
ನೇಪಿಯರ್(ನ.09): ಡೇವಿಡ್ ಮಲಾನ್(103)ರ ಶತಕ ಹಾಗೂ ಇಯಾನ್ ಮೊರ್ಗನ್‌ರ ಆಕರ್ಷಕ 91 ರನ್‌ಗಳ ಆಟದ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧ 4ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ 76 ರನ್‌ಗಳ ಗೆಲುವು ಸಾಧಿಸಿತು. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 2-2ರಲ್ಲಿ ಸಮಬಲ ಸಾಧಿಸಿತು.
ಇಂಗ್ಲೆಂಡ್ ವಿರುದ್ಧ 3ನೇ ಟಿ20 ಗೆದ್ದ ಕಿವೀಸ್
ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 20 ಓವರಲ್ಲಿ 3 ವಿಕೆಟ್ ನಷ್ಟಕ್ಕೆ 241 ರನ್ ಕಲೆಹಾಕಿತು. ಒಂದು ಹಂತದಲ್ಲಿ 58 ರನ್’ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ನಾಯಕ ಮಾರ್ಗನ್ ಹಾಗೂ ಮಲಾನ್ ಆಸರೆಯಾದರು. ಈ ಜೋಡಿ ಇಂಗ್ಲೆಂಡ್ ಪರ ಟಿ20 ಕ್ರಿಕೆಟ್’ನಲ್ಲಿ [182 ರನ್] ಗರಿಷ್ಠ ರನ್’ಗಳ ಜತೆಯಾಟ ನಿಭಾಯಿಸಿತು.
48 ಎಸೆತಗಳಲ್ಲಿ ಶತಕ ಪೂರೈಸಿದ ಮಲಾನ್, 51 ಎಸೆತಗಳಲ್ಲಿ 9 ಬೌಂಡರಿ, 6 ಸಿಕ್ಸರ್‌ಗಳೊಂದಿಗೆ 103 ರನ್ ಗಳಿಸಿ ಅಜೇಯರಾಗಿ ಉಳಿದರು. 41 ಎಸೆತಗಳಲ್ಲಿ ತಲಾ 7 ಬೌಂಡರಿ, ಸಿಕ್ಸರ್‌ನೊಂದಿಗೆ ಮೊರ್ಗನ್ 91 ರನ್ ಗಳಿಸಿ ಔಟಾದರು.
ಸ್ಯಾಮ್ ಬಿಲ್ಲಿಂಗ್ಸ್ ಪರಿಸರ ಸ್ನೇಹಿ ಗ್ಲೌಸ್‌ಗೆ ಐಸಿಸಿ ನಿಷೇಧ!
ಬೃಹತ್ ಗುರಿ ಬೆನ್ನತ್ತಿದ ಕಿವೀಸ್ ಸ್ಫೋಟಕ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್’ಗೆ ಗಪ್ಟಿಲ್-ಮನ್ರೋ ಜೋಡಿ 54 ರನ್’ಗಳ ಜತೆಯಾಟ ನಿಭಾಯಿಸಿತು. ಆದರೆ ಕ್ರಿಸ್ ಜೋರ್ಡನ್[2] ಹಾಗೂ ಮ್ಯಾಥ್ಯೂ ಪಾರ್ಕಿನ್’ಸನ್[4] ಮಾರಕ ದಾಳಿಗೆ ತತ್ತರಿಸಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ಕಿವೀಸ್ ನಾಯಕ ಟಿಮ್ ಸೌಥಿ 15 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 39 ರನ್ ಬಾರಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 16.5 ಓವರಲ್ಲಿ ನ್ಯೂಜಿಲೆಂಡ್ 165 ರನ್‌ಗೆ ಆಲೌಟ್ ಆಯಿತು.
ಇದೀಗ ಐದನೇ ಹಾಗೂ ನಿರ್ಣಾಯಕ ಪಂದ್ಯವು ನವೆಂಬರ್ 10ರಂದು ಆಕ್ಲೆಂಡ್’ನ ಈಡನ್ ಪಾರ್ಕ್’ನಲ್ಲಿ ನಡೆಯಲಿದ್ದು, ಯಾರು ಸರಣಿ ವಿಜೇತರಾಗುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ದಾಖಲೆಗಳು:
241/3- ಇಂಗ್ಲೆಂಡ್ ಟಿ20 ಕ್ರಿಕೆಟ್’ನಲ್ಲಿ ದಾಖಲಿಸಿದ ಗರಿಷ್ಠ ಮೊತ್ತ.
182- ಇಂಗ್ಲೆಂಡ್ ಪರ ಟಿ20 ಕ್ರಿಕೆಟ್’ನಲ್ಲಿ ದಾಖಲಾದ ಗರಿಷ್ಠ ಜತೆಯಾಟ[ಮಾರ್ಗನ್-ಮಲಾನ್]
ವೇಗದ ಅರ್ಧಶತಕ: 21 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಇಯಾನ್ ಮಾರ್ಗನ್, ಇಂಗ್ಲೆಂಡ್ ಪರ ವೇಗವಾಗಿ 50 ಬಾರಿಸಿದ ಬ್ಯಾಟ್ಸ್’ಮನ್ ಎನಿಸಿದರು.
ವೇಗದ ಶತಕ: 48 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಡೇವಿನ್ ಮಲಾನ್, ಇಂಗ್ಲೆಂಡ್ ಪರ ಅತಿವೇಗವಾಗಿ ಶತಕ ಬಾರಿಸಿದ ಬ್ಯಾಟ್ಸ್’ಮನ್ ಎನಿಸಿದರು.
ಸ್ಕೋರ್:
ಇಂಗ್ಲೆಂಡ್ 241/3
ನ್ಯೂಜಿಲೆಂಡ್ 165/10
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.