ರಣಜಿ ಟ್ರೋಫಿ ಗೆಲುವಿಗೆ 50 ವರ್ಷ, ಚಿನ್ನಸ್ವಾಮಿ ಸ್ಟ್ಯಾಂಡ್‌ಗಳಿಗೆ ದಿಗ್ಗಜರ ಹೆಸರು ಇಡಲು ಸಿಎಂ ಪತ್ರ!

By Santosh Naik  |  First Published Apr 8, 2024, 8:05 PM IST

ಕರ್ನಾಟಕ ರಣಜಿ ಟ್ರೋಫಿ ಗೆದ್ದು 50 ವರ್ಷವಾದ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಚಿನ್ನಸ್ವಾಮಿ ಸ್ಟೇಡಿಯಂನ ಸ್ಟ್ಯಾಂಡ್‌ಗಳಿಗೆ ಕರ್ನಾಟಕದ ದಿಗ್ಗಜ ಆಟಗಾರರ ಹೆಸರನ್ನಿ ಇಡುವಂತೆ ಕೆಎಸ್‌ಸಿಎ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
 


ಬೆಂಗಳೂರು (ಏ.8): ಕರ್ನಾಟಕ ತಂಡ ಪ್ರತಿಷ್ಠಿತ ರಣಜಿ ಟ್ರೋಫಿ ಗೆದ್ದು 50 ವರ್ಷವಾದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ಪತ್ರ ಬರೆದಿರುವ ಸಿಎಂ ಸಿದ್ಧರಾಮಯ್ಯ, ಚಿನ್ನಸ್ವಾಮಿ ಸ್ಟೇಡಿಯಂನ ಸ್ಟ್ಯಾಂಡ್‌ಗಳಿಗೆ ದಿಗ್ಗಜ ಕ್ರಿಕೆಟಿಗರಾದ ಜಿ.ಆರ್. ವಿಶ್ವನಾಥ್, ಇ.ಎ.ಎಸ್. ಪ್ರಸನ್ನ ಹಾಗೂ ಬಿ.ಎಸ್. ಚಂದ್ರಶೇಖರ್ ಅವರ ಹೆಸರನ್ನು ನಾಮಕರಣ ಮಾಡುವಂತೆ ಕೋರಿ ಪತ್ರ ಬರೆದಿದ್ದಾರೆ. ಕೆಎಸ್‌ಸಿಎ ಅಧ್ಯಕ್ಷ ರಘುರಾಮ್‌ ಭಟ್‌ ಅವರಿಗೆ ಬರೆದ ಪತ್ರವನ್ನು ಸಿಎಂ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

'1974ರಲ್ಲಿ ಕರ್ನಾಟಕದ ರಣಜಿ ತಂಡವು ಮೊಟ್ಟಮೊದಲ ಬಾರಿಗೆ ರಣಜಿ ಟ್ರೋಫಿ ಜಯಿಸಿ ಇತಿಹಾಸ ನಿರ್ಮಿಸಿತ್ತು. ಕನ್ನಡಿಗರ ಈ ಸಾಧನೆಗೆ 50 ವರ್ಷಗಳು ತುಂಬುತ್ತಿರುವ ಸ್ಮರಣಾರ್ಥ ಚಿನ್ನಸ್ವಾಮಿ ಕ್ರೀಡಾಂಗಣದ ಸ್ಟ್ಯಾಂಡ್‌ಗಳಿಗೆ ಪ್ರಶಸ್ತಿ ವಿಜೇತ ರಣಜಿ ತಂಡದ ಪ್ರಮುಖ ಆಟಗಾರರಾದ ಜಿ.ಆರ್. ವಿಶ್ವನಾಥ್, ಇ.ಎ.ಎಸ್. ಪ್ರಸನ್ನ ಹಾಗೂ ಬಿ.ಎಸ್. ಚಂದ್ರಶೇಖರ್ ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ಕೋರಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾದ ರಘುರಾಮ್ ಭಟ್ ಅವರಿಗೆ ಪತ್ರ ಬರೆದಿದ್ದೇನೆ' ಎಂದು ಸಿಎಂ ಸಿದ್ಧರಾಮಯ್ಯ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

