ಇಂಡೋ-ಬಾಂಗ್ಲಾ ಫೈಟ್: 2ನೇ ಟಿ20ಗೆ 'ಮಹಾ' ಆತಂಕ!

By Kannadaprabha News  |  First Published Nov 5, 2019, 2:26 PM IST

ಭಾರತ-ಬಾಂಗ್ಲಾದೇಶ ನಡುವಿನ ಎರಡನೇ ಟಿ20 ಪಂದ್ಯ ನಡೆಯುವುದು ಅನುಮಾನ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೇ ಮೊದಲ ಟಿ20 ಪಂದ್ಯ ಸೋತಿರುವ ಭಾರತ, ಒಂದು ವೇಳೆ ಎರಡನೇ ಪಂದ್ಯವೂ ನಡೆಯದೇ ಹೋದರೆ, ರೋಹಿತ್ ಪಡೆಯ ಸರಣಿ ಗೆಲ್ಲುವ ಕನಸು ಭಗ್ನವಾಗಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ರಾಜ್‌ಕೋಟ್‌(ನ.05): ಧೂಳಿನ ನಡುವೆಯೇ ಮೊದಲ ಟಿ20ಯಲ್ಲಿ ಸೆಣ​ಸಿ​ದ್ದ ಭಾರತ ಹಾಗೂ ಬಾಂಗ್ಲಾ​ದೇಶ ತಂಡ​ಗಳ ನಡುವೆ ಗುರು​ವಾರ ಇಲ್ಲಿ ನಡೆ​ಯ​ಬೇ​ಕಿ​ರುವ 2ನೇ ಟಿ20 ಪಂದ್ಯ ರದ್ದಾ​ಗುವ ಸಾಧ್ಯತೆ ಇದೆ.

ರಾಜಧಾನಿಯಲ್ಲಿ ನಡೆಯಲಿಲ್ಲ ಆಟ; ಬಾಂಗ್ಲಾದೇಶ ವಿರುದ್ದ ಸೋಲು ಕಂಡ ಭಾರತ!

Latest Videos

undefined

ಮಹಾ ಚಂಡಮಾರುತ ದಿಯುನಿಂದ 580 ಕಿ.ಮೀ ಹಾಗೂ ವೆರಾ​ವಲ್‌ನಿಂದ 550 ಕಿ.ಮೀ ದೂರದಲ್ಲಿದ್ದು, ಬುಧ​ವಾರ ರಾತ್ರಿ ಇಲ್ಲವೇ ಗುರು​ವಾರ ಮುಂಜಾನೆ ದಿಯು ಹಾಗೂ ದ್ವರಕಾದ ನಡುವೆ ಅಪ್ಪ​ಳಿಸ​ಲಿದೆ ಎಂದು ಭಾರ​ತೀಯ ಹವಾ​ಮಾನ ಇಲಾಖೆ ಮುನ್ಸೂ​ಚನೆ ನೀಡಿದೆ. ಇದ​ರಿಂದಾಗಿ ಸೌರಾಷ್ಟ್ರ ಹಾಗೂ ದಕ್ಷಿಣ ಗುಜ​ರಾತ್‌ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ರನ್ ಮಷೀನ್ ವಿರಾಟ್ ಕೊಹ್ಲಿ ಬರ್ತ್ ಡೇ @31

ಹವಾ​ಮಾನ ಇಲಾಖೆ ನೀಡಿ​ರುವ ಮುನ್ಸೂ​ಚನೆಯಂತೆ ಮಳೆಯಾದರೆ ಟಿ20 ಪಂದ್ಯ ರದ್ದಾಗುವುದು ಖಚಿತ. ಭಾನು​ವಾರ ನವ​ದೆ​ಹ​ಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯ​ದಲ್ಲಿ ಸೋಲುಂಡ ಭಾರತ ತಂಡ, ಸೋಮ​ವಾರ ರಾಜ್‌ಕೋಟ್‌ಗೆ ಬಂದಿ​ಳಿ​ಯಿತು. ತಂಡದ ಅಭ್ಯಾಸಕ್ಕೂ ಮಳೆ ಅಡ್ಡಿ​ಪ​ಡಿ​ಸುವ ಸಾಧ್ಯತೆ ಇದೆ.

ಸರಣಿಯಲ್ಲಿ ಬಾಂಗ್ಲಾ​ದೇಶ 1-0 ಮುನ್ನಡೆಯಲ್ಲಿದ್ದು, ಒಂದೊಮ್ಮೆ 2ನೇ ಪಂದ್ಯ ಮಳೆಗೆ ಬಲಿ​ಯಾ​ದರೆ ಭಾರತಕ್ಕೆ ಸರಣಿ ಗೆಲ್ಲುವ ಅವ​ಕಾಶ ಕೈತ​ಪ್ಪ​ಲಿದೆ. ಭಾನು​ವಾರ 3ನೇ ಹಾಗೂ ಅಂತಿಮ ಟಿ20 ಪಂದ್ಯ ನಾಗ್ಪುರದಲ್ಲಿ ನಡೆ​ಯ​ಲಿದೆ. ಟಿ20 ಸರಣಿ ಬಳಿಕ ಭಾರತ ಹಾಗೂ ಬಾಂಗ್ಲಾ​ದೇಶ ತಂಡ​ಗಳು 2 ಪಂದ್ಯ​ಗಳ ಟೆಸ್ಟ್‌ ಸರ​ಣಿ​ಯಲ್ಲಿ ಮುಖಾ​ಮುಖಿ​ಯಾ​ಗ​ಲಿ​ವೆ. ಸರ​ಣಿಯ 2ನೇ ಪಂದ್ಯ ಕೋಲ್ಕ​ತಾ​ದಲ್ಲಿ ನಡೆ​ಯ​ಲಿದ್ದು, ಹಗ​ಲು-ರಾತ್ರಿ ಟೆಸ್ಟ್‌ ಆಗಿ​ರ​ಲಿದೆ.

 

click me!