3ನೇ ಟಿ20: ಪಾಕ್‌ ವಿರುದ್ಧ ಗೆದ್ದ ಆಸಿಸ್‌

By Web DeskFirst Published Nov 9, 2019, 11:09 AM IST
Highlights

ಐಸಿಸಿ ಟಿ20 ನಂ.1 ಶ್ರೇಯಾಂಕಿತ ಪಾಕಿಸ್ತಾನ ತಂಡ ಸತತ ಎರಡು ಸರಣಿ ಸೊಲುಂಡಿದೆ. ತವರಿನಲ್ಲಿ ಲಂಕಾ ವಿರುದ್ಧ ಟಿ20 ಸರಣಿ ಕೈಚೆಲ್ಲಿದ್ದ ಪಾಕ್, ಇದೀಗ ಆಸ್ಟ್ರೇಲಿಯಾ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಹೀನಾಯ ಸೋಲು ಕಾಣುವ ಮೂಲಕ ಮುಖಭಂಗ ಅನುಭವಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

ಪರ್ತ್[ನ.09]: ಪಾಕಿ​ಸ್ತಾನ ವಿರುದ್ಧ 3ನೇ ಹಾಗೂ ಅಂತಿಮ ಟಿ20 ಪಂದ್ಯ​ದಲ್ಲಿ 10 ವಿಕೆಟ್‌ ಗೆಲುವು ಸಾಧಿ​ಸಿದ ಆಸ್ಪ್ರೇ​ಲಿಯಾ, 3 ಪಂದ್ಯ​ಗಳ ಸರ​ಣಿ​ಯನ್ನು 2-0 ಅಂತ​ರ​ದಲ್ಲಿ ಗೆದ್ದು​ಕೊಂಡಿದೆ. ಪಿಂಚ್ ಅಜೇಯ ಅರ್ಧಶತಕ ಸಿಡಿಸಿದರೆ, ವಾರ್ನರ್ 48 ರನ್ ಬಾರಿಸಿದರು.

2ನೇ ಟಿ20: ಪಾಕಿ​ಸ್ತಾನ ವಿರುದ್ಧ ಆಸಿಸ್‌ಗೆ ಜಯ

Well played Australia 👏

They are shaping up well ahead of 'The Big Dance' next year 🕺 pic.twitter.com/1jV5ehn2ur

— ICC (@ICC)

ಶುಕ್ರ​ವಾರ ಇಲ್ಲಿ ನಡೆದ ಪಂದ್ಯ​ದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್‌ ಮಾಡಿದ ಪಾಕಿ​ಸ್ತಾನ 20 ಓವ​ರಲ್ಲಿ 8 ವಿಕೆಟ್‌ ನಷ್ಟಕ್ಕೆ 106 ರನ್‌ಗಳ ಸಾಧಾ​ರಣ ಮೊತ್ತ ಕಲೆಹಾಕಿತು. ತಂಡದ ಮೊತ್ತ 22 ರನ್ ಗಳಾಗುವಷ್ಟರಲ್ಲಿ ಮೂವರು ಪಾಕ್ ಬ್ಯಾಟ್ಸ್’ಮನ್’ಗಳು ಪೆವಿಲಿಯನ್ ಸೇರಿದ್ದರು. ಪಾಕಿಸ್ತಾನ ಪರ ಇಫ್ತೀಕರ್ ಅಹಮ್ಮದ್[45] ಹಾಗೂ ಇಮಾಮ್ ಉಲ್ ಹಕ್[14] ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್’ಮನ್’ಗಳು ಎರಡಂಕಿ ಮೊತ್ತ ದಾಖಲಿಸಲು ಸಫಲರಾಗಲಿಲ್ಲ.

ಆಸಿಸ್‌-ಪಾಕ್‌ ಮೊದಲ ಟಿ20 ಮಳೆಗೆ ಬಲಿ!

Australia win and Australia win well!

A comfortable 10-wicket victory over Pakistan secures a 2-0 series win 🏆

Aaron Finch hit 52* and David Warner 48* 🔥 pic.twitter.com/AjRyJWZcG0

— ICC (@ICC)

ಆಸ್ಟ್ರೇಲಿಯಾ ಪರ ಕೇನ್ ರಿಚರ್ಡ್’ಸನ್ 3 ವಿಕೆಟ್ ಪಡೆದರೆ, ಸೀನ್ ಅಬೋಟ್, ಮಿಚೆಲ್ ಸ್ಟಾರ್ಕ್ ತಲಾ 2 ಹಾಗೂ ಆಸ್ಟನ್ ಅಗರ್ ಒಂದು ವಿಕೆಟ್ ಪಡೆದರು.

ಸುಲಭ ಗುರಿ ಬೆನ್ನ​ತ್ತಿದ ಆಸ್ಪ್ರೇಲಿ​ಯಾಕ್ಕೆ ಡೇವಿಡ್‌ ವಾರ್ನರ್‌ (48) ಹಾಗೂ ಆ್ಯರೋನ್‌ ಫಿಂಚ್‌ (52)  ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದರು. ಕೇವಲ 11.5 ಓವರ್‌ಗಳಲ್ಲಿ ಆಸಿಸ್‌ ಗೆಲುವು ಸಾಧಿಸಿ ಸಂಭ್ರ​ಮಿ​ಸಿತು. 2019ರಲ್ಲಿ ಆಸೀಸ್‌ ಟಿ20 ಮಾದ​ರಿ​ಯಲ್ಲಿ ಅಜೇ​ಯ​ವಾಗಿ ಉಳಿ​ದಿದೆ. ಆಡಿ​ರು​ವ 8 ಪಂದ್ಯ​ಗ​ಳಲ್ಲಿ 7ರಲ್ಲಿ ಗೆದ್ದರೆ, 1 ಪಂದ್ಯದಲ್ಲಿ ಫಲಿ​ತಾಂಶ ಹೊರ​ಬಂದಿ​ರ​ಲಿಲ್ಲ.

ಸ್ಕೋರ್‌: ಪಾಕಿ​ಸ್ತಾನ 106/8

ಆಸ್ಪ್ರೇ​ಲಿಯಾ 109/0
 

click me!