Tap to resize

Latest Videos

ಮಾರ್ಚ್‌ 29 ರಂದು ಬರಹಗಾರ ಹಾಗೂ ಇತಿಹಾಸಕಾರ ರಾಮಚಂದ್ರ ಗುಹಾ ನನಗೆ ಪತ್ರ ಬರೆದಿದ್ದು, ಇದರಲ್ಲಿ ಮಾರ್ಚ್‌ ತಿಂಗಳ ಕೊನೆಯ ವಾರ ಕರ್ನಾಟಕ ತಂಡ ಚೊಚ್ಚಲ ರಣಜಿ ಟ್ರೋಫಿ ಗೆದ್ದು 50 ವರ್ಷಗಳಾಗಿದೆ ಎಂದು ತಿಳಿಸಿದ್ದಾರೆ. ಅದಕ್ಕೂ ಮುನ್ನ 15 ವರ್ಷಗಳ ಕಾಲ ಬಾಂಬೆ ತಂಡವೇ ರಣಜಿ ಟ್ರೋಫಿ ಜಯಿಸುತ್ತಿತ್ತು.  1974ರಲ್ಲಿ ಕರ್ನಾಟಕ ತಂಡದ ಮೊಟ್ಟಮೊದಲ ರಣಜಿ ಟ್ರೋಫಿ ಗೆಲುವಿಗೆ ಕಾರಣರಾದ ಮೂವರು ದಿಗ್ಗಜ ಅಟಗಾರರಾದ ಬ್ಯಾಟ್ಸ್‌ಮನ್‌ ಜಿಆರ್‌ ವಿಶ್ವನಾಥ್‌ ಹಾಗೂ ಸ್ಪಿನ್‌ ಜೋಡಿಯಾದ ಇಎಎಸ್‌ ಪ್ರಸನ್ನ ಹಾಗೂ ಬಿಎಸ್‌ ಚಂದ್ರಶೇಖರ್‌ ಅವರಿಗೆ ಗೌರವ ನೀಡುವಂತೆ ಅಭಿಮಾನಿಗಳಿಂದ ಸಾಕಷ್ಟು ಮನವಿಗಳನ್ನು ಸಲ್ಲಿಸಲಾಗಿದೆ. ಮುಂಬೈ, ದೆಹಲಿ, ಕೋಲ್ಕತ್ತಾ ಹಾಗೂ ದೇಶದ ಇತರ ನಗರಗಳಲ್ಲಿರುವ ಪ್ರಮುಖ ಕ್ರಿಕೆಟ್‌ ಸ್ಟೇಡಿಯಂಗಳು ಆಯಾ ರಾಜ್ಯದ ದಿಗ್ಗಜ ಪ್ಲೇಯರ್‌ಗಳ ಹೆಸರುಗಳನ್ನು ಹೊಂದಿದೆ. ಆದರೆ, ಬೆಂಗಳೂರಿನಲ್ಲಿರುವ ನಮ್ಮ ಸ್ಟೇಡಿಯಂನಲ್ಲಿ ಜಿಆರ್‌ ವಿಶ್ವನಾಥ್‌, ಇಎಎಸ್‌ ಪ್ರಸನ್ನ ಹಾಗೂ ಬಿಎಸ್‌ ಚಂದ್ರಶೇಖರ್‌ ಅವರ ಹೆಸರುಗಳನ್ನು ಯಾವ ಸ್ಟ್ಯಾಂಡ್‌ಗೂ ಇಡಲಾಗಿಲ್ಲ ಎಂದು ತಿಳಿಸಿದ್ದಾರೆ. ಅದರ ಪತ್ರವನ್ನು ಇದರೊಂದಿಗೆ ಲಗತ್ತಿಸಿದ್ದೇನೆ.

ವಿರಾಟ್ ಕೊಹ್ಲಿ ಕಾಲಿಗೆ ಬಿದ್ದ ಅಭಿಮಾನಿಗೆ ಮನಸೋ ಇಚ್ಛೆ ಹಲ್ಲೆ, ಚಿಕಿತ್ಸೆ ಕೊಡಿಸುವಂತೆ ಮಾನವ ಹಕ್ಕು ಆಯೋಗಕ್ಕೆ ದೂರು

ನನ್ನ ಪ್ರಕಾರ ರಾಮಚಂದ್ರ ಗುಹಾ ಅವರು ಬರೆದಿರುವ ಪತ್ರದಲ್ಲಿ ಸಂಗತಿ ಇದೆ ಎಂದುಕೊಳ್ಳುತ್ತೇನೆ. ಹಾಗಾಗಿ ಚಿನ್ನಸ್ವಾಮಿ ಸ್ಟೇಡಿಯಂನ ಸ್ಟ್ಯಾಂಡ್‌ಗಳಿಗೆ ಜಿಆರ್‌ ವಿಶ್ವನಾಥ್‌, ಇಎಎಸ್‌ ಪ್ರಸನ್ನ ಹಾಗೂ ಬಿಎಸ್‌ ಚಂದ್ರಶೇಖರ್‌ ಅವರ  ಹೆಸರುಗಳನ್ನು ಇಡುವ ಬಗ್ಗೆ ಯೋಚಿಸುವಂತೆ ತಿಳಿಸುತ್ತೇನೆ. ಇದು ರಾಜ್ಯದ ಉದಯೋನ್ಮುಖ ಕ್ರಿಕೆಟಿಗರಿಗೆ ಇನ್ನಷ್ಟು ಸ್ಫೂರ್ತಿ ತುಂಬಲಿದೆ ಎಂದು ಸಿಎಂ ಸಿದ್ಧರಾಮಯ್ಯ ಕೆಎಸ್‌ಸಿಎ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಕೆಎಸ್‌ಸಿಎ ಇಲೆವೆನ್‌ ಪರ ಆಡಿದ ಇಂಗ್ಲೆಂಡ್‌ ವೇಗಿ ಜೋಫ್ರಾ ಆರ್ಚರ್‌

1974ರಲ್ಲಿ ಕರ್ನಾಟಕದ ರಣಜಿ ತಂಡವು ಮೊಟ್ಟಮೊದಲ ಬಾರಿಗೆ ರಣಜಿ ಟ್ರೋಫಿ ಜಯಿಸಿ ಇತಿಹಾಸ ನಿರ್ಮಿಸಿತ್ತು. ಕನ್ನಡಿಗರ ಈ ಸಾಧನೆಗೆ 50 ವರ್ಷಗಳು ತುಂಬುತ್ತಿರುವ ಸ್ಮರಣಾರ್ಥ ಚಿನ್ನಸ್ವಾಮಿ ಕ್ರೀಡಾಂಗಣದ ಸ್ಟ್ಯಾಂಡ್‌ಗಳಿಗೆ ಪ್ರಶಸ್ತಿ ವಿಜೇತ ರಣಜಿ ತಂಡದ ಪ್ರಮುಖ ಆಟಗಾರರಾದ ಜಿ.ಆರ್. ವಿಶ್ವನಾಥ್, ಇ.ಎ.ಎಸ್. ಪ್ರಸನ್ನ ಹಾಗೂ ಬಿ.ಎಸ್. ಚಂದ್ರಶೇಖರ್… pic.twitter.com/UUVCqwU05S

— Siddaramaiah (@siddaramaiah)

 

 

click me!