್ಯಗಳನ್ನಾಡಿದ ಆಟಗಾರ ಯಾರು? ಅತಿಹೆಚ್ಚು ಏಕದಿನ ವಿಶ್ವಕಪ್ ಗೆದ್ದ ತಂಡ ಯಾವುದು? ಅತಿಹೆಚ್ಚು ಏಕದಿನ ಶತಕ ಸಿಡಿಸಿದ ಆಟಗಾರ ಯಾರು? ಅತಿಹೆಚ್ಚು ಏಕದಿನ ವಿಕೆಟ್ ಕಬಳಿಸಿದ ಬೌಲರ್ ಯಾರು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ತಿಳಿಯೋಣ ಬನ್ನಿ.

ಅತಿಹೆಚ್ಚು ಏಕದಿನ ಪಂದ್ಯ ಆಡಿದ, ಗೆದ್ದ ತಂಡಗಳ ಮಾಹಿತಿ:

ಅತಿಹೆಚ್ಚು ಏಕದಿನ ಪಂದ್ಯಗಳನ್ನಾಡಿದ ದಾಖಲೆ ಭಾರತದ ಹೆಸರಿನಲ್ಲಿದೆ. ಟೀಂ ಇಂಡಿಯಾ ಇದುವರೆಗೂ 1081 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿದೆ. ಇನ್ನು ಆಸ್ಟ್ರೇಲಿಯಾ 1,025 ಪಂದ್ಯಗಳನ್ನಾಡುವ ಮೂಲಕ ಎರಡನೇ ಸ್ಥಾನದಲ್ಲಿದೆ. ಭಾರತದ ಬದ್ದ ಎದುರಾಳಿ ಪಾಕಿಸ್ತಾನ 1002 ಏಕದಿನ ಪಂದ್ಯಗಳನ್ನಾಡುವ ಮೂಲಕ ಮೂರನೇ ಸ್ಥಾನದಲ್ಲಿದೆ.

ಇನ್ನು ಅತಿಹೆಚ್ಚು ಏಕದಿನ ಪಂದ್ಯಗಳನ್ನು ಗೆದ್ದ ದಾಖಲೆ ಆಸ್ಟ್ರೇಲಿಯಾ ಹೆಸರಿನಲ್ಲಿದೆ. ಕಾಂಗರೂ ಪಡೆ 1025 ಪಂದ್ಯಗಳನ್ನಾಡಿ 619 ಗೆಲುವು ಹಾಗೂ 362 ಸೋಲು ಕಾಣುವ ಮೂಲಕ ಮೊದಲ ಸ್ಥಾನದಲ್ಲಿದೆ. ಇನ್ನು ಟೀಂ ಇಂಡಿಯಾ 1081 ಪಂದ್ಯಗಳ ಪೈಕಿ 575 ಗೆಲುವು ಹಾಗೂ 452 ಸೋಲುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇನ್ನು ಪಾಕಿಸ್ತಾನ 1002 ಪಂದ್ಯಗಳನ್ನಾಡಿ 529 ಗೆಲುವು ಹಾಗೂ 443 ಪಂದ್ಯಗಳಲ್ಲಿ ಸೋಲು ಕಂಡಿದೆ.''

ಇಲ್ಲಿದೆ ಟಾಪ್ 10 ತಂಡಗಳ ಡೀಟೈಲ್ಸ್‌

1. ಆಸ್ಟ್ರೇಲಿಯಾ: 1025 ಪಂದ್ಯ; 619 ಗೆಲುವು, 362 ಸೋಲು

2. ಭಾರತ: 1081 ಪಂದ್ಯ; 575 ಗೆಲುವು, 452 ಸೋಲು

3. ಪಾಕಿಸ್ತಾನ: 1002 ಪಂದ್ಯ; 529 ಗೆಲುವು, 443 ಸೋಲು

4. ಶ್ರೀಲಂಕಾ: 945 ಪಂದ್ಯ; 436 ಗೆಲುವು, 461 ಸೋಲು

5. ವೆಸ್ಟ್ ಇಂಡೀಸ್: 904 ಪಂದ್ಯ; 431 ಗೆಲುವು, 429 ಸೋಲು

6. ನ್ಯೂಜಿಲೆಂಡ್: 858 ಪಂದ್ಯ; 402 ಗೆಲುವು, 405 ಸೋಲು

7. ಇಂಗ್ಲೆಂಡ್: 826 ಪಂದ್ಯ; 411 ಗೆಲುವು, 375 ಸೋಲು

8. ದಕ್ಷಿಣ ಆಫ್ರಿಕಾ: 698 ಪಂದ್ಯ; 421 ಗೆಲುವು, 250 ಸೋಲು

9. ಜಿಂಬಾಬ್ವೆ: 586 ಪಂದ್ಯ; 156 ಗೆಲುವು, 406 ಸೋಲು

10. ಬಾಂಗ್ಲಾದೇಶ: 467 ಪಂದ್ಯ; 170 ಗೆಲುವು, 286 ಸೋಲು.

ಏಕದಿನ ಕ್ರಿಕೆಟ್‌ನ ಮೇಜರ್ ರೆಕಾರ್ಡ್ಸ್‌:

ಅತಿಹೆಚ್ಚು ಏಕದಿನ ಪಂದ್ಯಗಳನ್ನಾಡಿದ ಆಟಗಾರ: ಸಚಿನ್ ತೆಂಡೂಲ್ಕರ್(463 ಪಂದ್ಯ)

ಅತಿಹೆಚ್ಚು ಏಕದಿನ ವಿಶ್ವಕಪ್ ಗೆದ್ದ ತಂಡ: ಆಸ್ಟ್ರೇಲಿಯಾ(6)

ಅತಿಹೆಚ್ಚು ಏಕದಿನ ಶತಕ ಸಿಡಿಸಿದ ಬ್ಯಾಟರ್: ವಿರಾಟ್ ಕೊಹ್ಲಿ(54)

ಅತಿಹೆಚ್ಚು ಏಕದಿನ ವಿಕೆಟ್ ಕಬಳಿಸಿದ ಬೌಲರ್: ಮುತ್ತಯ್ಯ ಮುರುಳೀಧರನ್(534 ವಿಕೆಟ್)

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಲಂಕಾದಲ್ಲಿ 18 ವರ್ಷ ಸೋಲದ ಭಾರತಕ್ಕೆ ಈ ಬಾರಿ ಅಗ್ನಿಪರೀಕ್ಷೆ!
ರಾತ್ರೋರಾತ್ರಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಟೀಮ್‌ ಇಂಡಿಯಾ ಮಾಜಿ ನಾಯಕ ಸೌರವ್‌ ಗಂಗೂಲಿ, ಆಗಿದ್ದೇನು?